ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಇಂದು ಕಪ್ನೊಂದಿಗೆ ತಾಯ್ನಾಡಿಗೆ ವಾಪಸಾಗಿದೆ. ಫೈನಲ್ ಪಂದ್ಯದ ಬಳಿಕ ಬೀಕರ ಚಂಡಮಾರುತದಿಂದಾಗಿ ಬಾರ್ಬಡೋಸ್ನಲ್ಲೇ ಉಳಿದುಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು, ಕೋಚ್ ಮತ್ತು ಸಿಬ್ಬಂದಿಗಳು ಬಿಸಿಸಿಐ ವಿಶೇಷ ವಿಮಾನದ ಮೂಲಕ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ್ದಾರೆ.
ವಿಶ್ವ ಚಾಂಪಿಯನ್ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದೀಗ ಭಾರತದ ಆಟಗಾರರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ತಲುಪಿದ್ದಾರೆ. ಇಂದು ಎಲ್ಲಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಇದಾದ ಬಳಿಕ ಮುಂಬೈಗೆ ತೆರಳಲಿದ್ದಾರೆ.
Jubilation in the air 🥳
— BCCI (@BCCI) July 4, 2024
The #T20WorldCup Champions have arrived in New Delhi! 🛬
Presenting raw emotions of Captain @ImRo45 -led #TeamIndia's arrival filled with celebrations 👏👏 pic.twitter.com/EYrpJehjzj
ಸಂಜೆ ರೋಡ್ ಶೋ: ಸಂಜೆ 5.30ಕ್ಕೆ ಮುಂಬೈನ ನಾರಿಮನ್ ಪಾಯಿಂಟ್‌ನಿಂದ ವಾಂಖೆಡೆ ಕ್ರೀಡಾಂಗಣದ ವರೆಗೆ ತೆರೆದ ವಾಹನದಲ್ಲಿ ವಿಶ್ವಕಪ್ ರೋಡ್ ಶೋ ನಡೆಯಲಿದೆ. ಇದರಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ. ಬಳಿಕ ಅಲ್ಲಿಂದ ತಮ್ಮ ನಿವಾಸಕ್ಕೆ ಆಟಗಾರರು ಹಿಂತಿರುಗಲಿದ್ದಾರೆ.
ಮೋದಿ ಜೊತೆ ಔತಣಕೂಟ: ಇಂದು ಬೆ. 11 ಗಂಟೆ ಪ್ರಧಾನಿ ಮೋದಿ ಅವರ ನಿವಾಸಕ್ಕೆ ತೆರಳಲಿರುವ ಟೀಂ ಇಂಡಿಯಾದ ಆಟಗಾರರ ಅಲ್ಲಿ ಔಟಣಕೂಟದಲ್ಲಿ ಭಾಗಿಯಾಗಲಿದ್ದಾರೆ.
#WATCH | Delhi: Supporters gather at the airport to welcome Men's Indian Cricket Team.
— ANI (@ANI) July 4, 2024
Team India has arrived at Delhi Airport after winning the #T20WorldCup2024 trophy. pic.twitter.com/XYB1N2CdbE
ಅಮೆರಿಕ ಮತ್ತು ವೆಸ್ಟ್ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡ ಸೋಲಿಲ್ಲದೇ ಫೈನಲ್ ಪ್ರವೇಶಿಸಿತ್ತು. ಫೈನಲ್ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಕಪ್ ಗೆದ್ದುಕೊಂಡಿದೆ.
ಇದನ್ನೂ ಓದಿ: ಟಿ20 ರ‍್ಯಾಂಕಿಂಗ್ ಪ್ರಕಟ: ನಂ.1 ಸ್ಥಾನಕ್ಕೇರಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ - HARDIK PANDYA NO 1 ALL ROUNDER