ETV Bharat / sports

ವಿಂಬಲ್ಡನ್​ ಟೆನಿಸ್​ ಲೋಕಕ್ಕೆ ಹೊಸ ರಾಣಿ: ಪೌಲಿನಿ ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟ ಬಾರ್ಬೊರಾ ಕ್ರೆಚಿಕೊವಾ - Wimbledon final - WIMBLEDON FINAL

ಈ ಬಾರಿಯ ವಿಂಬಲ್ಡನ್​ ಪ್ರಶಸ್ತಿಯು ಜೆಕ್​​ ಗಣರಾಜ್ಯದ ಬಾರ್ಬೊರಾ ಕ್ರೆಚಿಕೊವಾಗೆ ಒಲಿದಿದ್ದು, ಈ ಮೂಲಕ ಸತತ 7 ವರ್ಷ ಹೊಸ ಚಾಂಪಿಯನ್​ ಹೊರಹೊಮ್ಮಿದಂತಾಗಿದೆ.

ಬಾರ್ಬೊರಾ ಕ್ರೆಚಿಕೊವಾ
ಬಾರ್ಬೊರಾ ಕ್ರೆಚಿಕೊವಾ (AP)
author img

By ETV Bharat Karnataka Team

Published : Jul 14, 2024, 3:56 PM IST

ಲಂಡನ್​​: 2024ರ ಸಾಲಿನ ವಿಂಬಲ್ಡನ್​​ ಗ್ರ್ಯಾನ್​ಸ್ಲಾಮ್​ ಟೂರ್ನಿಯ ಮಹಿಳಾ ಸಿಂಗಲ್ಸ್​ ಕಿರೀಟ ಜೆಕ್​​ ಗಣರಾಜ್ಯದ ಬಾರ್ಬೊರಾ ಕ್ರೆಚಿಕೊವಾ ಅವರ ಪಾಲಾಗಿದೆ. ಈ ಮೂಲಕ ಸತತ 7 ನೇ ವರ್ಷವೂ ಹೊಸ ತಾರೆ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಫೈನಲ್​ನಲ್ಲಿ ಸೋಲುವ ಮೂಲಕ ಇಟಲಿಯ ಜಾಸ್ಮಿನ್​​ ಪೌಲಿನಿ ನಿರಾಸೆ ಅನುಭವಿಸಿದರು.

31 ಶ್ರೇಯಾಂಕಿತೆ ಕ್ರೆಚಿಕೊವಾ ಮತ್ತು 7ನೇ ಶ್ರೇಯಾಂಕಿತೆ ಪೌಲಿನಿ ನಡುವೆ ಶನಿವಾರ ನಡೆದ ಫೈನಲ್​ ಪಂದ್ಯದ ಹಣಾಹಣಿ ರೋಚಕವಾಗಿತ್ತು. 6-2, 2-6, 6-4 ಸೆಟ್​ಗಳಿಂದ ಕ್ರೆಚಿಕೊವಾ ಜಯ ಸಾಧಿಸಿ, ಚೊಚ್ಚಲ ವಿಂಬಲ್ಡನ್​ ಪ್ರಶಸ್ತಿಯನ್ನು ಎತ್ತಿದರು. ಈ ವರ್ಷ ನಡೆದ ಫ್ರೆಂಚ್​ ಓಪನ್​​ನ ಫೈನಲ್​ನಲ್ಲಿ ಸೋತಿದ್ದ ಪೌಲಿನಿ ಇಲ್ಲಿಯೂ ಸೋಲುವ ಮೂಲಕ ಗ್ರ್ಯಾನ್​​ಸ್ಲಾಮ್​ ಪ್ರಶಸ್ತಿಯಿಂದ ವಂಚಿತರಾದರು.

