ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಚಿನ್ನ ಗೆಲ್ಲುವ ಭರವಸೆ ಹುಟ್ಟಿಸಿದ್ದ ಯುವ ಪೈಲ್ವಾನ್ ಅಮನ್ ಸೆಹ್ರಾವತ್ 57 ಕೆಜಿ ಫ್ರೀ ಸ್ಟೈಲ್ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಜಪಾನ್ನ ಜಟ್ಟಿ ರೇ ಹಿಗುಚಿ ವಿರುದ್ಧ ಅವರು ಪರಾಭವಗೊಂಡರು. 21ರ ಹರೆಯದ ಅಮನ್ ಈಗ ಕಂಚಿನ ಪದಕಕ್ಕಾಗಿ ಆಡಲಿದ್ದಾರೆ.
ಕ್ವಾರ್ಟರ್ಫೈನಲ್ನಲ್ಲಿ ಪ್ರಸಿದ್ಧ ಎದುರಾಳಿಗಳ ವಿರುದ್ಧ ದೊಡ್ಡ ವಿಜಯ ಸಾಧಿಸಿ, ಫೈನಲ್‌ನತ್ತ ಮುನ್ನುಗ್ಗುತ್ತಿದ್ದ ಅಮನ್ ಚಿನ್ನದ ನಿರೀಕ್ಷೆ ಹುಟ್ಟಿಸಿದ್ದರು. ಆದರೆ, 2016ರ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ 28 ವರ್ಷದ ಜಪಾನಿನ ಹಿಗುಚಿ ಪಟ್ಟುಗಳ ಮುಂದೆ ಭಾರತದ ಜಟ್ಟಿಯ ಆಟ ನಡೆಯಲಿಲ್ಲ.
🇮🇳 Result Update: Men’s Freestyle #Wrestling🤼 57KG👇
— SAI Media (@Media_SAI) August 8, 2024
Tough luck for Aman Sehrawat 💔
The 21-year-old, who had put up impressive performances in the Round of 16 & Quarter-Finals lost to No. 1 seed Higuchi Rei by 0-10.
Aman will play for Bronze tomorrow against Puerto Rico’s… pic.twitter.com/KHjQTsHEtk
ತಾಂತ್ರಿಕವಾಗಿ ಉತ್ತಮ ಆಟ ಪ್ರದರ್ಶಿಸಿದ ಜಪಾನ್ ಪೈಲ್ವಾನ್ 0-10 ಅಂಕಗಳಿಂದ ಭಾರತದ ಕುಸ್ತಿಪಟುವನ್ನು ಕಟ್ಟಿಹಾಕಿದರು. ಆರಂಭದಲ್ಲಿಯೇ ಅಮಾನ್ ವಿರುದ್ಧ ಎರಗಿದ ಜಪಾನ್ ಪೈಲ್ವಾನ್ ಎರಡೇ ನಿಮಿಷದಲ್ಲಿ 4-0 ಮುನ್ನಡೆ ಸಾಧಿಸಿದರು. ಅಮನ್ ಅವರ ಕಾಲುಗಳನ್ನೇ ಗುರಿಯಾಗಿಸಿಕೊಂಡು, ಪಟ್ಟು ಹಾಕಿದ್ದರಿಂದ ಸೋಲುವಂತಾಯಿತು.
ಅಮನ್ ಮಾಜಿ ವಿಶ್ವ ಚಾಂಪಿಯನ್ ಅಲ್ಬೇನಿಯಾದ ಝೆಲಿಮ್ಖಾನ್ ಅಬಕರೋವ್ ಅವರನ್ನು ಕ್ವಾರ್ಟರ್ಫೈನಲ್ನಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದರು.
ಇದನ್ನೂ ಓದಿ: ಮಹಿಳೆಯರ 57 ಕೆಜಿ ವಿಭಾಗದ ಕುಸ್ತಿ: ಪ್ರೀ-ಕ್ವಾರ್ಟರ್‌ನಲ್ಲಿ ಅಂಶು ಮಲಿಕ್ಗೆ ಸೋಲು - Anshu Malik