ETV Bharat / state

ಕೊಲಂಬಿಯಾ, ಬ್ರೆಜಿಲ್ ರೀತಿ ಪಾಲುದಾರರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ ಕಾಫಿ ಬೋರ್ಡ್ - COFFEE BOARD NEW PLAN - COFFEE BOARD NEW PLAN

ಕೊಲಂಬಿಯಾ, ಬ್ರೆಜಿಲ್ ಮಾದರಿಯಲ್ಲಿ ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪಾಲುದಾರರನ್ನು ಒಗ್ಗೂಡಿಸುವ ವಿನೂತನ ಪ್ರಯತ್ನಕ್ಕೆ ಕಾಫಿ ಬೋರ್ಡ್ ಆಫ್ ಇಂಡಿಯಾ ಮುಂದಾಗಿದೆ. ಈ ಮೂಲಕ ಹೊರ ದೇಶಗಳ ಮಾದರಿಯಲ್ಲಿ ಸ್ಥಳೀಯ ಬ್ರ್ಯಾಂಡ್​ ಬಿಲ್ಡಿಂಗ್ ಮಾಡಲು ದಿಟ್ಟ ಹೆಜ್ಜೆ ಇರಿಸಿದೆ.

ಕಾಫಿ
ಕಾಫಿ ಬೆಳೆ (ETV Bharat)
author img

By ETV Bharat Karnataka Team

Published : Jul 8, 2024, 8:24 PM IST

ಬೆಂಗಳೂರು: ಕಾಫಿ ಬೋರ್ಡ್ ಆಫ್ ಇಂಡಿಯಾ ಇದೇ ಮೊದಲ ಬಾರಿಗೆ ಕೊಲಂಬಿಯಾ, ಬ್ರೆಜಿಲ್ ಮಾದರಿಯಲ್ಲಿ ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪಾಲುದಾರರನ್ನು ಒಗ್ಗೂಡಿಸುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಕಾಫಿ ಬೆಳೆಗಾರರರು, ಸಂಸ್ಕರಣೆದಾರರು, ಸಂಗ್ರಹಕಾರರು, ಮಾರಾಟಗಾರರು, ರೋಸ್ಟರ್ಸ್, ರಾಫ್ತುದಾರರು, ಕೆಫೆ ಚೈನ್​ಗಳ ಮಾಲೀಕರನ್ನು ಒಟ್ಟುಗೂಡಿಸಿ ಹೊರ ದೇಶಗಳ ಮಾದರಿಯಲ್ಲಿ ಸ್ಥಳೀಯ ಬ್ರ್ಯಾಂಡ್​ ಬಿಲ್ಡಿಂಗ್ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ.

ಇದರ ಮೊದಲ ಭಾಗವಾಗಿ ದೇಶದ ಎಲ್ಲ ಪಾಲುದಾರರಿಗೆ ತಮ್ಮ ಸಲಹೆಗಳನ್ನು ನೀಡಲು ಆಹ್ವಾನ ನೀಡಿದೆ. ಬ್ರೆಜಿಲ್​ನ ಕಾಫಿ ವಿಶ್ವದಲ್ಲಿ ತುಂಬಾ ಜನಪ್ರಿಯತೆ ಗಳಿಸಿರುವುದಕ್ಕೆ ಕಾರಣ ಸ್ಥಳೀಯವಾಗಿ ಸಿಕ್ಕ ಪ್ರೋತ್ಸಾಹದಿಂದಾಗಿದೆ. ಅಲ್ಲಿನ ಜನರಿಗೆ ಕಾಫಿಯ ಮಹತ್ವ ವಿವರಿಸಿ ಅಲ್ಲಿ ಸೇವನೆಯನ್ನು ಮೊದಲು ಹೆಚ್ಚಿಸಲಾಯಿತು. ಭಾರತದಲ್ಲೂ ಅದೇ ಮಾದರಿಯ ಪ್ರಚಾರ ಮಾಡುವುದು ಈ ಯೋಜನೆಯ ಪ್ರಮುಖ ಅಂಶವಾಗಿದೆ.

