ETV Bharat / state

ಪ್ರಶ್ನಿಸಿದ್ದಕ್ಕೆ ಸಬ್ ​ಇನ್ಸ್​ಪೆಕ್ಟರ್​ ಮೇಲೆಯೇ ಕಾರು ಹತ್ತಿಸಿ ತೀವ್ರವಾಗಿ ಗಾಯಗೊಳಿಸಿದ ಯುವಕ: ದೂರು ದಾಖಲು - ಜ್ಞಾನಭಾರತಿ‌ ಪೊಲೀಸ್ ಠಾಣೆ

ಹಾಡಹಾಗಲೇ ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಯುವಜೋಡಿಯನ್ನು ಪ್ರಶ್ನಿಸಿದ್ದಕ್ಕೆ ಯುವಕನು ಸಬ್ ​ಇನ್ಸ್​ಪೆಕ್ಟರ್ ಮೇಲೆ ಕಾರು ಹತ್ತಿಸಿ ತೀವ್ರ ಗಾಯಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ್ಞಾನಭಾರತಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Reserve Sub Inspector Mahesh
ರಿಸರ್ವ್ ಸಬ್​​ಇನ್ ಸ್ಪೆಕ್ಟರ್ ಮಹೇಶ್
author img

By ETV Bharat Karnataka Team

Published : Jan 24, 2024, 10:09 PM IST

ಬೆಂಗಳೂರು: ಹಾಡಹಾಗಲೇ ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಯುವ ಜೋಡಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ಯುವಕ ಸಬ್ ​ಇನ್ಸ್​ಪೆಕ್ಟರ್ ಮೇಲೆ ಕಾರು ಹತ್ತಿಸಿರುವ ಘಟನೆ ಜ್ಞಾನಭಾರತಿ‌ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ.

ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ (ಆರ್​ಎಸ್ಐ) ಮಹೇಶ್ ಎಂಬುವರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಹೇಶ್ ಅವರಿಂದ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

ಜನವರಿ 20ರಂದು ಜ್ಞಾನ ಭಾರತಿ ಉಪಕಾರ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಕಂಡು ಬಂದ ಕಾರಿನ ನೋಂದಣಿ ಸಂಖ್ಯೆ ಆಧಾರದ‌ ಮೇಲೆ ಆರೋಪಿ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಯುವ ಜೋಡಿ ವಿರುದ್ಧ ಅಸಮಾಧಾನ: ನಾಲ್ಕು ವರ್ಷಗಳಿಂದ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಆಗಿ ಮಹೇಶ್ ಸೇವೆ ಸಲ್ಲಿಸುತ್ತಿದ್ದು, ಜನವರಿ 20ರ ಮಧ್ಯಾಹ್ನ ಊಟ‌ ಮುಗಿಸಿಕೊಂಡು ವಾಕ್ ಮಾಡಲು ಪಾರ್ಕ್ ಬಳಿ ಬರುವಾಗ ಎಡಬದಿಯಲ್ಲಿ ನಿಂತಿದ್ದ ಕಾರಿನಲ್ಲಿ ಯುವ ಜೋಡಿ ಸರಸದಲ್ಲಿ ಮಗ್ನರಾಗಿರುವುದು ಕಂಡು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ರಸ್ತೆಯಲ್ಲಿ ನಿತ್ಯ ನೂರಾರು ಮಂದಿ ಪಾರ್ಕ್​ನಲ್ಲಿ ವಾಯುವಿಹಾರ ಮಾಡಲಿದ್ದು, ಈ ವಿಚಾರವಾಗಿ ತಿಳಿ ಹೇಳಲು ಮುಂದಾದಾಗ ಕಾರಿನಲ್ಲಿದ್ದ ಯುವಕ ಡ್ರೈವಿಂಗ್ ಸೀಟ್ ಮೇಲೆ ಕುಳಿತು ಏಕಾಏಕಿ ಕಾರು ಚಾಲನೆ ಮಾಡಿದ್ದಾನೆ. ಕಾರಿನ ಮುಂಭಾಗದಲ್ಲಿದ್ದ ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮಹೇಶ್ ಮೇಲೆ ಏಕಾಏಕಿ ಕಾರು ಚಲಾಯಿಸಿದ್ದರಿಂದ ಆತಂಕಗೊಂಡು ಬಾನೆಟ್ ಮೇಲೆ ಹತ್ತಿದ್ದಾರೆ. ಎಷ್ಟೇ ನಿಲ್ಲಿಸುವಂತೆ ಸೂಚಿಸಿದರೂ ಕ್ಯಾರೆ ಅನ್ನದ ಚಾಲಕ ವೇಗವಾಗಿ ರಿವರ್ಸ್ ಗೇರ್ ಹಾಕಿ ಸಡನ್ ಆಗಿ ಕಾರ್​ಗೆ​ ಬ್ರೇಕ್ ಹಾಕಿದ್ದರಿಂದ ಮಹೇಶ್ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ತಲೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ತಕ್ಷಣ ಸ್ಥಳೀಯರು ಸೇರಿ ಮಹೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಿಸರ್ವ್ ಸಬ್ ​ಇನ್ಸ್​ಪೆಕ್ಟರ್ ಮಹೇಶ್ ಅವರಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬಳಿಕ ಜ್ಞಾನಭಾರತಿ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಆರೋಪಿ ಪತ್ತೆಯಾದ ಬಳಿಕವೇ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ.

ಇದನ್ನೂಓದಿ:ಮೈಸೂರು: ಹಲ್ಲೆಗೊಳಗಾಗಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಸಾವು, ಕಾರ್ಯದರ್ಶಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.