ETV Bharat / state

ಮಹಾಶಿವರಾತ್ರಿ: ಅರಮನೆಯ ತ್ರಿನೇಶ್ವರ ದೇವಾಲಯಕ್ಕೆ ಬಂತು 11 ಕೆಜಿ ಅಪರಂಜಿ ಚಿನ್ನದ ಕೊಳಗ

author img

By ETV Bharat Karnataka Team

Published : Mar 7, 2024, 5:36 PM IST

ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ 11 ಕೆಜಿ ಅಪರಂಜಿ ಚಿನ್ನದ ಕೊಳಗವನ್ನು ಹಸ್ತಾಂತರಿಸಲಾಗಿದೆ.

ತ್ರಿನೇಶ್ವರ ದೇವಾಲಯ
ತ್ರಿನೇಶ್ವರ ದೇವಾಲಯ
ದೇವಸ್ಥಾನದ ಸ್ಥಾನಿಕರಾದ ವೆಂಕಟೇಶ್ ಮಾಹಿತಿ ನೀಡಿದರು

ಮೈಸೂರು : ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ಭರದ ಸಿದ್ದತೆ ಕೈಗೊಳ್ಳಲಾಗುತ್ತಿದೆ. ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದಲ್ಲಿ ಶುಕ್ರವಾರ ತ್ರಿನೇಶ್ವರನಿಗೆ ಚಿನ್ನದ ಮುಖವಾಡ ಧಾರಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಇಂದು ಪೊಲೀಸ್ ಭದ್ರತೆಯೊಂದಿಗೆ ಜಿಲ್ಲಾ ಖಜಾನೆಯಿಂದ ಸುಮಾರು 11 ಕೆಜಿ ತೂಕದ ಚಿನ್ನದ ಮುಖವಾಡವನ್ನ ದೇವಾಲಯಕ್ಕೆ ಹಸ್ತಾಂತರಿಸಲಾಗಿದೆ.

ಜಯಚಾಮರಾಜೇಂದ್ರ ಒಡೆಯರ್ ಕಾಣಿಕೆಯಾಗಿ ನೀಡಿದ್ದ ಕೊಳಗದ ಮಾದರಿಯಲ್ಲಿರುವ ಈ ಚಿನ್ನದ ಮುಖವಾಡವನ್ನು ವರ್ಷಕ್ಕೊಮ್ಮೆ ‌ಮಹಾಶಿವರಾತ್ರಿ ದಿನ ತ್ರಿನೇಶ್ವರನಿಗೆ ಧಾರಣೆ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಜಾನೆಯಿಂದಲೇ ವಿವಿಧ ಪೂಜೆ ಕೈಂಕರ್ಯ ನೆರವೇರಲಿದೆ. ಈ ಬಾರಿ ಶಿವರಾತ್ರಿ ಬಳಿಕ ಶನಿವಾರ, ಭಾನುವಾರ ಸರ್ಕಾರಿ ರಜೆ ಹಿನ್ನೆಲೆ ಭಕ್ತರಿಗೆ 3 ದಿನ ಚಿನ್ನದ ಕೊಳಗ ವೀಕ್ಷಣೆಗೆ ದೇವಾಲಯದಿಂದ ಅವಕಾಶ ಮಾಡಿಕೊಡಲಾಗುತ್ತದೆ.

ಚಿನ್ನದ ಕೊಳಗದ ಹಿನ್ನೆಲೆ: 11 ಕೆಜಿ ಅಪರಂಜಿ ಚಿನ್ನದಿಂದ ಮಾಡಿರುವ ಶಿವನ ಮುಖವಾಡದ ಕೊಳಗವನ್ನ ಮೈಸೂರಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ತ್ರಿನೇಶ್ವರಗೆ ಮಾಡಿಸಿಕೊಟ್ಟಿದ್ದರು. ಮಹಾರಾಜರಿಗೆ ಗಂಡು ಮಕ್ಕಳು ಇರಲಿಲ್ಲ. ಹೀಗಾಗಿ ನನಗೆ ಗಂಡು ಮಕ್ಕಳು ಜನಿಸಿದರೆ ಅರಮನೆಯ ತ್ರಿನೇಶ್ವರ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರನಿಗೆ ಚಿನ್ನದ ಕೊಳಗವನ್ನ ಮಾಡಿಕೊಡುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದರು. ಅದರಂತೆ ಜಯಚಾಮರಾಜೇಂದ್ರ ಒಡೆಯರ್​ಗೆ ಗಂಡು ಮಗು ಜನನವಾಯಿತು.