ಭಾರತ ಕಾಫಿ ಬೆಳೆಯುವುದರಲ್ಲಿ 5ನೇ ಸ್ಥಾನವನ್ನು ಪಡೆದಿದೆ ಎನ್ನುವುದೇ ಸಾಮಾನ್ಯ ಜನರಿಗೆ ಗೊತ್ತಿಲ್ಲದ ವಿಚಾರವಾಗಿದೆ. ಅದರ ಗುಣಮಟ್ಟ ಕೂಡ ಕೊಲಂಬಿಯಾ ಅಥವಾ ಬ್ರೆಜಿಲ್ ನಷ್ಟೇ ಉತ್ಕೃಷ್ಟವಾಗಿದೆ ಎನ್ನುವುದು ಕೂಡ ತಿಳಿದಿಲ್ಲ. ಆ ದೇಶಗಳಲ್ಲಿ ಕಾಫಿಯ ಮೌಲ್ಯವನ್ನು ಸ್ಥಳೀಯವಾಗಿ ಉತ್ತಮ ರೀತಿಯಲ್ಲಿ ತಿಳಿಸಿಕೊಡಲಾಗಿದೆ. ಆದ್ದರಿಂದ ವಿಶ್ವ ಮನ್ನಣೆ ಗಳಿಸಲು ಸಾಧ್ಯವಾಗಿದೆ ಎಂದು ಕಾಫಿ ಬೋರ್ಡ್ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಜಿ ಜಗದೀಶ್ ಈಟಿವಿ ಭಾರತ್​ಗೆ ತಿಳಿಸಿದರು.

ಕೇವಲ ಕಾಫಿ ಬೋರ್ಡ್ ನಿಂದ ಬೆಳೆ ಮತ್ತು ಮಾರಾಟದ ಸಂಬಂಧ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿಲ್ಲ. ಎಲ್ಲ ಪಾಲುದಾದರೂ ಒಟ್ಟುಗೂಡಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತೀಯ ಕಾಫಿ ಮತ್ತು ಸಹ ಉತ್ಪನ್ನಗಳನ್ನು ಇನ್ನಷ್ಟು ಮುನ್ನೆಲೆಗೆ ತರಬಹುದಾಗಿದೆ ಎಂದರು.

ಮಾರ್ಕ್ ಆಫ್ ಕ್ವಾಲಿಟಿ ಎನ್ನುವ ಪರಿಕಲ್ಪನೆಯನ್ನು ತರುವುದರ ಮೂಲಕ ಬ್ರೆಜಿಲ್ ದೇಶ ಪ್ರಪಂಚದಲ್ಲೇ ಕಾಫಿಗೆ ಸಂಬಂಧಿಸಿದಂತೆ ಹೆಸರನ್ನು ಮಾಡಿದೆ. ಅದೇ ಮಾದರಿಯಲ್ಲಿ ಇಲ್ಲೂ ಕೂಡ ಗುಣಮಟ್ಟಕ್ಕೆ ಒತ್ತು ನೀಡಬೇಕಿದೆ. ಒಟ್ಟು 10 ವಿಚಾರಗಳನ್ನು ಕಾಫಿ ಬೆಳೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ದೇಶದ ಎಲ್ಲ ಪಾಲುದಾರರ ಸಮಯವನ್ನು ಇತ್ತೀಚಿಗೆ ನಡೆದ ಮೊದಲ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವಿಚಾರವಾಗಿ ಅತಿ ಶೀಘ್ರದಲ್ಲೇ ತಮ್ಮ ಎಲ್ಲ ಅಹವಾಲು ಮತ್ತು ಪರಿಕಲ್ಪನೆಗಳನ್ನು ನೀಡಿ ಒಟ್ಟಿಗೆ ಕೆಲಸ ಮಾಡುವುದಾಗಿದೆ. ಎಲ್ಲರೂ ತಿಳಿಸಿರುವುದು ಹೊಸ ಮುನ್ನುಡಿಯನ್ನು ಬರಿಯಲಿದೆ ಎನ್ನುವ ಆಶಾವಾದವನ್ನು ಜಗದೀಶ್ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೃಷಿ ವಿಜ್ಞಾನ ಮತ್ತು ಸಂಶೋಧನಾ ವಿಶ್ವವಿದ್ಯಾಲಯದಿಂದ ವಿನೂತನ ಬಹು ಬೆಳೆ ಸಂಸ್ಕರಣಾ ಯಂತ್ರ ಅಭಿವೃದ್ಧಿ - Multi Crop Processing Machine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.