ETV Bharat / state

ಲೋಕ್ ಅದಾಲತ್‌ನಲ್ಲಿ ಮತ್ತೆ ಒಂದಾದ 307 ದಂಪತಿ: ಒಟ್ಟು 38 ಲಕ್ಷ ಪ್ರಕರಣಗಳು ಇತ್ಯರ್ಥ - LOK ADALAT

ಲೋಕ ಅದಾಲತ್‌ನಲ್ಲಿ 38 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿವೆ. ಅಲ್ಲದೆ, 307 ಪ್ರಕರಣಗಳಲ್ಲಿ ವಿಚ್ಛೇದನ ಕೋರಿದ್ದ ದಂಪತಿ ಮತ್ತೆ ಒಂದಾಗಿದ್ದಾರೆ.

lok adalat
ಲೋಕ ಅದಾಲತ್‌ (ETV Bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ಡಿಸೆಂಬರ್ 14ರಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ 38 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ತಿಳಿಸಿದ್ದಾರೆ.

ಹೈಕೋರ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್‌ನ ಪ್ರಧಾನ ಪೀಠ ಸೇರಿದಂತೆ ಮೂರು ಪೀಠಗಳಲ್ಲಿ ಒಟ್ಟು 15 ಪೀಠಗಳು ಮತ್ತು ರಾಜ್ಯದ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1004 ಪೀಠಗಳು ಸೇರಿದಂತೆ ಒಟ್ಟು 1,019 ಪೀಠಗಳು ಅದಾಲತ್‌ನಲ್ಲಿ ವಿಚಾರಣೆ ನಡೆಸಿವೆ. ಹೈಕೋರ್ಟ್​​ನ ಮೂರು ಪೀಠಗಳಲ್ಲಿ 1,151 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೈಕೋರ್ಟ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಸೇರಿ 2,45,189 ಬಾಕಿ ಪ್ರಕರಣಗಳು ಮತ್ತು 36,35,692 ವ್ಯಾಜ್ಯ ಪೂರ್ವ ಪ್ರಕರಣಗಳೂ ಸೇರಿದಂತೆ 38,80,881 ಪ್ರಕರಣಗಳು ಇತ್ಯರ್ಥಗೊಂಡಿವೆ. 2,248 ಕೋಟಿ ರೂ.ಗಳ ಪರಿಹಾರ ಕೊಡಿಸಿರುವುದಾಗಿ ರಾವ್ ಅವರು ವಿವರಿಸಿದರು.

ಇತ್ಯರ್ಥವಾದ ಪ್ರಮುಖ ಪ್ರಕರಣಗಳು:

  • ಶಿವಣ್ಣ ಎಂಬುವರ ವಿರುದ್ಧ ಶ್ರೀರಾಮ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಪ್ರಕರಣದಲ್ಲಿ 88 ಲಕ್ಷ ರೂ.ಗಳ ಪರಿಹಾರ ಘೋಷಿಸಿ ಇತ್ಯರ್ಥಪಡಿಸಲಾಗಿದೆ.
  • ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯದಲ್ಲಿ ಎ.ಎಸ್.ಶ್ರೀನಿವಾಸ ವಿರುದ್ಧ ಮೇಸೆರ್ಸ್​ ಕಾಂಡಿಡ್ ಬಿಲ್ಡರ‍್ಸ್ ಪ್ರೈ.ಲಿ. ಪ್ರಕರಣದಲ್ಲಿ 23 ಕೋಟಿ 70 ಲಕ್ಷ ರೂ. ಪರಿಹಾರ ನೀಡಿ ಇತ್ಯರ್ಥಗೊಳಿಸಲಾಗಿದೆ.
  • ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅಕ್ಸಿಸ್ ಬ್ಯಾಂಕ್ ವಿರುದ್ಧ ಎಲ್. ಜಯರಾಮ್ ಪ್ರಕರಣದಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು 19 ಕೋಟಿ 87 ಲಕ್ಷ ರೂ. ಪರಿಹಾರ ಘೋಷಿಸಿ ಇತ್ಯರ್ಥ ಮಾಡಲಾಗಿದೆ.
  • ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೆಚ್.ನರೇಶಕುಮಾರ್ ವಿರುದ್ಧ ಎಂ.ಪೂಬಾಲನ್ ಮತ್ತು ಇತರರು, ಚೆಕ್ ಬೌನ್ಸ್ ಪ್ರಕರಣವು 13 ಕೋಟಿ 95 ಲಕ್ಷ ರೂ.ಗಳಿಗೆ ಇತ್ಯರ್ಥಗೊಂಡಿದೆ.
  • ಕೋಲಾರ ಜಿಲ್ಲೆಯ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ನಿರ್ದಿಷ್ಠ ಕರಾರು ಪಾಲನೆಯ ಪ್ರಕರಣದಲ್ಲಿ ಕಳವಗುಂಟ ಜಗನ್‌ಮೋಹನ್ ವಿರುದ್ಧ ಎಸ್.ವಿ. ಡೆವೆಲಪರ‍್ಸ್ ಪ್ರಕರಣದಲ್ಲಿ 1 ಕೋಟಿ ರೂ.ಗಳಿಗೆ ಇತ್ಯರ್ಥ ಮಾಡಲಾಗಿದೆ ಎಂದು ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್​ ತಿಳಿಸಿದರು.

