ETV Bharat / state

ಬಿಬಿಎಂಪಿ ಮಾರ್ಗಸೂಚಿ ಪಾಲಿಸದ 21 ಪಿಜಿ ಉದ್ದಿಮೆಗಳಿಗೆ ಬೀಗ

ಬಿಬಿಎಂಪಿ ಮಾರ್ಗಸೂಚಿ ಪಾಲಿಸದ ಪಿಜಿಗಳಿಗೆ ಬೀಗ ಹಾಕಲಾಗಿದೆ ಎಂದು ಪಾಲಿಕೆಯ ವಿಶೇಷ ಆಯುಕ್ತ ಸುರಳ್ಕರ್​ ವಿಕಾಸ್​ ಕಿಶೋರ್​ ತಿಳಿಸಿದ್ದಾರೆ.

PG
ಪಿ.ಜಿಗಳಿಗೆ ಬೀಗ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳು (ETV Bharat)
author img

By ETV Bharat Karnataka Team

Published : Oct 10, 2024, 9:49 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪಾಲಿಸದ ಪಿ.ಜಿಗಳ (ಪೇಯಿಂಗ್ ಗೆಸ್ಟ್) ಮುಚ್ಚುವ ಕಾರ್ಯಾರಂಭಿಸಲಾಗಿದೆ. ಶುಕ್ರವಾರ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಒಟ್ಟು 21 ಪಿಜಿಗಳಿಗೆ ಬೀಗ ಹಾಕಿದ್ದು, ಉಳಿದ ಪಿಜಿಗಳಿಗೆ ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಅಧಿಕೃತ ಹಾಗೂ ಅನಧಿಕೃತ ಪಿಜಿಗಳಿಗೆ ಭೇಟಿ ನೀಡಿ, ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿಗಳನ್ನು ಮುಚ್ಚುವ ಕಾರ್ಯ ನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,193 ಅಧಿಕೃತ ಪಿ.ಜಿಗಳಿವೆ. ಇದರಲ್ಲಿ 1,578 ಪಿಜಿಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿದ್ದು, 615 ಪಿ.ಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿ ಅನುಸರಿಸದ ಪಿ.ಜಿಗಳನ್ನು ಸೇರಿ ಇಲ್ಲಿಯವರೆಗೆ 1,011 ಅಧಿಕೃತ ಪಿ.ಜಿಗಳಿಗೆ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,320 ಅನಧಿಕೃತ ಪಿ.ಜಿಗಳಿವೆ. ಇದರಲ್ಲಿ 1,674 ಪಿ.ಜಿಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿದ್ದಾರೆ. 646 ಪಿ.ಜಿಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿ ಅನುಸರಿಸದ ಪಿ.ಜಿಗಳನ್ನು ಸೇರಿ ಇಲ್ಲಿಯವರೆಗೆ 2,320 ಅನಧಿಕೃತ ಪಿ.ಜಿಗಳಿಗೆ ನೋಟಿಸ್​ ಜಾರಿ ಮಾಡಲಾಗಿದೆ ಎಂದಿದ್ದಾರೆ.

PG
ಪಿ.ಜಿಗಳಿಗೆ ಬೀಗ ಹಾಕುತ್ತಿರುವ ಬಿಬಿಎಂಪಿ ಅಧಿಕಾರಿಗಳು (ETV Bharat)

ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಉದ್ದಿಮೆಗಳಿಗೆ ಮೂರು ಬಾರಿ ನೋಟಿಸ್​ ನೀಡಿದ್ದರೂ ಕೂಡಾ ಯಾವುದೇ ಕ್ರಮಗಳನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಈ ಸಂಬಂಧ ಪಿ.ಜಿಗಳನ್ನು ಬಿಬಿಎಂಪಿ ಕಾಯ್ದೆಯಡಿಯಲ್ಲಿ ತಕ್ಷಣದಿಂದ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಅದರಂತೆ 1 ಅನಧಿಕೃತ ಪಿ.ಜಿ ಹಾಗೂ 20 ಅಧಿಕೃತ ಸೇರಿ 21 ಪಿ.ಜಿಗಳು ಮಾರ್ಗಸೂಚಿ ಅನುಸರಿಸದೇ ಇರುವ ಕಾರಣ ಮುಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪಿ.ಜಿ ಕಟ್ಟಡಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಮತ್ತು ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 101 ಅನ್ನು ಪ್ರದರ್ಶಿಸುವ ಫಲಕವನ್ನು ಅಳವಡಿಸಿ, ಅದನ್ನು ಪ್ರದರ್ಶಿಸಬೇಕು. ಅಲ್ಲದೇ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಿಸಲು ಕ್ರಮವಹಿಸಬೇಕು ಎಂದು ಪಾಲಿಕೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

ಪಿ.ಜಿಗಳಿಗೆ ಪಾಲಿಕೆ ಮಾರ್ಗಸೂಚಿಗಳು:

  • ಪೇಯಿಂಗ್ ಗೆಸ್ಟ್​ಗಳ ಪ್ರವೇಶ, ನಿರ್ಗಮನ ಮತ್ತು ಆವರಣಗಳ ಸುತ್ತಮುತ್ತಲೂ ನಡೆಯುವ ಘಟನೆಗಳನ್ನು ಚಿತ್ರೀಕರಿಸುವ ಮತ್ತು ವಿಡಿಯೋ ಮತ್ತು ಫೂಟೇಜ್‌ಗಳನ್ನು 30 ದಿನಗಳ ಬ್ಯಾಕ್ಅಪ್ ಇರುವಂತೆ ಅಳವಡಿಸಬೇಕು.
  • ಪ್ರತಿಯೊಬ್ಬ ನಿವಾಸಿಯೂ ತಲಾ 70 ಚದರ ಅಡಿಗಳಿಗಿಂತ ಕನಿಷ್ಠ ಜಾಗವನ್ನು ಹೊಂದಿರಬೇಕು.
  • ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಹಾಗೂ ನೈರ್ಮಲ್ಯ ಹೊಂದಿರುವ ಸ್ನಾನಗೃಹಗಳು ಮತ್ತು ಶೌಚಾಲಯಗಳ ಸೇವೆಯನ್ನು ಒದಗಿಸಬೇಕು.
  • ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಬೇಕು.
  • ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ, ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 3 ತಿಂಗಳ ಅವಧಿಯೊಳಗೆ ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಪರವಾನಿಗೆ ಪಡೆಯಬೇಕು.
  • ಸೆಕ್ಯೂರಿಟಿಯನ್ನು ನೇಮಿಸಿಕೊಂಡಿರಬೇಕು.
  • ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಪಡೆದುಕೊಂಡಿರಬೇಕು.

ಇದನ್ನೂ ಓದಿ: ಅನಧಿಕೃತ ಕೊಳವೆ ಬಾವಿ, ಆಸ್ತಿ ಹಾನಿ ಪ್ರಕರಣಗಳ ಸಂಬಂಧ ಪಾಲಿಕೆಯಿಂದ ದೂರು: ಎಫ್‌ಐಆರ್‌ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.