ಮಂಡ್ಯ: ಕಳೆದ ಸೆ.11ರಂದು ನಾಗಮಂಗಲದಲ್ಲಿ ಗಣೇಶ ನಿಮಜ್ಜನೆ ಮೆರವಣಿಗೆ ವೇಳೆ ನಡೆದ ಕೋಮುಗಲಭೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.
ಮಂಡ್ಯ 1ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಶುಕ್ರವಾರವೇ ಜಾಮೀನು ಮಂಜೂರು ಮಾಡಿತ್ತು. ಆದರೆ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದ್ದ ಕಾರಣ ಸೋಮವಾರ ತಡರಾತ್ರಿ ಜೈಲಿನಿಂದ ಹೊರಬಂದಿದ್ದಾರೆ. ಬಿಡುಗಡೆಯಾದ ಆರೋಪಿಗಳು ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕುವಂತೆ ಷರತ್ತು ವಿಧಿಸಲಾಗಿದೆ.
ಬಿಡುಗಡೆಯಾದ ಹಿಂದೂ ಸಮುದಾಯದವರನ್ನು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕೇಸರಿ ಶಾಲು, ಹಾರ ಹಾಕಿ ಸ್ವಾಗತಿಸಿದರು.
ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದ ಅಪವಿತ್ರತೆ: ಸ್ವಾಮೀಜಿಗಳ, ಹಿಂದೂ ಮುಖಂಡರ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ - Dharmagraha meeting