ಜಿದ್ದಾಜಿದ್ದಿನ ಹೋರಾಟ ಹೀಗಿತ್ತು: 2 ಗಂಟೆಗೂ ಅಧಿಕ ನಡೆದ ಫೈನಲ್​ ಹೋರಾಟದಲ್ಲಿ ಇಬ್ಬರೂ ಆಟಗಾರ್ತಿಯರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಮೊದಲ ಸೆಟ್​ ಅನ್ನು 6-2 ಅಂತರದಿಂದ ಕ್ರೆಚಿಕೊವಾ ಗೆದ್ದರು. ಎರಡನೇ ಸೆಟ್​ನಲ್ಲಿ ತುರುಸಿನ ಪೈಪೋಟಿ ನಡುವೆ ಪೌಲಿನಿ 6-2 ಪಾಯಿಂಟ್​​ನಿಂದ ಸೆಟ್​ ವಶಕ್ಕೆ ಪಡೆದರು. ಕೊನೆಯ ಸೆಟ್​​ನಲ್ಲಿ ಸಮಬಲದ ಹೋರಾಟ ಕಂಡುಬಂದರೂ, ಪೌಲಿನಿ ಎಸಗಿದ ಕೆಲ ತಪ್ಪುಗಳಿಂದ 6-4 ರಲ್ಲಿ ಕ್ರೆಚಿಕೊವಾ ಗೆಲುವು ಸಾಧಿಸಿ ಎರಡನೇ ಗ್ರ್ಯಾನ್​​ಸ್ಲಾಮ್​ ಜಯಿಸಿದರು. ಇದಕ್ಕೂ ಮೊದಲು 2021 ರಲ್ಲಿ ಫ್ರೆಂಚ್​ ಓಪನ್​ ಗೆದ್ದಿದ್ದರು.

ಪೌಲಿನಿಗೆ ಫೈನಲ್​ ಫೋಬಿಯಾ: 28 ವರ್ಷದ ಜಾಸ್ಮಿನ್​ ಸತತ 2ನೇ ಫೈನಲ್​​ನಲ್ಲಿ ಸೋಲು ಕಂಡರು. ಈಚೆಗೆ ನಡೆದ ಫ್ರೆಂಚ್ ಓಪನ್​ನಲ್ಲಿ ಘಟಾನುಘಟಿಗಳನ್ನು ಸೋಲಿಸಿ ಅಂತಿಮ ಹಂತಕ್ಕೆ ಬಂದರೂ, ವಿಶ್ವ ನಂಬರ್​ 1 ಆಟಗಾರ್ತಿ ಇಗಾ ಸ್ವಿಯಾಟೆಕ್​ ವಿರುದ್ಧ ಸೋತು ರನ್ನರ್​ ಅಪ್​​ ಪ್ರಶಸ್ತಿ ಪಡೆದಿದ್ದರು. ವಿಂಬಲ್ಡನ್​ನಲ್ಲೂ ಫೈನಲ್​​ ತಲುಪಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪೌಲಿನಿಗೆ ಕ್ರೆಚಿಕೊವಾ ಶಾಕ್​ ನೀಡಿದರು. ಈ ಮೂಲಕ ಸತತ ಎರಡು ಫೈನಲ್​ಗಳಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದರು.

ಪ್ರಶಸ್ತಿಯ ಮೊತ್ತ: ವಿಂಬಲ್ಡನ್​ ಪ್ರಶಸ್ತಿ ಎತ್ತಿಹಿಡಿದ ಜೆಕ್​ ಗಣರಾಜ್ಯದ ಕ್ರೆಚಿಕೊವಾಗೆ 27,00000 ಪೌಂಡ್​ (28 ಕೋಟಿ ರೂಪಾಯಿ) ನಗದು ಬಹುಮಾನ ಪಡೆದರೆ, ರನ್ನರ್​ ಅಪ್​ ಪೌಲಿನಿ 14,00000 ಪೌಂಡ್​ (14.8 ಕೋಟಿ ರೂಪಾಯಿ) ನಗದು ಬಹುಮಾನ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: ವಿಂಬಲ್ಡನ್ 2024: ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸಿದ ಸಿನಿಯಾಕೋವಾ - ಟೌನ್ಸೆಂಡ್ - Wimbledon 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.