ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಕೆರಿಬಿಯನ್ ತಂಡ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅರ್ಧಶತಕ ಪೂರೈಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೂರನ್ 26 ಎಸೆತಗಳಲ್ಲಿ 65 ರನ್ ಕಲೆ ಹಾಕಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 2 ಬೌಂಡರಿಗಳೂ ಸೇರಿವೆ. ಅಲ್ಲದೇ ಒಂದೇ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ ಪೂರನ್ 13 ಎಸೆತೆಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
Nicholas Pooran smashed 4 sixes in a row against South Africa. 🫡⚡pic.twitter.com/yw5p5bD93r
— Mufaddal Vohra (@mufaddal_vohra) August 24, 2024
ಆಫ್ರಿಕಾದ ವೇಗದ ಬೌಲರ್ ನಾಂದ್ರೆ ಬರ್ಗರ್ ವಿರುದ್ಧ ಪೂರನ್ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಓವರ್ ಆಫ್ರಿಕಾದ ಪಾಲಿಗೆ ಮುಳವಾಗಿದ್ದಲ್ಲದೇ ಪಂದ್ಯದ ಸೋಲಿಗೂ ಕಾರಣವಾಗಿದೆ. 12ನೇ ಓವರ್ ಆರಂಭಕ್ಕೂ ಮುನ್ನ ವೆಸ್ಟ್ಇಂಡೀಸ್ ಗೆಲುವಿಗೆ 54 ಎಸೆತಗಳಲ್ಲಿ 70 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್ಗೆ ಬಂದ ಬರ್ಗರ್ ಒಂದೇ ಓವರ್‌ನಲ್ಲಿ 25 ರನ್ ನೀಡುವ ಮೂಲಕ ಪಂದ್ಯವನ್ನು ಆತಿಥೇಯ ತಂಡದ ಪರವಾಗುವಂತೆ ತಿರುಗಿಸಿದರು. ಈ ಓವರ್‌ನ ನಂತರ ಕೆರಿಬಿಯನ್ ತಂಡಕ್ಕೆ 48 ಎಸೆತಗಳಲ್ಲಿ 45 ರನ್‌ಗಳ ಅಗತ್ಯವಿತ್ತು. ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ ಕೆರೆಬಿಯನ್ನರು 2.1 ಓವರ್ಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಬರ್ಗರ್ ತಂಡದ ದುಬಾರಿ ಬೌಲರ್ ಆದರು.
ಪುರನ್ ಅವರು ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಇನಿಂಗ್ಸ್‌ನಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿರುವ ಪುರನ್, ಟಿ20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 96 ಟಿ20 ಪಂದ್ಯಗಳಲ್ಲಿ 139 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಹಿಟ್ಮ್ಯಾನ್ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಅವರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 205 ಸಿಕ್ಸರ್ ಸಿಡಿಸಿದ್ದಾರೆ. ನಂತರ 173 ಸಿಕ್ಸರ್ ಸಿಡಿಸಿರುವ ನ್ಯೂಜಿಲೆಂಡ್ನ ಮಾರ್ಟಿನ್ ಗುಪ್ಟಿಲ್ 3ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ 2024: ಪ್ಯಾರಿಸ್ಗೆ ಹಾರಿದ ಶೂಟಿಂಗ್ ತಂಡ; ಪದಕದ ಭರವಸೆ ನೀಡಿದ ಮನೀಷ್ ನರ್ವಾಲ್ - Paralympics 2024