ETV Bharat / sports

ಕೇವಲ 3 ರನ್​ಗಳಿಸಿ ಔಟಾದರೂ ದೊಡ್ಡ ದಾಖಲೆ ಬರೆದ ವಿರಾಟ್​ ಕೊಹ್ಲಿ!; ಯಾವುದು ಆ ರೆಕಾರ್ಡ್​​ - VIRAT KOHLI

ಗಬ್ಬಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

VIRAT KOHLI VS RAHUL DRAVID  VIRAT KOHLI RECORDS  INDIA VS AUSTRALIA GABBA TEST  BORDER GAVASKAR TROPHY
Virat Kohli Break Dravid Record (source ANI)
author img

By ETV Bharat Sports Team

Published : 3 hours ago

Virat kohli Breaks Dravid Record: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಗಬ್ಬಾ ಮೈದಾನದಲ್ಲಿ 3ನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿರುವ ಕಾಂಗರೂ ಪಡೆ ಬೃಹತ್​ ಸ್ಕೋರ್​ ಕಲೆ ಹಾಕಿದೆ. ಟ್ರಾವಿಸ್​ ಹೆಡ್​ (152), ಸ್ಟೀವ್​ ಸ್ಮಿತ್​ (100), ಅಲೆಕ್ಸ್​ ಕ್ಯಾರಿ (70) ಬ್ಯಾಟಿಂಗ್​ ನೆರವಿನಿಂದ 445 ರನ್​ ಗಳಿಸಿದೆ.

ಇದಕ್ಕುತ್ತರವಾಗಿ, ಭಾರತ ಆಸೀಸ್​ ಬೌಲಿಂಗ್​ ದಾಳಿಗೆ ಸಿಲುಕಿ 44 ರನ್​ಗಳಿಗೆ ಪ್ರಮುಖ 4 ವಿಕೆಟ್​​ಗಳನ್ನು ಕಳೆದುಕೊಂಡಿದೆ. ಆರಂಭಿಕ ಬ್ಯಾಟರ್​ ಜೈಸ್ವಾಲ್​ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಕೇವಲ 4 ರನ್​ಗಳಿಸಿ ಸ್ಟಾರ್ಕ್​ ಎಸೆತದಲ್ಲಿ ಕ್ಯಾಚ್​ಔಟ್​ ಆಗಿ ಪೆವಿಲಿಯನ್​ ಸೇರಿದರು. ಉಳಿದಂತೆ ಶುಭಮನ್​ ಗಿಲ್​ (1), ರಿಷಭ್​ ಪಂತ್​ (9), ವಿರಾಟ್​ ಕೊಹ್ಲಿ (3) ಕೂಡ ಅಲ್ಪಮೊತ್ತಕ್ಕೆ ಪೆವಿಲಿಯನ್​ ಸೇರಿದ್ದಾರೆ. ಆದರೆ, ಕೊಹ್ಲಿ 3 ರನ್​ ಗಳಿಸಿ ಔಟಾದರೂ ದ್ರಾವಿಡ್​ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.

VIRAT KOHLI VS RAHUL DRAVID  VIRAT KOHLI RECORDS  INDIA VS AUSTRALIA GABBA TEST  border gavaskar trophy
ರಾಹುಲ್​ ದ್ರಾವಿಡ್​ ಮತ್ತು ವಿರಾಟ್​ ಕೊಹ್ಲಿ (ANI)

ದ್ರಾವಿಡ್ ದಾಖಲೆ ಬ್ರೇಕ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​, ಟಿ20, ಏಕದಿನ ಎಲ್ಲಾ ಮೂರು ಸ್ವರೂಪಗಳು ಸೇರಿ ಕೊಹ್ಲಿ ಅವರ 100ನೇ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ತಮ್ಮ ಹೆಸರಿಗೆ ಮತ್ತೊಂದು ದಾಖಲೆ ಸೇರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಭಾರತದ ಮೂರನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಇದರೊಂದಿಗೆ ದ್ರಾವಿಡ್​ ಅವರನ್ನೂ ಹಿಂದಿಕ್ಕಿದ್ದಾರೆ.

ರಾಹುಲ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧ 62 ಇನ್ನಿಂಗ್ಸ್‌ಗಳಲ್ಲಿ 2166 ರನ್ ಗಳಿಸಿದ್ದರು. ಆದರೆ ವಿರಾಟ್ 48 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2168 ರನ್ ಗಳಿಸಿದ್ದಾರೆ. ಆಸೀಸ್ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಸಚಿನ್ ತೆಂಡೂಲ್ಕರ್ (3,630) ಅಗ್ರ ಸ್ಥಾನದಲ್ಲಿದ್ದರೇ, ವಿವಿಎಸ್ ಲಕ್ಷ್ಮಣ್ (2,434) ಎರಡನೇ ಸ್ಥಾನದಲ್ಲಿದ್ದಾರೆ.

ವಿರಾಟ್​ ಕೊಹ್ಲಿ (ANI)

ಕೊಹ್ಲಿ ​ ದಾಖಲೆ: ವಿರಾಟ್​ ಕೊಹ್ಲಿ ಈ ವರೆಗೂ 121 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 206 ಇನ್ನಿಂಗ್ಸ್​ಗಳಲ್ಲಿ 47.49ರ ಸರಾಸರಿಯಲ್ಲಿ 9,166 ರನ್​ ಗಳಿಸಿದ್ದಾರೆ. ಇದರಲ್ಲಿ 7 ದ್ವಿಶತಕ, 30 ಶತಕ, 31 ಅರ್ಧಶತಕ ಸೇರಿವೆ. ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 100 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 17 ಶತಕಗಳ ಸಹಾಯದಿಂದ 5,329 ರನ್ ಗಳಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ 100 ಪಂದ್ಯಗಳನ್ನು ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಸಚಿನ್ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: W,W,W,W,W,W: ಬುಮ್ರಾ ವಿಧ್ವಂಸಕ ದಾಳಿಗೆ ನಡುಗಿದ ಆಸ್ಟ್ರೇಲಿಯಾ: ಅನಿಲ್​ ಕುಂಬ್ಳೆ ದಾಖಲೆ ಉಡೀಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.