ETV Bharat / state

14 ತಿಂಗಳ ಕಂದಮ್ಮ ಮನಸ್ಮಿತಾಳಿಗೆ ವಿಶ್ವ ದಾಖಲೆ ಗೌರವ ಪ್ರಶಸ್ತಿ - World Record Honor Award

14 ತಿಂಗಳ ಮಗು ಮನಸ್ಮಿತಾ ಅವರ ಅಸಾಧಾರಣ ನೆನಪಿನ ಶಕ್ತಿಗೆ ವಿಶ್ವ ದಾಖಲೆ ಗೌರವ ಪ್ರಶಸ್ತಿ ಲಭಿಸಿದೆ.

ಮನಸ್ಮಿತಾ
ಮನಸ್ಮಿತಾ
author img

By ETV Bharat Karnataka Team

Published : Mar 7, 2024, 10:47 PM IST

ಮನಸ್ಮಿತಾ

ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಡಿ.ಎಮ್ ಧನಲಕ್ಷ್ಮಿಕುಮಾರಿ ಮತ್ತು ಕೆ ಹುಲಿಯಪ್ಪಗೌಡ ಅವರುಗಳ 14 ತಿಂಗಳ ಮಗು ಮನಸ್ಮಿತಾ ಕಲಾಂ ವರ್ಲ್ಡ್ ರೆಕಾರ್ಡ್ಸ್ ಹೋಲ್ಡರ್ ಆಗಿ ಹೊರಹೊಮ್ಮಿದ್ದಾರೆ. 500 ಪದಗಳು ಮತ್ತು 336 ವಸ್ತುಗಳನ್ನು ಗುರುತಿಸಿ ವಿಶ್ವದ ಮೊದಲ ಮಗು ಎಂದು ಗುರುತಿಸಿಕೊಂಡಿದ್ದಾರೆ. ಅಸಾಧಾರಣ ಗ್ರಹಣ ಶಕ್ತಿ ಮೇಧಾವಿ ಎಂದು ಹೆಸರನ್ನು ಪುಸ್ತಕದಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಮನಸ್ಮಿತಾ

ಮನಸ್ಮಿತಾ ಅವರಿಗೆ ಕಳೆದ ಮಾರ್ಚ್ 3ರಂದು ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ. ಕೇವಲ 14 ತಿಂಗಳಿಗೆ ಈಕೆ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮಗುವಿನ ತಾಯಿ ಡಿ. ಎಮ್ ಧನಲಕ್ಷ್ಮಿಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಕೆ ಹುಲಿಯಪ್ಪಗೌಡ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಮನಸ್ಮಿತಾ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ, ಕರ್ನಾಟಕದ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳನ್ನು ಗುರುತಿಸಿದ್ದಾರೆ.

ಮನಸ್ಮಿತಾ

ಹಾಗೆಯೇ, 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು, 27 ಪ್ರಾಣಿಗಳು, 12 ಕೀಟಗಳು ಮತ್ತು 5 ಸರೀಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು, 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, ಒಟ್ಟು 500 ಪದಗಳನ್ನು ಗುರುತಿಸಿದ್ದಾರೆ.

ಈ ಹಿನ್ನೆಲೆ ಕಲಾಂ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣ ಶಕ್ತಿ ಮೇಧಾವಿ ಎಂದು ಗುರುತಿಸಿ ಶ್ಲಾಘಿಸಿದ್ದಾರೆ. ಮಾರ್ಚ್ 3ರಂದು ವಿಶ್ವ ದಾಖಲೆ ಗೌರವ ಸಮಾರಂಭದ ವೇದಿಕೆಯಲ್ಲಿ ಸನ್ಮಾನ ಮಾಡಿ ಗೌರವಿಸಿದ್ದಾರೆ.

ಇದನ್ನೂ ಓದಿ : ವಿಶ್ವ ದಾಖಲೆ ನಿರ್ಮಿಸಿದ ಹೆಣ್ಣು ಮಗು: 3 ತಿಂಗಳ ಪುಟ್ಟ ಬಾಲೆಯ 33 ದಾಖಲೆಗಳು ಸಂಪೂರ್ಣ ಸಿದ್ಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.