ಜೈಪುರ (ರಾಜಸ್ಥಾನ): ರಾಜಸ್ಥಾನ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತು. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಆಡುವಾಗ 183 ರನ್ ಗಳಿಸಿತು. ರಾಜಸ್ಥಾನ ತಂಡವು 5 ಎಸೆತಗಳು ಬಾಕಿ ಇರುವಾಗಲೇ ಟಾರ್ಗೆಟ್ ತಲುಪಿತು.
ಐಪಿಎಲ್ ವೃತ್ತಿಜೀವನದ 8ನೇ ಶತಕ ಸಿಡಿಸಿದ ಕೊಹ್ಲಿ: ಆರ್‌ಸಿಬಿ ಪರ ವಿರಾಟ್ ಕೊಹ್ಲಿ 113 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ಐಪಿಎಲ್ ವೃತ್ತಿಜೀವನದ 8ನೇ ಶತಕ ದಾಖಲಿಸಿದರು. ಇವರಲ್ಲದೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡ 44 ರನ್ ಕೊಡುಗೆ ನೀಡಿದರು. ಮತ್ತೊಂದೆಡೆ, ಆರ್‌ಆರ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯ ಸ್ಕೋರ್‌ನಲ್ಲಿ ಔಟಾದರೂ, ಜೋಸ್ ಬಟ್ಲರ್ ಅವರ ಶತಕ ಮತ್ತು ಸಂಜು ಸ್ಯಾಮ್ಸನ್ ಅವರ ಪ್ರಮುಖ ಇನ್ನಿಂಗ್ಸ್‌ನಿಂದ ರಾಜಸ್ಥಾನ ತಂಡವು ಆರ್‌ಸಿಬಿಯನ್ನು ಸೋಲಿಸಿತು.
ಹಿಡಿತ ಸಾಧಿಸದ ಆರ್‌ಸಿಬಿ ಬೌಲರ್ಗಳು: 10ನೇ ಓವರ್ವರೆಗೆ ರಾಜಸ್ಥಾನ ರಾಯಲ್ಸ್ ಸ್ಕೋರ್ 1 ವಿಕೆಟ್ಗೆ 95 ರನ್ ಆಗಿತ್ತು. ಮುಂದಿನ 3 ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್ಗಳ ಹಿಡಿತ ಸಾಧಿಸಲಿಲ್ಲ. 11ನೇ ಓವರ್‌ನಲ್ಲಿ ಮಯಾಂಕ್ ದಾಗರ್ 14 ರನ್ ನೀಡಿದರೆ, 12ನೇ ಓವರ್‌ನಲ್ಲಿ ಹಿಮಾಂಶು ಶರ್ಮಾ 15 ರನ್ ನೀಡಿದರು. ಇವರಲ್ಲದೆ ಯಶ್ ದಯಾಳ್ ಕೂಡ 13ನೇ ಓವರ್‌ನಲ್ಲಿ 13 ರನ್ ನೀಡಿದರು. ಆರ್‌ಆರ್‌ಗೆ ಕೊನೆಯ 5 ಓವರ್‌ಗಳಲ್ಲಿ ಕೇವಲ 32 ರನ್‌ಗಳ ಅಗತ್ಯವಿತ್ತು. ಆದರೆ 14ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ನಂತರದ ಓವರ್‌ನಲ್ಲಿ ರಿಯಾನ್ ಪರಾಗ್ ವಿಕೆಟ್‌ಗಳು ಆರ್‌ಸಿಬಿಗೆ ಭರವಸೆ ಮೂಡಿಸಿದವು.
ಜೋಸ್ ಬಟ್ಲರ್ ಇನ್ನೂ ಕ್ರೀಸ್‌ನಲ್ಲಿದ್ದರು. ಸಾಕಷ್ಟು ಎಸೆತಗಳು ಬಾಕಿ ಇರುವ ಕಾರಣ ಆರ್‌ಆರ್ ಬ್ಯಾಟ್ಸ್‌ಮನ್‌ಗಳು ಯಾವುದೇ ರಿಸ್ಕ್ ಅನ್ನು ತೆಗೆದುಕೊಳ್ಳಲಿಲ್ಲ. ಬಟ್ಲರ್ 58 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಆರ್‌ಆರ್ ತಂಡವನ್ನು 6 ವಿಕೆಟ್‌ಗಳಿಂದ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ಐಪಿಎಲ್ 2024ರಲ್ಲಿ ಇದು ರಾಜಸ್ಥಾನದ ಸತತ ನಾಲ್ಕನೇ ಗೆಲುವು ಮತ್ತು ತಂಡವು ಈಗ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಿಕ್ಸರ್ ಬಾರಿಸಿ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟ ಬಟ್ಲರ್: ವಿರಾಟ್ ಕೊಹ್ಲಿ ಆರ್‌ಆರ್ ಮತ್ತು ಆರ್‌ಸಿಬಿ ಪಂದ್ಯದಲ್ಲಿ 67 ಎಸೆತಗಳನ್ನು ಆಡುವ ಮೂಲಕ ತಮ್ಮ ಐಪಿಎಲ್ IPL ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಆದರೆ, ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಅವರ ಅದ್ಭುತ ಇನ್ನಿಂಗ್ಸ್ ಮತ್ತು ಅವರ ನಡುವಿನ 148 ರನ್ ಜೊತೆಯಾಟಕ್ಕೆ ಹೋಲಿಸಿದರೆ ವಿರಾಟ್ ಅವರ ಶತಕವು ಆರ್‌ಸಿಬಿಗೆ ಗೆಲುವು ತಂದುಕೊಡಲಿಲ್ಲ. ಜೋಸ್ ಬಟ್ಲರ್ ಸಿಕ್ಸರ್ ಬಾರಿಸುವ ಮೂಲಕ ರಾಜಸ್ಥಾನಕ್ಕೆ ಗೆಲುವು ತಂದುಕೊಟ್ಟರು. ಜೊತೆಗೆ ಈ ಸಿಕ್ಸರ್ ಮೂಲಕ ತಮ್ಮ ಶತಕವನ್ನೂ ಪೂರೈಸಿದರು.