ETV Bharat / state

'ಇವಿಎಂ' ನಲ್ಲಿ ನೋಟಾ ಬದಲು ಬಾರಕೋಲು ಚಿಹ್ನೆ ಬಳಸುವಂತೆ ಚುನಾವಣಾ ಆಯೋಗಕ್ಕೆ ರೈತನ ನೋಟಿಸ್​ - BARaKOLU SYMBOL - BARAKOLU SYMBOL

"ನೋಟಾ" ಬದಲು "ಬಾರಕೋಲು"ಚಿಹ್ನೆ ಬಳಸುವಂತೆ ಚುನಾವಣಾ ಆಯೋಗಕ್ಕೆ ಕಳಸಾ ಬಂಡೂರಿ ಹೋರಾಟಗಾರ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸದ ಆಯೋಗಕ್ಕೆ ನೋಟಿಸ್ ನೀಡಿದ್ದಾರೆ.

ಬಾರಕೋಲು ಚಿಹ್ನೆ
ಬಾರಕೋಲು ಚಿಹ್ನೆ
author img

By ETV Bharat Karnataka Team

Published : Apr 7, 2024, 11:02 AM IST

Updated : Apr 7, 2024, 12:56 PM IST

ವಿಜಯ ಕುಲಕರ್ಣಿ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಇದರ ಮಧ್ಯೆ ಕಳಸಾ ಬಂಡೂರಿ ಹೋರಾಟಗಾರ ಹಾಗೂ ರೈತ ಮುಖಂಡರೊಬ್ಬರು ಇವಿಎಂ (ವಿದ್ಯುನ್ಮಾನ ಮತಯಂತ್ರಗಳಲ್ಲಿ ನೋಟಾ) ಎಂದು ಬರೆಯುವ ಬದಲು ರೈತರ 'ಬಾರಕೋಲು' ಚಿಹ್ನೆಯನ್ನು (ಚಿತ್ರ) ಬಳಸುವಂತೆ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಕಳಸಾ ಬಂಡೂರಿ ಹೋರಾಟ ಸಮಿತಿ ಸಂಸ್ಥಾಪನಾ ಅಧ್ಯಕ್ಷ ವಿಜಯ ಕುಲಕರ್ಣಿ ಎಂಬುವವರೇ ಇಂತಹ ವಿಭಿನ್ನ ಹೋರಾಟಕ್ಕೆ ಮುನ್ನುಡಿ ಬರೆದವರು. ಇವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇವಿಎಂಗಳಲ್ಲಿ ನೋಟಾ ಬದಲು ಬಾರಕೋಲು ಚಿಹ್ನೆ ಬಳಸುವಂತೆ ನರಗುಂದ ತಹಶೀಲ್ದಾ‌ರ್​ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ 2 ಬಾರಕೋಲು ಸಮೇತ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು.

ಆದರೆ ಇದೀಗ ತಿಂಗಳಾದರೂ ಆಯೋಗದಿಂದ ಉತ್ತರ ಬರದ ಕಾರಣ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಕಾರ್ಯದರ್ಶಿಗೆ ಲೀಗಲ್​ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ನೋಟಾ ಅನುಷ್ಠಾನದಲ್ಲಿನ ನ್ಯೂನತೆ ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ವಿಜಯ ಕುಲಕರ್ಣಿ ತಮ್ಮ ಹೆಸರಿನಲ್ಲಿಯೇ ವಕೀಲರಾದ ಗುರುದತ್ತ ಅಂಕೋಲೆಕರ ಮೂಲಕ ನೋಟಿಸ್‌ ಕೊಡಿಸಿದ್ದಾರೆ.

