ತುಮಕೂರು : ಜಿಲ್ಲೆಯ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯಲ್ಲಿರುವ ಶ್ರೀ ಅಂಬಾಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ಇಬ್ಬರು ಶಿಕ್ಷಕರು ಸೇರಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ. ರಾತ್ರಿ ಮನೆಗೆ ಹೋದಾಗ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಕೂಡಲೇ ರಾತ್ರೋರಾತ್ರಿ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಕುಣಿಗಲ್ ತಾಲೂಕಿನ ಹಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಅದರಲ್ಲಿ 12 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀ ಅಂಬಾ ಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳಿದ್ದಾರೆ. ಸ್ಥಳಕ್ಕೆ ಕುಣಿಗಲ್ ಟಿಹೆಚ್ಓ ಹಾಗೂ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ಗಂಭೀರ ಅನಾರೋಗ್ಯ ಸ್ಥಿತಿಯಿಂದಾಗಿ 10 ವಿದ್ಯಾರ್ಥಿಗಳಿಗೆ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಬಗ್ಗೆ ಶಾಲೆಯ ಶಿಕ್ಷಕ ಶಿವಗಂಗಯ್ಯ ಅವರು ಮಾತನಾಡಿದ್ದು, ''ಮಕ್ಕಳಿಗೆ ತಲೆ ಸುತ್ತುವುದು, ಹೊಟ್ಟೆ ನೋಯು ಕಾಣಿಸಿಕೊಂಡಿತ್ತು. ನಂತರ ಇಲ್ಲಿಯೇ ಸ್ಥಳೀಯ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ ಶಾಲೆಗೆ ಬಂದಾಗ ಮಕ್ಕಳಿಗೆ ಒಬ್ಬರನ್ನೊಬ್ಬರು ನೋಡಿಕೊಂಡು ವಾಂತಿ, ತಲೆಸುತ್ತು ಬಂದಿದೆ. ಶಾಲೆ ಊಟದಿಂದ ಏನೂ ತೊಂದರೆಯಾಗಿಲ್ಲ. ಶಾಲೆಯ ಪಕ್ಕದಲ್ಲೇ ಮಾವಿನ ಹಣ್ಣಿನ ತೋಟವಿದೆ. ಅಲ್ಲಿ ನಿನ್ನೆ ಔಷಧಿ ಹೊಡೆದಿದ್ದಾರೆ. ಅದರ ವಾಸನೆಗೆ ಮಕ್ಕಳಿಗೆ ಈ ರೀತಿ ಆಗಿರುವಂತಿದೆ. ಮೂವರು ಶಿಕ್ಷಕರಿಗೂ ಇದೇ ರೀತಿ ಆಗಿದೆ'' ಎಂದು ತಿಳಿಸಿದ್ದಾರೆ.
ಬೆಂಗಳೂರು: ಫುಡ್ ಫಾಯಿಸನ್‌ನಿಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಸ್ವಸ್ಥ