ETV Bharat / sports

ಅನ್ನದಾತ ರತನ್ ಟಾಟಾ: ಟಾಟಾ ಸಂಸ್ಥೆಯಿಂದ ಬದುಕು ಕಟ್ಟಿಕೊಂಡ ಹಲವು ಕ್ರಿಕೆಟಿಗರು - TATA GROUP HELPED CRICKETERS

ರತನ್​ ಟಾಟಾ ಅನೇಕ ಕ್ರಿಕೆಟರಿಗೆ ತಮ್ಮ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟು ಅವರ ಪಾಲಿಗೆ ಅನ್ನದಾತರಾಗಿದ್ದರು.

ಅನ್ನದಾತ ರತನ್ ಟಾಟಾ
ಅನ್ನದಾತ ರತನ್ ಟಾಟಾ (ANI, Getty Images)
author img

By ETV Bharat Sports Team

Published : Oct 10, 2024, 8:19 PM IST

ಹೈದರಾಬಾದ್​: ರತನ್ ಟಾಟಾ ಪ್ರಸಿದ್ಧ ಕೈಗಾರಿಕೋದ್ಯಮಿಯಾದರೂ ಕ್ರಿಕೆಟ್​ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಭಾರತೀಯ ಕ್ರಿಕೆಟರ್​ಗಳಿಗೆ ಉದ್ಯೋಗ ನೀಡಿ ಅವರ ಪಾಲಿಗೆ ಅನ್ನದಾತರಾಗಿದ್ದರು. ಟಾಟಾ ಸಮೂಹದ ವಿವಿಧ ಕಂಪನಿಗಳು ಹಲವಾರು ಕ್ರಿಕೆಟ್ ಆಟಗಾರರ ಬದುಕು ಬೆಳಗಿಸಿವೆ.

ಮಾಜಿ ಕ್ರಿಕೆಟಿಗ ಫಾರೂಕ್ ಅವರಿಗೆ ಟಾಟಾ ಮೋಟಾರ್ಸ್​ ವಿಭಾಗದಲ್ಲಿ ನೌಕರಿ ನೀಡಲಾಗಿತ್ತು. ಪ್ರಸ್ತುತ ಬಿಸಿಸಿಐ ಮುಖ್ಯ ಆಯ್ಕೆಗಾರರೂ ಆಗಿರುವ ಅಜಿತ್ ಅಗರ್ಕರ್, ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ಸಂಜಯ್ ಮಂಜ್ರೇಕರ್, ಶ್ರೀನಾಥ್ ಮತ್ತು ಕೈಫ್‌ ಅವರಿಗೆ ವಿವಿಧ ವಿಭಾಗಗಳಲ್ಲಿ ನೌಕರಿ ನೀಡಲಾಗಿತ್ತು. ಯುವ ಕ್ರಿಕೆಟಿಗರಾದ ಶಾರ್ದೂಲ್ ಠಾಕೂರ್ ಮತ್ತು ಜಯಂತ್ ಯಾದವ್ ಅವರೂ ಕೂಡಾ ಟಾಟಾ ಗ್ರೂಪ್‌ನಿಂದ ಸಹಾಯ ಪಡೆದಿದ್ದಾರೆ. ಈ ಎಲ್ಲ ಆಟಗಾರರಿಗೆ ಟಾಟಾ ಪವರ್ಸ್, ಸ್ಟೀಲ್ಸ್ ಮತ್ತು ಏರ್‌ವೇಸ್ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳ ದೊರೆತಿತ್ತು. ಇಷ್ಟು ಮಾತ್ರವಲ್ಲದೇ, ಅವರಿಗೆ ಸ್ಪಾನ್ಸರ್‌ ಮೂಲಕವೂ ಅವರನ್ನು ಬೆಂಬಲಿಸಲಾಗುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್​ ಸಿಂಗ್​, "ರತನ್ ಟಾಟಾ ಅವರು ಕೇವಲ ಉದ್ಯಮಿ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳ ಮೂಲಕ ನಮಗೆಲ್ಲರಿಗೂ ಮಾದರಿಯಾಗಿದ್ದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಶ್ರಮಿಸಿದವರು" ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್ ಎನಿಸಿಕೊಂಡಿರುವ ಐಪಿಎಲ್ ಅನ್ನು ಟಾಟಾ ಪ್ರಾಯೋಜಿಸುತ್ತಿದೆ. ವಿವೋ ಜೊತೆಗಿನ ಒಪ್ಪಂದವನ್ನು ಕಡಿತಗೊಳಿಸಿದ ಬೆನ್ನಲ್ಲೆ ಬಿಸಿಸಿಐ ಪ್ರಾಯೋಜಕರಾಗಿ ಯಾರು ಬರುತ್ತಾರೆ ಎಂದು ಎದುರು ನೋಡುತ್ತಿರುವಾಗ ಟಾಟಾ ಮುಂದೆ ಬಂದಿತ್ತು. 2022-23ರ ಆವೃತ್ತಿಗೆ ಟಾಟಾ ಮೊದಲ ಬಾರಿಗೆ ಪ್ರಾಯೋಜಕತ್ವ ವಹಿಸಿತ್ತು. ಕಳೆದ 4 ವರ್ಷಗಳ ಅವಧಿಗೆ 2,500 ಕೋಟಿ ರೂ ಒಪ್ಪಂದ ಮಾಡಿಕೊಂಡಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತ. ಅಲ್ಲದೇ ಮಹಿಳಾ ಪ್ರೀಮಿಯರ್ ಲೀಗ್ ಅನ್ನೂ ಟಾಟಾ ಪ್ರಾಯೋಜಿಸುತ್ತದೆ.

ಇದನ್ನೂ ಓದಿ: ತಿಂಗಳಿಗೆ ₹27 ಲಕ್ಷ ವೇತನ, ವರ್ಷಕ್ಕೆ 50 ದಿನ ರಜೆ: ರೊನಾಲ್ಡೊ ಹೋಟೆಲ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.