ಹೈದರಾಬಾದ್: ಪ್ಯಾರಿಸ್ ಒಲಿಂಪಿಕ್ಸ್ ಆರಂಭಗೊಂಡು ಇಂದಿಗೆ 15 ದಿನಗಳು ಪೂರ್ಣಗೊಂಡಿದ್ದು, ನಾಳೆ ಈ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟು 184 ದೇಶಗಳು ಭಾಗವಹಿಸಿದ್ದವು. ಈ ಪೈಕಿ ಯುಎಸ್ಎ ಅತೀ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗಾದರೆ ಹೆಚ್ಚಿನ ಪದಕ ಗೆದ್ದ ಅಗ್ರ ಐದು ದೇಶಗಳು ಮತ್ತು ಪದಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಈ ಸುದ್ಧಿಯಲ್ಲಿ ತಿಳಿಯೋಣ.
ಮೆಡಲ್ ಟ್ಯಾಲಿ - ಟಾಪ್ 5 ರಾಷ್ಟ್ರ್ಖಗಳ ಪದಕ ಪಟ್ಟಿ ಮತ್ತು ಭಾರತದ ಸ್ಥಾನ
ಅಮೆರಿಕ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಅಮೆರಿಕ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದುವರೆರೆಗೂ ಒಟ್ಟು 111 ಪದಕಗಳನ್ನು ಗೆದ್ದುಕೊಂಡಿದೆ. ಈ ಪೈಕಿ 33 ಚಿನ್ನ, 39 ಬೆಳ್ಳೆ, 39 ಕಂಚಿನ ಪದಕಗಳು ಸೇರ್ಪಡೆಗೊಂಡಿವೆ. ಅಥ್ಲೇಟಿಕ್ಸ್ನಲ್ಲಿ ಅತೀ ಹೆಚ್ಚು 11 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.
ಚೀನಾ: ಪದಕ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಇದೂವರೆಗೂ ಒಟ್ಟು 83 ಪದಕಗಳನ್ನು ಪಡೆದಿದೆ. ಇದರಲ್ಲಿ 33 ಚಿನ್ನ, 27 ಬೆಳ್ಳಿ, 23 ಕಂಚಿನ ಪದಕಗಳು ಸೇರಿವೆ. ಡೈವಿಂಗ್ ಸ್ಪರ್ಧೆಯೊಂದರಲ್ಲೇ ಚೀನಾ 7 ಚಿನ್ನದ ಪದಕಗಳನ್ನು ಬಾಚಿಕೊಂಡಿದೆ.
ಆಸ್ಟ್ರೇಲಿಯಾ: 18 ಚಿನ್ನದ ಪದಕಗಳನ್ನು ಪಡೆದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದು ಒಟ್ಟಾರೆ 48 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬೆಳ್ಳಿ 16, ಮತ್ತು 14 ಕಂಚಿನ ಪದಕಗಳು ಸೇರಿವೆ. ಸ್ವಿಮ್ಮಿಂಗ್ನಲ್ಲಿ ಅತೀ ಹೆಚ್ಚು 7 ಪದಕಗಳನ್ನು ಗೆದ್ದುಕೊಂಡಿದೆ.
ಜಪಾನ್: ಜಪಾನ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ಒಟ್ಟು 37 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 16 ಚಿನ್ನ, 8 ಬೆಳ್ಳಿ, 13 ಕಂಚಿನ ಪದಕಗಳು ಸೇರಿವೆ. ಕುಸ್ತಿ ಪಂದ್ಯವೊಂದರಲ್ಲೇ ಅತೀ ಹೆಚ್ಚು 5 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.
ಗ್ರೇಟ್ ಬ್ರಿಟನ್: ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ಒಟ್ಟು 57 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 14 ಚಿನ್ನ, 20 ಬೆಳ್ಳಿ, 23 ಕಂಚಿನ ಪದಕಗಳು ಸೇರಿವೆ. ರೋಯಿಂಗ್ನಲ್ಲಿ ಅತೀ ಹೆಚ್ಚು 3 ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ.
ಭಾರತ: ಈ ವರ್ಷ ಒಲಿಂಪಿಕ್ಸ್ನಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿದೆ. ಇದೂ ವರೆಗೂ ಕೇವಲ 6 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 1 ಬೆಳ್ಳೆ ಮತ್ತು 5 ಕಂಚಿನ ಪದಕಗಳು ಸೇರಿವೆ. ಆದರೆ ಇದೂವರೆಗೂ ಭಾರತ ಒಂದೇ ಒಂದು ಚಿನ್ನದ ಪದಕವನ್ನು ಗೆದ್ದಿಲ್ಲ. ಇದರೊಂದಿಗೆ ಪದಕ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದೆ. ಆದರೆ, ಭಾರತದ ಮಹಿಳಾ ಕುಸ್ತಿಪಟು ರಿತಿಕಾ ಹೂಡಾ ಮತ್ತು ಗಾಲ್ಫ್ ಫಲಿತಾಂಶಗಳು ಇನ್ನೂ ಬರಬೇಕಿದೆ. ಈ ಎರಡೂ ಪಂದ್ಯಗಳಲ್ಲಿ ಚಿನ್ನ ಬರದೇ ಹೋದಲ್ಲಿ ಭಾರತದ ಈ ಬಾರಿಯ ಒಲಿಂಪಿಕ್ಸ್ ಅಭಿಯಾನ ಚಿನ್ನದ ಪದಕವಿಲ್ಲದೆ ಕೊನೆಗೊಳ್ಳಲಿದೆ.
ಇದನ್ನೂ ಓದಿ: ಒಲಿಂಪಿಕ್ ಬ್ರೇಕಿಂಗ್‌ನ ಮೊದಲ ಚಿನ್ನದ ಪದಕ ಗೆದ್ದ ಜಪಾನ್ ಬಿ-ಗರ್ಲ್ ಅಮಿ - Japan B girl won gold medal