ETV Bharat / state

ವಿಜಯಪುರ: ಅಕ್ರಮ‌ ಸಂಬಂಧದ ಸಂಶಯದಿಂದ ಜೋಡಿ ಕೊಲೆ - Double Murder case

ಅಕ್ರಮ‌ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆ ನಡೆದಿರುವ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Vijayapura  Double Murder case  Body of unknown person found
ಅಕ್ರಮ‌ ಸಂಬಂಧದ ಸಂಶಯದ ಹಿನ್ನಲೆಯಲ್ಲಿ ಜೋಡಿ ಕೊಲೆ: ಪೊಲೀಸರು ಭೇಟಿ, ಪರಿಶೀಲನೆ
author img

By ETV Bharat Karnataka Team

Published : Mar 19, 2024, 2:43 PM IST

ವಿಜಯಪುರ: ಅಕ್ರಮ‌ ಸಂಬಂಧದ ಸಂಶಯದ ಹಿನ್ನೆಲೆಯಲ್ಲಿ ಜೋಡಿ ಕೊಲೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ನಿನ್ನೆ (ಸೋಮವಾರ) ತಡರಾತ್ರಿ ನಡೆದಿದೆ. ಇಂದು (ಮಂಗಳವಾರ) ಬೆಳಗಿನಜಾವ ಬೆಳಕಿಗೆ ಬಂದಿದೆ.

ಗಣಿ ಗ್ರಾಮದ ಸೋಮನಿಂಗಪ್ಪ ಕಲ್ಲಪ್ಪ ಕುಂಬಾರ (35) ಹಾಗೂ ಪಾರ್ವತಿ ತಳವಾರ (38) ಕೊಲೆಗೀಡಾದ ಜೋಡಿ ಎಂದು ಗುರುತಿಸಲಾಗಿದೆ. ಗಣಿ ಗ್ರಾಮಕ್ಕೆ ಬರುವ ಮೊದಲೇ ಇಬ್ಬರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಿಂದ ಲಭ್ಯವಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಜೋಡಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ನಿಡಗುಂದಿ ಠಾಣೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಯಾರು ಮಾಡಿದ್ದಾರೆ ಮತ್ತು ಕೊಲೆಗೆ ಸಂಬಂಧಿಸಿದಂತೆ ನಿಖರ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಡಗುಂದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಹಾರ್ ಬ್ರಿಡ್ಜ್​​ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ: ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೊಲ್ಹಾರ ಬ್ರಿಜ್ಡ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಂದಾಜು 35 ರಿಂದ 40 ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟಿರುವ ವ್ಯಕ್ತಿಯು ಬಿಳಿ ಶರ್ಟ್, ಕಪ್ಪು ಬಣ್ಣದ ಜಾಕೆಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕೊಲ್ಹಾರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: 12 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ, ಎಲ್ಲಾ ಪ್ರಮುಖರನ್ನು ಬೈಯುವುದೇ ಇದರ ವಿಶೇಷತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.