ETV Bharat / sports

ಅಬ್ಬಾ! F​1 ರೇಸ್​ನಲ್ಲಿ ಬಳಸುವ ಸ್ಪೋರ್ಟ್ಸ್​ ಕಾರಿನ ಬೆಲೆ ಎಷ್ಟು ಗೊತ್ತಾ: ನೀವು ಊಹಿಸಲು ಅಸಾಧ್ಯ! - F1 race car price - F1 RACE CAR PRICE

ಫಾರ್ಮುಲಾ ಒನ್​ ರೇಸ್​ನಲ್ಲಿ ಬಳಸುವ ಕಾರಿನ ಬೆಲೆ ಎಷ್ಟು ಮತ್ತು ಭಾರತ ದೇಶದಲ್ಲಿ ಈ ಕ್ರೀಡೆ ಎಷ್ಟು ಜನಪ್ರಿಯತೆ ಪಡೆದಿದೆ ಎಂದು ಈ ಸುದ್ದಿಯಲ್ಲಿ ತಿಳಿಯಿರಿ.

ಎಫ್​ ಒನ್​ ರೇಸ್​ ಕಾರ್​
ಎಫ್​1​ ರೇಸ್​ ಕಾರ್​ (IANS)
author img

By ETV Bharat Sports Team

Published : Sep 24, 2024, 3:10 PM IST

ಹೈದರಾಬಾದ್​: ಕಾರುಗಳ ಸ್ಪರ್ಧೆ ಎಂದಾಕ್ಷಣ ತಕ್ಷಣಕ್ಕೆ ನೆನಪಿಗೆ ಬರುವುದು ಫಾರ್ಮುಲಾ ಒನ್​ ಅಥವಾ F1 ರೇಸ್​. ಇದು ಭಾರತದಲ್ಲಿ ಪ್ರಸಿದ್ಧಿ ಪಡೆದಿಲ್ಲವಾದರೂ ವಿದೇಶದಲ್ಲಿ ಇದಕ್ಕೆ ದೊಡ್ಡ ಫ್ಯಾನ್​ಬೇಸ್​ ಇದೆ. ವಿದೇಶಿಗರು ಇದನ್ನು ಪ್ರತಿಷ್ಠೆಯ ಗೇಮ್​ ಆಗಿ ಕಾಣುತ್ತಾರೆ. ಆದ್ರೆ ನೀವು ಎಂದಾದ್ರೂ ಈ ರೇಸ್​ನಲ್ಲಿ ಬಳಸಲಾಗುವ ಕಾರಿನ ಬೆಲೆ ಎಷ್ಟಿರಬಹುದು ಎಂದು ಯೋಚಿಸಿದ್ದೀರಾ?. ಹಾಗಾದ್ರೆ ಬನ್ನಿ ಈ ಸುದ್ದಿಯಲ್ಲಿ ಫಾರ್ಮುಲಾ ಒನ್​ನಲ್ಲಿ ಬಳಸಲಾಗುವ ಕಾರಿನ ಬೆಲೆ ಎಷ್ಟು ಮತ್ತು ಈ ಕ್ರೀಡೆ ಎಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ ಎಂಬುದರ ಕುರಿತು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ಎಫ್​ 1 ಇತಿಹಾಸ: ಫಾರ್ಮುಲಾ ಒನ್​ ಕ್ರೀಡೆಯೂ 1920 ಮತ್ತು 30ರ ನಡುವೆ ಹುಟ್ಟಿಕೊಂಡಿತು. ಆರಂಭದಲ್ಲಿ ಇದನ್ನು ಯುರೋಪಿಯನ್​ ಗ್ರ್ಯಾಂಡ್​ ಪ್ರಿಕ್ಸ್​ ಮೋಟಾರ್​ ರೇಸಿಂಗ್​ ಎಂದು ಕರೆಯಲಾಗುತಿತ್ತು. ಇದೀಗ ಫಾರ್ಮುಲಾ 1 ಆಗಿ ಬದಲಾಯಿಸಲಾಗಿದೆ. ನಂತರ 1950 ರಿಂದ ಎಫ್​1 ಕ್ರೀಡಾವಳಿಗಳನ್ನು ಆಯೋಜಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಈ ಕ್ರೀಡೆ ಜಗಜ್ಜಾಹೀರವಾಗತೊಡಗಿತು.