ಮತ್ತೆ ಒಂದಾದ 307 ದಂಪತಿ: ಅದಾಲತ್‌ನಲ್ಲಿ ಒಟ್ಟು 1,581 ವಿಚ್ಛೇದನ ಪ್ರಕರಣಗಳ ವಿಚಾರಣೆ ನಡೆಸಿದ್ದು, ಅದರಲ್ಲಿ 307 ಪ್ರಕರಣಗಳಲ್ಲಿ ದಂಪತಿ ಮತ್ತೆ ಒಂದಾಗಿದ್ದಾರೆ. ಇನ್ನುಳಿದ ಪ್ರಕರಣಗಳನ್ನು ಇತ್ಯರ್ಥಪಡಿಸಿರುವುದಾಗಿ ಅವರು ವಿವರಿಸಿದರು.

ಇನ್ನುಳಿದಂತೆ 3,311 ವಿಭಾಗ ಧಾವೆ ಪ್ರಕರಣಗಳು, 5,168 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡಿದ್ದು, 260 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಅಲ್ಲದೆ, ಚೆಕ್ ಬೌನ್ಸ್ ಆರೋಪದ 11,262 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಭೂಸ್ವಾಧೀನ ಕುರಿತು 597 ಪ್ರಕರಣಗಳ ಇತ್ಯರ್ಥಪಡಿಸಿ, 773 ಕೋಟಿ ರೂ. ಪರಿಹಾರ ನೀಡಲಾಗಿದೆ. ಅಮಲ್ಜಾರಿ ಪ್ರಕರಣಗಳಲ್ಲಿ 3,432 ಕೇಸ್​​ಗಳನ್ನು ಇತ್ಯರ್ಥ ಮಾಡಿ, 82 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ರೇರಾಗೆ ಸಂಬಂಧಿಸಿದ 82 ಪ್ರಕರಣಗಳು ಇತ್ಯರ್ಥಗೊಂಡಿದ್ದು, 5 ಕೋಟಿ ರೂ. ಪರಿಹಾರ ನೀಡಲಾಗಿದೆ. ಗ್ರಾಹಕ ವ್ಯಾಜ್ಯಗಳ ಕುರಿತ 611 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 3 ಕೋಟಿ ರೂ. ಪರಿಹಾರ ವಿತರಣೆ ಮಾಡಿರುವುದಾಗಿ ನ್ಯಾಯಮೂರ್ತಿಗಳು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ತುಮಕೂರು: ಪ್ರಿಯಕರನ ಜೊತೆ ಸೇರಿ ಗಂಡನಿಗೆ ಬೆಂಕಿ ಹಚ್ಚಿ ಕೊಂದ ಪತ್ನಿಗೆ ಜೀವಾವಧಿ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.