ಹೈದರಾಬಾದ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು 2024ರ ಪುರುಷರ ಟಿ-20 ವಿಶ್ವಕಪ್ ಬ್ರಾಂಡ್ ಅಂಬಾಸಿಡರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ನೇಮಕ ಮಾಡಿದೆ. ಕ್ರೀಡೆಯ ಜಾಗತಿಕ ಆಡಳಿತ ಮಂಡಳಿಯು ಯುವರಾಜ್ ಸಿಂಗ್ ಅವರ ಆಯ್ಕೆಯನ್ನು ಮಾಧ್ಯಮ ಹೇಳಿಕೆಯ ಮೂಲಕ ಪ್ರಕಟಿಸಿದೆ.
ಐಸಿಸಿ ಪುರುಷರ ಟಿ-20 ವಿಶ್ವಕಪ್ 2024ರ ಬ್ರಾಂಡ್ ಅಂಬಾಸಿಡರ್ ಆಗಿ ಭಾರತದ ದಂತಕಥೆ ಯುವರಾಜ್ ಸಿಂಗ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದೆ. T20 ವಿಶ್ವಕಪ್ ಕ್ರಿಕೆಟ್ ಹಬ್ಬ ಪ್ರಾರಂಭವಾಗಲು ಕೇವಲ 36 ದಿನಗಳು ಬಾಕಿ ಉಳಿದಿವೆ ಎಂದು ಐಸಿಸಿ ತಿಳಿಸಿದೆ.
2007ರಲ್ಲಿ ಯುವರಾಜ್ ಸಿಂಗ್, ಭಾರತವು ಅಂತಿಮವಾಗಿ ಗೆದ್ದ ಮೊದಲ ಟಿ 20 ವಿಶ್ವಕಪ್‌ನಲ್ಲಿ ಒಂದು ಓವರ್‌ನಲ್ಲಿ 36 ರನ್ ಗಳಿಸಿದ್ದರು. ಅಮೆರಿಕದಲ್ಲಿ ನಡೆಯಲಿರುವ ರೋಚಕ ವಿಶ್ವ ಕಪ್ ಪ್ರಚಾರ ಕಾರ್ಯಕ್ರಮಗಳಲ್ಲಿ ಯುವರಾಜ್ ಸಿಂಗ್ ಭಾಗವಹಿಸಲಿದ್ದಾರೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಹೆಚ್ಚು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯ ಸೇರಿದಂತೆ T20 ಪಂದ್ಯಗಳು ನಡೆಯಲಿವೆ'' ಎಂದು ಹೇಳಿದೆ.
ವಿಶ್ವಕಪ್ ಜೂನ್ 1 ರಂದು ಪ್ರಾರಂಭವಾಗಿ ಜೂನ್ 29 ರಂದು ಮುಕ್ತಾಯಗೊಳ್ಳಲಿದೆ. ಕೆನಡಾ ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಲಿದೆ. ಇನ್ನು 36 ದಿನಗಳು ಬಾಕಿ ಇರುವಾಗ, ಯುವರಾಜ್ ಕ್ರಿಕೆಟ್ ದಂತಕಥೆ ಕ್ರಿಸ್ ಗೇಲ್ ಮತ್ತು ಎಂಟು ಬಾರಿ ಒಲಿಂಪಿಕ್ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಟೂರ್ನಿಯ ರಾಯಭಾರಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಹಳೆ ನೆನಪು ಮೆಲಕು ಹಾಕಿದ ಯುವರಾಜ್ ಸಿಂಗ್: ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಯುವರಾಜ್ ಅವರು, ದಕ್ಷಿಣ ಆಫ್ರಿಕಾದಲ್ಲಿ 2007ರ ಆವೃತ್ತಿಯಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದ ನೆನಪನ್ನು ನೆನಪಿಸಿಕೊಂಡರು. ಪಂದ್ಯಾವಳಿಯಿಂದ ತಮ್ಮ ಕೆಲವು ಅಚ್ಚುಮೆಚ್ಚಿನ ಕ್ರಿಕೆಟ್ ನೆನಪುಗಳು ಅಚ್ಚಳಿಯದೇ ಉಳಿದಿವೆ ಎಂದೂ ಅವರು ಇದೇ ವೇಳೆ ಸ್ಮರಿಸಿಕೊಂಡರು.
"ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆಯುವುದು ಸೇರಿದಂತೆ ಟಿ 20 ವಿಶ್ವಕಪ್‌ನಲ್ಲಿ ಆಡುವುದರಿಂದ ನನ್ನ ಕೆಲವು ಅಚ್ಚುಮೆಚ್ಚಿನ ಕ್ರಿಕೆಟ್ ನೆನಪುಗಳಾಗಿವೆ. ಆದ್ದರಿಂದ ಈ ಆವೃತ್ತಿಯ ಭಾಗವಾಗಲು ಇದು ತುಂಬಾ ಉತ್ತೇಜನಕಾರಿಯಾಗಿದೆ. ಇದು ಮತ್ತಷ್ಟು ಗೌರವ ಹೆಚ್ಚಿಸಿದೆ" ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.