ETV Bharat / state

ಸರ್ಕಾರಿ‌ ಶಾಲೆ ಅಭಿವೃದ್ಧಿ ನಿಧಿಗಾಗಿ 25 ಗಂಟೆ ನಿರಂತರ ಯೋಗ ತರಬೇತಿ: ಗೋಲ್ಡನ್ ಬುಕ್ ಆಫ್ ವರ್ಲ್ಡ್​ನಲ್ಲಿ 2 ದಾಖಲೆ - Golden Book of World Record

ನಿರಂತರ 25 ಗಂಟೆಗಳ ಕಾಲ ಯೋಗ ತರಬೇತಿ ನೀಡಿ ಗೋಲ್ಡನ್ ಬುಕ್‌ ಆಫ್ ವರ್ಲ್ಡ್​ ರೆಕಾರ್ಡ್​ನಲ್ಲಿ 2 ದಾಖಲೆ ನಿರ್ಮಿಸುವುದರ ಜೊತೆಗೆ ಯೋಗ ಶಿಕ್ಷಣದಿಂದ ಬಂದ 2 ಲಕ್ಷ ರೂ. ಹಣವನ್ನು ಯೋಗ ಶಿಕ್ಷಕ ಕುಶಾಲಪ್ಪ ಗೌಡ ಅವರು ತಾವು ಕಲಿತ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನೀಡಿದ್ದಾರೆ.

Government school and yoga teacher Kushalappa Gowda
ಸರ್ಕಾರಿ ಶಾಲೆ ಹಾಗೂ ಯೋಗ ಶಿಕ್ಷಕ ಕುಶಾಲಪ್ಪ ಗೌಡ (ETV Bharat)
author img

By ETV Bharat Karnataka Team

Published : Sep 11, 2024, 6:05 PM IST

Updated : Sep 11, 2024, 7:38 PM IST

ಮಂಗಳೂರು: ತಾನು ಕಲಿತ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ನಿಧಿ ಹೊಂದಿಸಲು ಯೋಗ ಶಿಕ್ಷಕರೊಬ್ಬರು ನಿರಂತರ 25 ಗಂಟೆಗಳ ಯೋಗ ತರಬೇತಿ ನೀಡಿ ಗೋಲ್ಡನ್ ಬುಕ್‌ ಆಫ್ ವರ್ಲ್ಡ್​ ರೆಕಾರ್ಡ್​ನಲ್ಲಿ ವೈಯಕ್ತಿಕ ಮತ್ತು ಸಂಸ್ಥೆಯ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ.

ಸರ್ಕಾರಿ‌ ಶಾಲೆ ಅಭಿವೃದ್ಧಿ ನಿಧಿಗಾಗಿ 25 ಗಂಟೆ ನಿರಂತರ ಯೋಗ ತರಬೇತಿ: ಗೋಲ್ಡನ್ ಬುಕ್ ಆಫ್ ವರ್ಲ್ಡ್​ನಲ್ಲಿ 2 ದಾಖಲೆ (ETV Bharat)

2024ರ ಜುಲೈ 22ರಿಂದ 23ವರೆಗೆ ಮಂಗಳೂರಿನ ಯೆನೆಪೋಯ ವೈದ್ಯಕೀಯ ಸಂಸ್ಥೆಯ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಈ ದಾಖಲೆಯ ಯೋಗ ನಡೆದಿತ್ತು. ಯೋಗ ಶಿಕ್ಷಕ ಕುಶಾಲಪ್ಪ ಗೌಡ ಯಾವುದೇ ವಿಶ್ರಾಂತಿ ಇಲ್ಲದೆ, ಉಪಹಾರ ಸೇವಿಸದೇ ನಿರಂತರ 25 ಗಂಟೆ 4 ನಿಮಿಷ 35 ಸೆಕೆಂಡ್ ಯೋಗ ತರಬೇತಿ ನೀಡಿದ್ದರು. ಇದರಲ್ಲಿ‌ 2,693 ಮಂದಿ ಯೋಗ ತರಬೇತಿ ಪಡೆದಿದ್ದರು. ಇವರೆಲ್ಲರೂ ವೈದ್ಯಕೀಯ ಸಿಬ್ಬಂದಿ ಎನ್ನುವುದು ವಿಶೇಷ.

ಈ ಮ್ಯಾರಾಥನ್ ಯೋಗ ಶಿಕ್ಷಣ ನಡೆಯುವ ಸಂದರ್ಭದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನ ಅಧಿಕಾರಿಗಳು ಹಾಜರಿದ್ದರು. ಈ ದಾಖಲೆಯ ಯೋಗ ಶಿಕ್ಷಣವನ್ನು ಕಣ್ಣಾರೆ ಕಂಡ ಅಧಿಕಾರಿಗಳು ಎರಡು ದಾಖಲೆಗಳನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ದಾಖಲಿಸಿದ್ದಾರೆ. 25 ಗಂಟೆ ನಿರಂತರ ಯೋಗ ಶಿಕ್ಷಣ ನೀಡಿರುವುದಕ್ಕೆ ಕುಶಾಲಪ್ಪ ಗೌಡರಿಗೆ ಮತ್ತು ಯೆನೆಪೋಯ ಸಂಸ್ಥೆಗೆ ಮೋಸ್ಟ್ ಹೆಲ್ತ್ ಕೇರ್ ಪ್ರೊಫೆಶನಲ್ ಯೋಗ ಸೆಷನ್ಸ್ ದಾಖಲೆ ಬರೆಯಲಾಗಿದೆ.

ಈ ಯೋಗ ಶಿಕ್ಷಣದಿಂದ ಬಂದ 2 ಲಕ್ಷ ರೂ ಹಣವನ್ನು ಬೆಳ್ತಂಗಡಿಯ ಮೊಗ್ರು ಸರ್ಕಾರಿ ಶಾಲೆಗೆ ನೀಡಲಾಗಿದೆ. ಈ ಮೂಲಕ ಶಾಲೆಯ ಅಭಿವೃದ್ಧಿಗೆ ಶಿಕ್ಷಕ ಕುಶಾಲಪ್ಪ ಅವರು ನಿಧಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕುಶಾಲಪ್ಪ ಗೌಡ, "ಬೆಳ್ತಂಗಡಿ ತಾಲೂಕಿನ ಮೊಗ್ರು ಸರ್ಕಾರಿ ಶಾಲೆಗೆ ವಿದ್ಯಾನಿಧಿ ನೀಡಲು 25 ಗಂಟೆ ನಿರಂತರ ಯೋಗ ತರಬೇತಿ ನೀಡಲಾಯಿತು. ಇದರಲ್ಲಿ ವೈದ್ಯಕೀಯ ವೃತ್ತಿಪರರು ಭಾಗವಹಿಸಿದ್ದರು. ಈ ಯೋಗ ಶಿಕ್ಷಣದಿಂದ 2 ದಾಖಲೆಗಳನ್ನು ಬರೆಯಲಾಗಿದೆ. ಯೋಗಭ್ಯಾಸದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಹೇಳಿದರು.

ಇದನ್ನೂ ಓದಿ: ಸತತ 12 ಗಂಟೆ ಈಜಿದ ಬೆಳಗಾವಿಯ ತಾಯಿ - ಮಗ: ಏಷಿಯಾ ಬುಕ್ ಆಫ್ ರೆಕಾರ್ಡ್ಸ್​ಗೆ ಹೆಸರು ಸೇರ್ಪಡೆ - Mother son set a new record

Last Updated : Sep 11, 2024, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.