ಈ ವಿಭಿನ್ನ ಹೋರಾಟದ ಬಗ್ಗೆ ರೈತ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, "ನೋಟಾ ಬಟನ್​ಗೆ ಚಿಹ್ನೆ ಬಳಸದೇ ಇಂಗ್ಲಿಷ್​ ಅಕ್ಷರದಲ್ಲಿ ನೋಟಾ ಎಂದು ಬರೆಯಲಾಗಿದೆ. ಆದರೆ, ಚುನಾವಣೆ ಅಭ್ಯರ್ಥಿಗಳಿಗೆ ಚಿಹ್ನೆ ಇದ್ದಂತೆ ತಿರಸ್ಕರಿಸುವ ಚಿಹ್ನೆ ಇಲ್ಲ. ಅದು ಅನಕ್ಷರಸ್ಥ ಮತದಾರರಿಗೆ ಗೊತ್ತಾಗುವುದಿಲ್ಲ. ಇದರಿಂದ ನೋಟಾದ ಮೂಲ ಉದ್ದೇಶ ಈಡೇರುವುದಿಲ್ಲ. ಅದಕ್ಕಾಗಿ ನೋಟಾಕ್ಕೆ ಬಾರಕೋಲು ಚಿಹ್ನೆ ಅಳವಡಿಸಿ ನೋಟಾ ಮಹತ್ವ ಎತ್ತಿ ಹಿಡಿಯಬೇಕು" ಎನ್ನುವುದು ವಿಜಯ ಕುಲಕರ್ಣಿ ಅವರ ವಾದವಾಗಿದೆ.

"ಬಾರಕೋಲು ರೈತರ ಪ್ರತೀಕ. ರೈತಾಪಿ ವರ್ಗಕ್ಕೆ ಇದು ಹತ್ತಿರವಾಗಿದೆ. ಈ ಚಿಹ್ನೆ ಬಳಸುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಅದಲ್ಲದೆ ಬಾರಕೋಲು ಚಾಟಿ ಇದ್ದಂತೆ ತಪ್ಪು ಮಾಡಿದರೆ, ಕೆಲಸ ಮಾಡದಿದ್ದರೆ ಎಚ್ಚರಿಸುವ ಕೆಲಸ ಮಾಡಬಹುದು ಎಂಬ ಸಂದೇಶ ಇದರ ಹಿಂದೆ" ಇದೆ ಎಂದು ಹೇಳಿದರು.

ಈ ಹಿಂದೆ 2013 ರಲ್ಲಿ ಚುನಾವಣಾ ಅಭ್ಯರ್ಥಿಗಳಲ್ಲಿ ಯಾರೊಬ್ಬರಿಗೂ ಮತ ಹಾಕಲು ಇಷ್ಟ ಇಲ್ಲದೆ ಇದ್ದಾಗ ಪ್ರತ್ಯೇಕ ವ್ಯವಸ್ಥೆ ಮಾಡಲು ಪೀಪಲ್ಸ್ ಯುನಿಯನ್ ಸಿವಿಲ್ ಲಿಬರಟೀಸ್ (ಪಿಯುಸಿಎಲ್) ಎನ್ನುವ ಸಂಸ್ಥೆ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಸಂಸ್ಥೆ ವಾದ ಆಲಿಸಿದ ಸುಪ್ರೀಂ ಕೋರ್ಟ್, 2013ರಲ್ಲಿ ಮತಯಂತ್ರಗಳಲ್ಲಿ ನೋಟಾ-ಮೇಲಿನವರು ಯಾರೂ ಅಲ್ಲ ಎಂಬ ಹೆಚ್ಚುವರಿ ಬಟನ್​ ಅಳವಡಿಸುವಂತೆ ಆದೇಶಿಸಿತ್ತು. ಇದೀಗ ರೈತ ಹೋರಾಟಗಾರರು ಈ ಚಿಹ್ನೆಯನ್ನು ಬದಲಾಯಿಸಲು ಕಾನೂನು ಹೋರಾಟ ನಡೆಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ರಾಜ್ಯದಲ್ಲಿ ನಗದು ಸೇರಿ 262 ಕೋಟಿ ಮೌಲ್ಯದ ವಿವಿಧ ವಸ್ತುಗಳು ಜಪ್ತಿ - LOK SABHA ELECTION

Last Updated : Apr 7, 2024, 12:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.