ETV Bharat / sports

28 ಎಸೆತಗಳಲ್ಲಿ ಸೆಂಚುರಿ! ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಐಪಿಎಲ್ Unsold​ ಬ್ಯಾಟರ್ - MUSHTAQ ALI TROPHY

Urvil Patel: ಇತ್ತೀಚಿಗೆ ಮುಕ್ತಾಯಗೊಂಡ ಐಪಿಎಲ್​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಯುವ ಆಟಗಾರ ಟಿ20ಯಲ್ಲಿ ವೇಗದ ಶತಕ ಸಿಡಿಸಿ ಕ್ರಿಕೆಟ್​ ಲೋಕದ ಗಮನ ಸೆಳೆದಿದ್ದಾರೆ.

URVIL PATEL  URVIL PATEL T20 RECORD  FASTEST CENTURY IN T20  ಉರ್ವಿಲ್​ ಪಟೇಲ್
ಉರ್ವಿಲ್ ಪಟೇಲ್ (Gujarat Cricket Association 'X' handle)
author img

By ETV Bharat Sports Team

Published : Nov 28, 2024, 10:48 AM IST

Urvil Patel: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದ ಯುವ ಬ್ಯಾಟರ್‌ವೊಬ್ಬರು​ ಟಿ20ಯಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಗುಜರಾತ್​ ತಂಡದ ವಿಕೆಟ್ ಕೀಪರ್​ ಮತ್ತು ಬ್ಯಾಟರ್‌ ಆಗಿರುವ ಉರ್ವಿಲ್ ಪಟೇಲ್, ಸ್ಫೋಟಕ ಬ್ಯಾಟಿಂಗ್​ ಮೂಲಕ ಕೇವಲ 28 ಎಸೆತಗಳಲ್ಲೇ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ-2024ರ ಅಂಗವಾಗಿ ಇಂದೋರ್‌ನ ಎಮರಾಲ್ಡ್ ಹೈಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ ಗ್ರೌಂಡ್‌ನಲ್ಲಿ ಬುಧವಾರ ತ್ರಿಪುರಾ ವಿರುದ್ಧ ನಡೆದ ಪಂದ್ಯದಲ್ಲಿ ಉರ್ವಿಲ್ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 12 ಸಿಕ್ಸರ್‌ಗಳೊಂದಿಗೆ ಅಜೇಯ 113 ರನ್ ಗಳಿಸಿದರು. ಅಲ್ಲದೇ, ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ದಾಖಲೆ ಮುರಿದರು. ಅಷ್ಟೇ ಅಲ್ಲದೇ, ಭಾರತ ಪರ ಅತ್ಯಂತ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಟಿ20ಯಲ್ಲಿ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್​ ಎಂಬ ದಾಖಲೆ ರಿಷಬ್ ಪಂತ್ ಹೆಸರಲ್ಲಿತ್ತು. ಪಂತ್ 32 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. 2018ರಲ್ಲಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಹಿಮಾಚಲ ಪ್ರದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಪಂತ್ ಶತಕ ಬಾರಿಸಿದ್ದರು.

ಉರ್ವಿಲ್ ಟಿ20ಯಲ್ಲಿ ಎರಡನೇ ವೇಗದ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ಎಸ್ಟೋನಿಯಾ ದೇಶದ ಆಟಗಾರ ಸಾಹಿಲ್ ಚೌಹಾಣ್ ಸೈಪ್ರಸ್ ದೇಶದ ವಿರುದ್ಧ 27 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2013ರಲ್ಲಿ ಬೆಂಗಳೂರಿನ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ವಿಜಯ್ ಹಜಾರೆ ಟ್ರೋಫಿ 2023ರಲ್ಲಿ ಉರ್ವಿಲ್ ಪಟೇಲ್ ಅರುಣಾಚಲ ಪ್ರದೇಶದ ಚಂಡೀಗಢದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಪರ ಆಡಿದ್ದರು. ಅಂದೂ ಕೂಡ 41 ಎಸೆತಗಳಲ್ಲಿ ಶತಕದಾಟ ಆಡಿದ್ದರು. ಈ ಪಂದ್ಯದಲ್ಲಿ 156 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್, ಉರ್ವಿಲ್​ ಪಟೇಲ್​ರ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ಇನ್ನೂ 58 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು.

ಆದಾಗ್ಯೂ, ಇತ್ತೀಚಿನ IPL 2025ಮೆಗಾ ಹರಾಜಿನಲ್ಲಿ ಉರ್ವಿಲ್ ಅನ್​ಸೋಲ್ಡ್​ ಆಟಗಾರನಾಗಿ ಉಳಿದರು.

ಇದನ್ನೂ ಓದಿ: ಪರ್ತ್​ ಟೆಸ್ಟ್​ನಲ್ಲಿ ಮಿಂಚಿದ ಬೂಮ್ರಾ ವಿಶ್ವದ ನಂಬರ್​ 1​ ಬೌಲರ್: ಮೇಲಕ್ಕೇರಿದ ವಿರಾಟ್, ಜೈಸ್ವಾಲ್​ ರ‍್ಯಾಂಕಿಂಗ್‌​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.