ETV Bharat / sports

ಏಕದಿನ ಸರಣಿಯ ಮೊದಲ ಪಂದದಲ್ಲೇ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಭರ್ಜರಿ ಗೆಲುವು - ಶ್ರೀಲಂಕಾ ಭರ್ಜರಿ ಗೆಲುವು

ಶುಕ್ರವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು, ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಅದ್ಭುತ ದ್ವಿಶತಕ ಬಾರಿಸಿದ್ದಾರೆ.

afg vs sl ODI  mohammed nabi  azmatullah umarzai  ಶ್ರೀಲಂಕಾ ಭರ್ಜರಿ ಗೆಲುವು  ಅಫ್ಘಾನಿಸ್ತಾನ Vs ಶ್ರೀಲಂಕಾ
ಏಕದಿನ ಸರಣಿಯ ಮೊದಲ ಪಂದದಲ್ಲೇ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಭರ್ಜರಿ ಗೆಲುವು
author img

By ETV Bharat Karnataka Team

Published : Feb 10, 2024, 11:23 AM IST

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾ ಕ್ರಿಕೆಟ್ ತಂಡ ಅಫ್ಘಾನಿಸ್ತಾನ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನವನ್ನು 42 ರನ್‌ಗಳಿಂದ ಮಣಿಸಿತು. ದ್ವಿಶತಕ ಸಿಡಿಸಿದ ಪಾತುಮ್ ನಿಸ್ಸಾಂಕಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಕೂಡ ತಂಡಕ್ಕಾಗಿ ಕಠಿಣ ಪರಿಸ್ಥಿತಿಯಲ್ಲಿ ಅತ್ಯುತ್ತಮ ಶತಕ ಗಳಿಸುವ ಮೂಲಕ ಇನಿಂಗ್ಸ್ ಆಡಿದರು.

ಪಾಥುಮ್ ನಿಸ್ಸಾಂಕಾ ಅದ್ಭುತ ದ್ವಿಶಕ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ನಿಗದಿತ 50 ಓವರ್​ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 381 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಶ್ರೀಲಂಕಾದ ಬ್ಯಾಟ್ಸ್‌ಮನ್ ಪಾಥುಮ್ ನಿಸ್ಸಾಂಕಾ ಅದ್ಭುತ ಪ್ರದರ್ಶನ ನೀಡಿ ಅಜೇಯರಾಗಿ 210 ರನ್ ಗಳಿಸಿದರು. 381 ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್‌ ಶುರು ಮಾಡಿದ ಅಫ್ಘಾನಿಸ್ತಾನ ತಂಡ 55 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಬಳಿಕ ಮೊಹಮ್ಮದ್ ನಬಿ ಮತ್ತು ಒಮರ್ಜಾಯ್ ಅಫ್ಘಾನಿಸ್ತಾನ ಪರ 242 ರನ್‌ಗಳ ಜೊತೆಯಾಟ ನೀಡಿದರು. ಆದರೆ, ಇಬ್ಬರೂ ಬ್ಯಾಟ್ಸ್​ಮನ್​ಗಳು ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿಲ್ಲ.

ಮೊಹಮ್ಮದ್ ನಬಿ, ಅಜ್ಮತುಲ್ಲಾ ಒಮರ್ಜಾಯ್ ಉತ್ತಮ ಬ್ಯಾಟಿಂಗ್​: ಆರನೇ ವಿಕೆಟ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳು 242 ರನ್‌ಗಳ ಜೊತೆಯಾಟವು ODI ನಲ್ಲಿ ಎರಡನೇ ಅತಿದೊಡ್ಡ ಪಾರ್ಟನರ್​ಶಿಪ್ ಆಗಿದೆ. ಅಜ್ಮತುಲ್ಲಾ ಉಮರ್ಜಾಯ್ 115 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 13 ಬೌಂಡರಿ ಒಳಗೊಂಡ 149 ರನ್ ಗಳಿಸಿದರು. ಇವರ ಜೊತೆಗೆ ಮೊಹಮ್ಮದ್ ನಬಿ 130 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 136 ರನ್ ಕಲೆಹಾಕಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಹೊರತುಪಡಿಸಿ ಯಾವುದೇ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು 20 ರನ್ ಗಳಿಸಲು ಸಾಧ್ಯವಾಗಲಿಲ್ಲ.

42 ರನ್‌ಗಳಿಂದ ಸೋತ ಅಫ್ಘಾನಿಸ್ತಾನ: ಅಫ್ಘಾನಿಸ್ತಾನ ತಂಡವು ದಿನದಿಂದ ದಿನಕ್ಕೆ ತನ್ನ ಆಟವನ್ನು ಸುಧಾರಿಸುತ್ತಿದೆ. 381 ರನ್‌ಗಳಿಗೆ ಉತ್ತರವಾಗಿ ಅದ್ಭುತ ಪ್ರದರ್ಶನ ನೀಡಿದರೂ ಕೇವಲ 42 ರನ್‌ಗಳಿಂದ ಸೋತಿರುವುದು ಅಫ್ಘಾನಿಸ್ತಾನದ ಹೋರಾಟವನ್ನು ತೋರಿಸುತ್ತದೆ. ಕೆಲ ಸಮಯದಿಂದ ಅಫ್ಘಾನಿಸ್ತಾನ ಕ್ರಿಕೆಟ್‌ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ನೆದರ್‌ಲ್ಯಾಂಡ್‌ ತಂಡಗಳನ್ನು ಸೋಲಿಸಿತ್ತು. ಮೂರನೇ ಟಿ20ಯಲ್ಲಿ ಭಾರತದ ವಿರುದ್ಧ ಕಠಿಣ ಹೋರಾಟ ನೀಡಿತ್ತು. ಇಬ್ರಾಹಿಂ ಜದ್ರಾನ್ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಮೂರು ಶತಕಗಳ ಇನ್ನಿಂಗ್ಸ್‌ಗಳನ್ನು ಕೂಡ ಆಡಿದ್ದರು.

ಇದನ್ನೂ ಓದಿ: ಆಸ್ಟ್ರೇಲಿಯಾದ ವಾರ್ನರ್, ಝಂಪಾ ಅಬ್ಬರಕ್ಕೆ ವೆಸ್ಟ್ ಇಂಡೀಸ್ ತತ್ತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.