ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. 3 ಪಂದ್ಯಗಳ ಸರಣಿಯಲ್ಲಿ ಈ ಇಬ್ಬರು ಬ್ಯಾಟರ್ಗಳು ಕೇವಲ ಒಂದು ಅರ್ಧಶತಕ ಸಿಡಿಸಿರುವುದು ಬಿಟ್ಟರೆ ಉಳಿದ ಇನ್ನಿಂಗ್ಸ್ನಲ್ಲಿ ಸತತವಾಗಿ ವೈಫಲ್ಯ ಕಂಡಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ, ಕೆ.ಎಲ್.ರಾಹುಲ್ಗೆ ಒಂದು ಲೆಕ್ಕ, ವಿರಾಟ್ ಮತ್ತು ರೋಹಿತ್ಗೆ ಒಂದು ಲೆಕ್ಕನಾ ಎಂದು ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದ ಅವರು, ಎರಡನೇ ಇನ್ನಿಂಗ್ಸ್ನಲ್ಲಿ 12 ರನ್ಗಳಿಗೆ ಔಟ್ ಆಗಿದ್ದರು. ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ರಾಹುಲ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.
T20 retirement done, time to retire from Test matches as well. Both gentlemen.
— Gabbar (@GabbbarSingh) October 26, 2024
ಇದೀಗ ಎರಡು ಮತ್ತು ಮೂರನೇ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಕ್ರೀಡಾಪ್ರಿಯರು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ. ಈ ಇಬ್ಬರು ಎರಡನೇ ಟೆಸ್ಟ್‌ನಲ್ಲಿ ಕನಿಷ್ಠ 30 ರನ್ಗಳಿಸಲು ಸಾಧ್ಯವಾಗದೆ ಪೆವಿಲಿಯನ್ ಸೇರಿದ್ದರು. ಭಾರತ 113 ರನ್ಗಳಿಂದ ಸೋಲು ಅನುಭವಿಸಿತ್ತು.
Like this tweet if you want Virat Kohli to retire ASAP. #INDvsNZ #INDvsNZTEST #ViratKohli #RohitSharma pic.twitter.com/nIPFm5jLDC
— Ashwani Kr. (@OyeAshwani) October 26, 2024
ಇದೀಗ ಮುಂಬೈನ ವಾಂಖೆಡೆ ಮೈದಾನದಲ್ಲಿ ಮುಕ್ತಾಯಗೊಂಡ 3ನೇ ಪಂದ್ಯದಲ್ಲೂ ವಿರಾಟ್ ಮತ್ತು ರೋಹಿತ್ ಶರ್ಮಾ ಪ್ರದರ್ಶನ ನೀಡುವಲ್ಲಿ ಮತ್ತೆ ವಿಫಲರಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ 18 ರನ್, ವಿರಾಟ್ 4 ರನ್ಗಳಿಸಿ ನಿರ್ಗಮಿಸಿದ್ದರೆ, ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಮತ್ತು ವಿರಾಟ್ ಕ್ರಮವಾಗಿ 11 ಮತ್ತು 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
Like this post if you want Rohit Sharma to retire ASAP.#indvsnzl #INDvsNZ #RohithSharma pic.twitter.com/Fn97MvgJWs
— Sudhir Yadav (@sudhiryadvv) October 25, 2024
ಹೀಗಾಗಿ, ಕ್ರಿಕೆಟ್‌ಪ್ರಿಯರು ಇಬ್ಬರ ವಿರುದ್ಧ ಕಿಡಿಕಾರಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ವಿಫಲವಾದ ಕಾರಣ ಕೆ.ಎಲ್.ರಾಹುಲ್ ಅವರನ್ನು ಹೊರಹಾಕಲಾಗಿದೆ. ಆದರೆ ಇನ್ನೊಂದೆಡೆ, ಎರಡು ಮತ್ತು 3ನೇ ಟೆಸ್ಟ್‌ನಲ್ಲಿ ಅನುಭವಿ ಆಟಗಾರರಾದ ವಿರಾಟ್ ಮತ್ತು ರೋಹಿತ್ ಸತತವಾಗಿ ಎಡವಿದ್ದಾರೆ. ಹಾಗಾಗಿ, ಆಯ್ಕೆ ಸಮಿತಿಯ ಮುಂದಿನ ನಿರ್ಧಾರವೇನು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡಲೇ ನಿವೃತ್ತಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
Dropped Kl rahul only to replace him by Gill who has played just one good knock in last 2 years at ahemdabad flat track 😭 pic.twitter.com/mOFpwMpVka
— A (@awkshat) October 26, 2024
ನ್ಯೂಜಿಲೆಂಟ್ ವಿರುದ್ಧದ 3 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ ರನ್‌ಗಳಿವು: 0, 70, 1, 17, 4, 1
ರೋಹಿತ್ ಶರ್ಮಾ: 2, 52, 0, 8, 18, 11
ಇದನ್ನೂ ಓದಿ: ಆರ್ಸಿಬಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