ರಾಯಚೂರು : ಮೊಹರಂ ಹಬ್ಬದ ಆಚರಣೆ ವೇಳೆ ಕೆಂಡ ಹಾಯುವಾಗ ವ್ಯಕ್ತಿಯೊಬ್ಬ ಆಯಾತಪ್ಪಿ ಕೊಂಡಕ್ಕೆ ಬಿದ್ದು, ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಹೊಕ್ರಾಣಿ ಗ್ರಾಮದ ನಿವಾಸಿ ಯಮನಪ್ಪ ನಾಯಕ್ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇಲ್ಲಿ ಮುಸ್ಲಿಮರ ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ. ಮೊಹರಂ ಆಚರಣೆ ವೇಳೆ ದೇವರು ಹೊತ್ತವರು ಅಗ್ನಿ ಹಾಯುವ ಸಂಪ್ರದಾಯವಿದೆ. ದೇವರಲ್ಲಿ ಬೇಡಿಕೆ ಈಡೇರಿಕೆಗಾಗಿ ಕೆಲವರು ಬೆಂಕಿ ಹಾಯುತ್ತಾರೆ. ಹೀಗೆ ಬೆಂಕಿ ಹಾಯುವ ಸಮಯದಲ್ಲಿ ಕೊಂಡಕ್ಕೆ ಆಯಾ ತಪ್ಪಿ ಬಿದ್ದ ವ್ಯಕ್ತಿಯೊಬ್ಬರು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದಾರೆ.
ಇದನ್ನ ಕಂಡ ಸ್ಥಳೀಯರು ಯಮನಪ್ಪ ರಕ್ಷಣೆಗೆ ಮುಂದಾಗಿ, ಬೆಂಕಿಗೆ ನೀರು ಹರಿಸಿದ್ದಾರೆ. ಆದರೆ ಕೆಂಡಕ್ಕೆ ಬಿದ್ದಿದ್ದರಿಂದ ಭಾಗಶಃ ಕೊಂಡದಲ್ಲಿಯೇ ಸುಟ್ಟು ಕರಕಲಾಗಿದ್ದಾರೆ. ನಿನ್ನೆ ತಡರಾತ್ರಿ ಘಟನೆ ಸಂಭವಿಸಿದ್ದು, ವ್ಯಕ್ತಿ ಕೊಂಡಕ್ಕೆ ಬಿದ್ದು ಬೆಂಕಿಯಲ್ಲಿ ಬೇಯುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಾಮರಾಜನಗರ: ಕೆಂಡವನ್ನೇ ದೇವರಿಗೆ ನೈವೇದ್ಯವಾಗಿ ಅರ್ಪಿಸಿ ವಿಶೇಷ ಆಚರಣೆ - Special Celebration