ETV Bharat / sports

ಟಿ20 ವಿಶ್ವಕಪ್​ ಗೆಲುವಿನತ್ತ ಭಾರತದ ಚಿತ್ತ: ಕಠಿಣ ತಾಲೀಮು ಆರಂಭಿಸಿದ ರೋಹಿತ್​ ಪಡೆ - T20 World Cup 2024 - T20 WORLD CUP 2024

ಜೂನ್​ 2ರಿಂದ ಆರಂಭವಾಗುವ ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ತಂಡದ ಆಟಗಾರರು ಕಠಿಣ ತಾಲೀಮು ಆರಂಭಿಸಿದ್ದಾರೆ.

T20 WC
ಭಾರತ ತಂಡದ ಆಟಗಾರರು (IANS File Photos)
author img

By ANI

Published : May 29, 2024, 12:44 PM IST

ನ್ಯೂಯಾರ್ಕ್​: ಟಿ20 ವಿಶ್ವಕಪ್​ ಟೂರ್ನಿ ಹಿನ್ನೆಲೆಯಲ್ಲಿ ಯುಎಸ್​ನಲ್ಲಿರುವ ಟೀಂ ಇಂಡಿಯಾ ಆಟಗಾರರು ಸಿದ್ಧತೆ ಆರಂಭಿಸಿದ್ದಾರೆ. ಚುಟುಕು ವಿಶ್ವಕಪ್​ ಪಂದ್ಯಾವಳಿಯು ಜೂನ್​ 2ರಿಂದ ಆರಂಭವಾಗಲಿದ್ದು, ವೆಸ್ಟ್​ ಇಂಡೀಸ್​ ಹಾಗೂ ಯುಎಸ್​ಎ ಜಂಟಿ ಆತಿಥ್ಯ ವಹಿಸುತ್ತಿವೆ. ಮೆಗಾ ಟೂರ್ನಿಗೆ ಯುಎಸ್​ಎ ಹಾಗೂ ಕೆನಡಾ ನಡುವಿನ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.

ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಳಪೆ ನಾಯಕತ್ವದಿಂದ ನೆಟ್ಟಿಗರ ಟೀಕೆಗೆ ಗುರಿಯಾಗಿರುವ ಭಾರತದ ಉಪ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ತರಬೇತಿ ಅವಧಿಯ ವೇಳೆ ತಂಡದೊಂದಿಗೆ ಭಾಗಿಯಾಗಿದ್ದಾರೆ.

ಮೊದಲ ಬ್ಯಾಚ್​ನಲ್ಲಿ ನಾಯಕ ರೋಹಿತ್​ ಶರ್ಮಾ, ಆಲ್​ರೌಂಡರ್​​ಗಳಾದ ರವೀಂದ್ರ ಜಡೇಜಾ, ಶಿವಂ ದುಬೆ, ಸೂರ್ಯಕುಮಾರ್​ ಯಾದವ್​​, ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ಸೇರಿದಂತೆ ಇತರರು ನ್ಯೂಯಾರ್ಕ್​​ ತಲುಪಿದ್ದಾರೆ. ಬಳಿಕ ಎರಡನೇ ಬ್ಯಾಚ್​ ಕೂಡ ಅಮೆರಿಕದತ್ತ ತೆರಳಿದೆ. ಪ್ರಮುಖ ಪಂದ್ಯಾವಳಿ ಹಿನ್ನೆಲೆಯಲ್ಲಿ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.

ಕೆಲ ಆಟಗಾರರು ತರಬೇತಿ ನಡೆಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬುಮ್ರಾ ಕೆಲ ಫೋಟೊಗಳನ್ನು ಶೇರ್​ ಮಾಡಿದ್ದು, ಆಟಗಾರರು ಜಾಗಿಂಗ್​ ಹಾಗೂ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಕೂಡ ನ್ಯೂಯಾರ್ಕ್​ನಲ್ಲಿ ಅಭ್ಯಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಹಾರ್ದಿಕ್​ ಸಹ 'ರಾಷ್ಟ್ರೀಯ ಕರ್ತವ್ಯದ ಮೇಲೆ' (On National Duty) ಎಂಬ ಕ್ಯಾಪ್ಶನ್​ನೊಂದಿಗೆ ಫೋಟೋ ಪೋಸ್ಟ್ ಮಾಡಿದ್ದಾರೆ.

ಟೂರ್ನಿಯಲ್ಲಿ ರೋಹಿತ್​ ಶರ್ಮಾ ಪಡೆಯು 'ಎ' ಗ್ರೂಪ್​ ಹಂತದಲ್ಲಿ ಐರ್ಲೆಂಡ್​, ಕೆನಡಾ, ಪಾಕಿಸ್ತಾನ ಹಾಗೂ ಯುಎಸ್​ಎ ವಿರುದ್ಧ ಸೆಣಸಲಿದೆ. ತಂಡದ ಮೊದಲು ಪಂದ್ಯವು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಇದೆ. ಅದಕ್ಕೂ ಮುನ್ನ ಭಾರತವು ಜೂನ್​ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

ಕಳೆದ ಬಾರಿ (2022) ಆಸ್ಟ್ರೇಲಿಯಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ ಸೋಲಿನೊಂದಿಗೆ ಹೊರಬಿದ್ದಿತ್ತು. ಭಾರತವು 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್​ ಗೆದ್ದು ದಾಖಲೆ ಬರೆದಿತ್ತು. ಅದಾದ ಬಳಿಕ 2011ರ ಏಕದಿನ ವಿಶ್ವಕಪ್​ ಹಾಗೂ 2013ರ ಚಾಂಪಿಯನ್ಸ್​ ಟ್ರೋಫಿ ಜಯಿಸಿದೆ. ಆದರೆ ಆ ನಂತರ ಯಾವುದೇ ಐಸಿಸಿ ಟೂರ್ನಮೆಂಟ್​ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಸಲವೂ ಅಭಿಮಾನಿಗಳು ತಂಡದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಈ ತಂಡ ಟಿ20 ವಿಶ್ವಕಪ್‌ ಗೆಲ್ಲುತ್ತಂತೆ! ಇಂಗ್ಲೆಂಡ್​ ಮಾಜಿ ನಾಯಕನ ಭವಿಷ್ಯ ನಿಜವಾಗುತ್ತಾ? - Eion Morgan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.