ಎಫ್​ ಒನ್​ ರೇಸ್​ ಕಾರ್​
ಎಫ್​1​ ರೇಸ್​ ಕಾರ್​ (IANS)

ಎಫ್ 1ನಲ್ಲಿ ಬಳಸುವ ಕಾರುಗಳು: ಫಾರ್ಮುಲಾ ಒನ್​ನಲ್ಲಿ ಒಟ್ಟು 20 ಚಾಲಕರನ್ನೊಳಗೊಂಡ 10 ತಂಡಗಳು ಭಾಗವಹಿಸುತ್ತವೆ. ಈ ಗೇಮ್​ನಲ್ಲಿ ಬಳಸಲಾಗುವ ಕಾರುಗಳೆಂದರೇ ಫೆರಾರಿ (1950 ರ ಸೀಸನ್​ನಿಂದಲೂ ಈ ಕಾರನ್ನು ಬಳಸಲಾಗುತ್ತಿದೆ) ಮತ್ತು ಮೆಕ್‌ಲಾರೆನ್ ಮತ್ತು 2016ರ ಸೇರ್ಪಡೆಗೊಂಡ ಹಾಸ್​ ಕಾರನ್ನು ಈ ಕ್ರೀಡೆಯಲ್ಲಿ ಬಳಸಲಾಗುತ್ತದೆ.

ಎಲ್ಲಿ ಖ್ಯಾತಿ ಪಡೆದಿದೆ: ಎಫ್​ ಒನ್​ ರೇಸ್​ ಒಟ್ಟು 21 ದೇಶಗಳಲ್ಲಿ ಆಡಲಾಗುತ್ತದೆ. ಈ ದೇಶಗಳು ಈ ಎಫ್​ ಒನ್​ ಟ್ರ್ಯಾಕ್​ ಅನ್ನು ಹೊಂದಿವೆ. ಅವುಗಳಲ್ಲಿ ಸಿಲ್ವರ್‌ಸ್ಟೋನ್, ಸ್ಪಾ-ಫ್ರಾಂಕೋರ್‌ಚಾಂಪ್ಸ್ ಮತ್ತು ಸುಜುಕಾ ಕ್ಲಾಸಿಕ್ ಟ್ರ್ಯಾಕ್‌ಗಳಾಗಿ ಖ್ಯಾತಿ ಪಡೆದಿವೆ. ಜೊತೆಗೆ ಲಾಸ್ ವೇಗಾಸ್, ಮಿಯಾಮಿ ಮತ್ತು ಕತಾರ್ ಸೇರಿದಂತೆ ರೋಸ್ಟರ್‌ ಎಂಬ ಟ್ರ್ಯಾಕ್​ಗಳು ಇತ್ತೀಚಿನ ಸೇರ್ಪಡೆಗೊಂಡಿವೆ. ಸಿಲ್ವರ್‌ಸ್ಟೋನ್ 1950ರಲ್ಲಿ ಮೊದಲ ಬಾರಿಗೆ F1 ರೇಸ್ ಅನ್ನು ಆಯೋಜಿಸಿತು. ಈ ಸ್ಥಳ ಇಂದಿಗೂ ಜನಪ್ರಿಯವಾಗಿದೆ. ಫಾರ್ಮುಲಾ 1ರ ಉದ್ಘಾಟನಾ ಋತುವಿನಲ್ಲಿ ಏಳು ಸುತ್ತಿನ ಆಟವನ್ನು ನಡೆಸಲಾಗಿತ್ತು.