ಹೀಗಾಗಿ ಒಡೆಯರ್​ ಅರಮನೆಯ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡದ ಕೊಳಗ, ನಂಜನಗೂಡಿನ ನಂಜುಂಡೇಶ್ವರ ಹಾಗೂ ಮಲೆಮಹದೇಶ್ವರನಿಗೆ ಮೂರು ಚಿನ್ನದ ಕೊಳಗವನ್ನ ಮಾಡಿಕೊಟ್ಟಿದ್ದಾರೆ. ಈ 11 ಕೆಜಿ ತೂಕದ ಚಿನ್ನದ ಕೊಳಗವನ್ನ ಶಿವರಾತ್ರಿಯ ದಿನ ತ್ರಿನೇಶ್ವರನಿಗೆ ಹಾಕಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ಆಡಳಿತ ಅಧಿಕಾರಿ ಹೇಳಿದ್ದೇನು? : ಚಾಮುಂಡಿ ಬೆಟ್ಟದ ದೇವಾಲಯಗಳ ಸಮೂಹದ ಆಡಳಿತ ಅಧಿಕಾರಿ ಕೃಷ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ''ಅರಮನೆ ಆವರಣದಲ್ಲಿರುವ ತ್ರಿನೇಶ್ವರ ಸ್ವಾಮಿಗೆ ಶಿವರಾತ್ರಿ ಹಬ್ಬದ ದಿನ ಧರಿಸಲು ಭದ್ರತೆ ದೃಷ್ಟಿಯಿಂದ ಜಿಲ್ಲಾ ಖಜಾನೆಯಲ್ಲಿ ಇಡಲಾಗಿದ್ದ ಚಿನ್ನದ ಕೊಳಗವನ್ನ ಭದ್ರತೆಯಲ್ಲಿ ದೇವಾಲಯಕ್ಕೆ ತರಲಾಗಿದೆ. ಇದಕ್ಕೆ ನಾಳೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಿ, ತ್ರಿನೇಶ್ವರನಿಗೆ ಧಾರಣೆ ಮಾಡಲಾಗುತ್ತದೆ. ಆನಂತರ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ತ್ರಿನೇಶ್ವರ ದೇವಾಲಯ
ತ್ರಿನೇಶ್ವರ ದೇವಾಲಯ

ಜಯಚಾಮರಾಜೇಂದ್ರ ಒಡೆಯರ್ ಅವರು ತಮಗೆ ಗಂಡು ಸಂತಾನವಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಗಂಡು ಸಂತಾನವಾದ್ದರಿಂದ ಹರಕೆ ತೀರಿಸಿ ತ್ರಿನೇಶ್ವರಗೆ 11 ಕೆಜಿ ತೂಕದ ಚಿನ್ನದ ಶಿವನ ಕೊಳಗ ಮಾಡಿಸಿಕೊಟ್ಟರು'' ಎಂದು ಅವರು ವಿವರಿಸಿದರು.

ದೇವಾಲಯದ ಸ್ಥಾನಿಕ ವೆಂಕಟೇಶ್ ಹೇಳಿದ್ದೇನು?: ''ನಾಳೆ ಬೆಳಗ್ಗೆ ತ್ರಿನೇಶ್ವರ ಸ್ವಾಮಿಯ ಮೂಲ ಮೂರ್ತಿಗೆ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ಬಳಿಕ ಚಿನ್ನದ ಶಿವನ ಮುಖವಾಡದ ಕೊಳಗವನ್ನ ಹಾಕಲಾಗುತ್ತದೆ. ನಂತರ ಶಿವರಾತ್ರಿಯ ದಿನ ನಾಲ್ಕು ಯಾಮದ ಪೂಜೆ ನೆರವೇರಿಸಲಾಗುತ್ತದೆ. ಬಳಿಕ ಶನಿವಾರ ಬೆಳಗ್ಗೆ ರುದ್ರಾಕ್ಷಿ ಮಂಟಪ ಉತ್ಸವ ನಡೆಯಲಿದ್ದು, ಬಳಿಕ ಶಿವರಾತ್ರಿ ಪೂಜೆ ಕೊನೆಗೊಳ್ಳುತ್ತದೆ'' ಎಂದು ದೇವಸ್ಥಾನದ ಸ್ಥಾನಿಕರಾದ ವೆಂಕಟೇಶ್ ಈಟಿವಿ ಭಾರತ್​ಗೆ ವಿವರಿಸಿದ್ದಾರೆ.

ಇದನ್ನೂ ಓದಿ : ಶಿವರಾತ್ರಿ ಹಿನ್ನೆಲೆ: ಅರಮನೆಯ ತ್ರಿನೇಶ್ವರನ ದರ್ಶನಕ್ಕೆ ಮುಗಿಬಿದ್ದ ಭಕ್ತಾದಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.