Highest T20 Score: ಜಿಂಬಾಬ್ವೆ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿದೆ. ಟಿ20 ವಿಶ್ವಕಪ್ ಉಪ-ಪ್ರಾದೇಶಿಕ ಆಫ್ರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಬುಧವಾರ ಗ್ಯಾಂಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ಬರೋಬ್ಬರಿ 344 ರನ್‌ಗಳನ್ನು ಸಿಡಿಸಿದೆ. ಇದರೊಂದಿಗೆ ಟಿ-20 ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿ ವಿಶ್ವ ದಾಖಲೆ ಬರೆದಿದೆ. ಈ ಅನುಕ್ರಮದಲ್ಲಿ ನೇಪಾಳ (ಮಂಗೋಲಿಯಾ ವಿರುದ್ಧ 314ರನ್) ದ ದಾಖಲೆಯನ್ನು ಮುರಿದಿದೆ.
ಸಿಕಂದರ್ ರಜಾ ಶತಕ: ಜಿಂಬಾಬ್ವೆ ಪರ ಸಿಕಂದರ್ ರಜಾ ಕೇವಲ 43 ಎಸೆತಗಳಲ್ಲಿ 133 ರನ್ ಸಿಡಿಸಿದರು. ಇದರಲ್ಲಿ 15 ಸಿಕ್ಸರ್‌ಗಳು ಸೇರಿವೆ. ಬ್ರಿಯಾನ್ ಬಿನೆಟ್ (50 ರನ್, 26 ಎಸೆತ 7x4; 1x6), ತಡಿವಾನಾಸೆ ಮರುಮಣಿ (62 ರನ್, 19 ಎಸೆತ 9x4; 4x6), ಕ್ಲೈವ್ ಮಂಡಡೆ (53* ರನ್, 17 ಎಸೆತ 3x4; 5x6) ತಂಡಕ್ಕೆ ಉತ್ತಮ ಆರಂಭ ನೀಡಿದರು. ಗ್ಯಾಂಬಿಯನ್ ಪರ ಬೌಲಿಂಗ್ನಲ್ಲಿ ಮೂಸಾ ಜೊಬರೆತ್ ನಾಲ್ಕು ಓವರ್‌ಗಳಲ್ಲಿ 93 ರನ್ ಬಿಟ್ಟುಕೊಟ್ಟರು. ಆಂಡ್ರಿ 2, ಅರ್ಜುನ್ ಸಿಂಗ್ ಮತ್ತು ಬುಬಾಕರ್ ತಲಾ 1 ವಿಕೆಟ್ ಪಡೆದರು.
ಈ ಬೃಹತ್ ಗುರಿ ಬೆನ್ನಟ್ಟಿದ ಗ್ಯಾಂಬಿಯಾ 14.4 ಓವರ್‌ಗಳಲ್ಲಿ 54 ರನ್‌ಗಳಿಗೆ ಸರ್ವಪತನ ಕಂಡಿತು. ಗ್ಯಾಂಬಿಯಾ ಪರ ಆಂಡ್ರೆ (12) ಹೊರತು ಪಡಿಸಿ ಯಾವೊಬ್ಬ ಬ್ಯಾಟರ್ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಜಿಂಬಾಬ್ವೆ 290 ರನ್‌ಗಳ ಜಯ ಸಾಧಿಸಿತು. ಇದು ಟಿ20ಯಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಈ ದಾಖಲೆ ನೇಪಾಳದ ಹೆಸರಿನಲ್ಲಿತ್ತು ( ನೇಪಾಳ vs ಮಂಗೋಲಿಯಾ 2023). ಜಿಂಬಾಬ್ವೆ ಬೌಲರ್‌ಗಳ ಪೈಕಿ ರಿಚರ್ಡ್ ನಗರವ 3, ಬ್ರ್ಯಾಂಡನ್ ಮಾವ್ಟಾ 3, ವೆಸ್ಲಿ ಮದ್ವೀರ 2, ರಿಯಾನ್ ಬರ್ಲ್ ಒಂದು ವಿಕೆಟ್ ಪಡೆದರು.
T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್
- ಜಿಂಬಾಬ್ವೆ - 344/4 ವಿರುದ್ಧ ಗ್ಯಾಂಬಿಯಾ, 2024
- ನೇಪಾಳ- 314/3 ವಿರುದ್ಧ ಮಂಗೋಲಿಯಾ, 2023
- ಭಾರತ- 297/6 ವಿರುದ್ಧ ಬಾಂಗ್ಲಾದೇಶ, 2024
- ಜಿಂಬಾಬ್ವೆ- 286/5 ವಿರುದ್ಧ ಸೆಶೆಲ್ಸ್ 2024
- ಅಫ್ಘಾನಿಸ್ತಾನ- 278/3 ವಿರುದ್ಧ ಐರ್ಲೆಂಡ್, 2019
- ಜೆಕ್ ರಿಪಬ್ಲಿಕ್- 278/4 vs ಟರ್ಕಿ, 2019
ಇದನ್ನೂ ಓದಿ: 'ಆ ದಿನ ಹೋಟೆಲ್ ಕೋಣೆಗೆ ಕರೆದು ನನ್ನ ಮೇಲೆ'!: ಬ್ರಿಜ್ ಭೂಷಣ್ ವಿರುದ್ದ ಸಾಕ್ಷಿ ಗಂಭೀರ ಆರೋಪ