ಎಫ್​1​ ರೇಸ್​ ಕಾರ್​
ಎಫ್​1​ ರೇಸ್​ ಕಾರ್​ (IANS)

ಎಫ್​ 1 ಸಮಯ: ಫಾರ್ಮುಲಾ ಒನ್​ ರೇಸ್‌ ಸಾಮಾನ್ಯವಾಗಿ ಒಂದೂವರೆ ಗಂಟೆ ಮತ್ತು ಎರಡು ಗಂಟೆಗಳ ಕಾಲ ನಡೆಯುತ್ತದೆ. ಪ್ರತಿ ಓಟದ ಅಂತರವು 305 ಕಿಲೋಮೀಟರ್‌ಗಳನ್ನು ಮೀರಿರುತ್ತದೆ.

ಎಲ್ಲಿ, ಎಷ್ಟು ಜನಪ್ರಿಯತೆ: ಪ್ರಪಂಚದಾದ್ಯಂತ F1 ನ ಜನಪ್ರಿಯತೆ ದಿನ ಕಳೆದಂತೆ ಹೆಚ್ಚಾಗತೊಡಗುತ್ತಿದೆ. ಆದಾಗ್ಯೂ ದಕ್ಷಿಣ ಅಮೆರಿಕದಲ್ಲಿ ಇದು ಅತೀ ಹೆಚ್ಚು ಜನಪ್ರಿಯತೆ ಪಡೆದಿದೆ. ಅಲ್ಲಿ ಪ್ರತಿ ಐವರಲ್ಲಿ ಇಬ್ಬರು ಈ ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಶೇಕಡವಾರು ನೋಡುವುದಾರೇ ದಕ್ಷಿಣ ಅಮೆರಿಕ (40%), ಮಿಡಲ್​ ಈಸ್ಟ್​ ಮತ್ತು ನಾರ್ಥ್​ ಅಮೆರಿಕ (32%), ಏಷ್ಯಾ ಫೆಸಿಫಿಕ್​ (29%) ಮತ್ತು ಯುರೋಪ್ (27%) ನಲ್ಲಿ ಪ್ರಖ್ಯಾತಿ ಪಡೆದಿದೆ. ಉತ್ತರ ಅಮೆರಿಕದಲ್ಲಿಯೂ ಸಹ, ಐದನೇ ಒಂದು ಭಾಗದಷ್ಟು (19%) ಜನ ಇದರ ಮೇಲೆ ಆಸಕ್ತಿ ಹೊಂದಿದ್ದಾರೆ. ಇದರಲ್ಲಿ ಬ್ರೆಜಿಲ್​ (44%) ಮೊದಲ ಸ್ಥಾನದಲ್ಲಿದೆ. ಭಾರತದಲ್ಲೂ ಕೂಡ ಶೇ.36ರಷ್ಟು ಜನ ಈ ಕ್ರೀಡೆ ಮೇಲೆ ಆಸಕ್ತಿ ಹೊಂದಿದ್ದಾರೆ.

ಕಾರಿನ ಬೆಲೆ: ಒಂದು F1 ರೇಸ್​ ಕಾರಿನ ಬೆಲೆ ಸುಮಾರು $15.9 ಮಿಲಿಯನ್ ಡಾಲರ್​ ಆಗಿದೆ. ಭಾರತೀಯ ರೂಪಾಯಿಯಲ್ಲಿ 125 ಕೋಟಿಗೂ ಅಧಿಕವಾಗಿದೆ.

ಇದನ್ನೂ ಓದಿ: ಗಾಲ್ಫ್​ ಅಂಕಗಳಿಗಿದೆ ವಿಶೇಷ ಹೆಸರು; ಇಲ್ಲಿ ಪ್ಲಸ್​ಗಿಂತ ಮೈನಸ್ ಅಂಕ ಗಳಿಸಿದವರೇ ವಿನ್ನರ್! ​ - Golf Scores names

ETV Bharat Logo

Copyright © 2024 Ushodaya Enterprises Pvt. Ltd., All Rights Reserved.