SL vs SA, 2nd Test: ಶ್ರೀಲಂಕಾ ವಿರುದ್ದ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿತು. ಸೇಂಟ್ ಜಾರ್ಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹರಿಣ ಪಡೆ 109 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಇದರೊಂದಿಗೆ 2-0 ಅಂತರದಿಂದ ಸರಣಿಯನ್ನೂ ವಶಪಡಿಸಿಕೊಂಡಿತು.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಫ್ರಿಕನ್ನರು, ಮೊದಲ ಇನ್ನಿಂಗ್ಸ್ನಲ್ಲಿ 358 ರನ್ ಕಲೆ ಹಾಕಿದರು. ರಿಕಿಲ್ಟನ್ (101) ಮತ್ತು ವೆರ್ರಿನ್ನೆ (105) ಶತಕ ಸಿಡಿಸಿ ಮಿಂಚಿದರೆ, ನಾಯಕ ಟೆಂಬಾ ಬವುಮಾ (78) ಅರ್ಧಶತಕ ಸಿಡಿಸಿದರು. ಈ ಮೂವರ ಬ್ಯಾಟಿಂಗ್ ಕೊಡುಗೆಯಿಂದಾಗಿ ದಕ್ಷಿಣ ಆಫ್ರಿಕಾ ಉತ್ತಮ ಸ್ಕೋರ್ ಕಲೆ ಹಾಕಿತು.
South Africa seal a 2-0 whitewash against Sri Lanka after a closely-contested win in Gqeberha 🙌#WTC25 | 📝 #SAvSL: https://t.co/grtLlEan8h pic.twitter.com/Y0iM1CUcH4
— ICC (@ICC) December 9, 2024
ಇದಕ್ಕುತ್ತರವಾಗಿ ಶ್ರೀಲಂಕಾ ಕೂಡ ಉತ್ತಮ ಪ್ರದರ್ಶನ ತೋರಿತು. ಪಾಥುಮಿ ನಿಸ್ಸಾಂಕ (89), ಚಂಡಿಮಾಲ್ (44), ಮ್ಯಾಥ್ಯುಸ್ (44), ಕಮಿಂಡು ಮೆಂಡಿಸ್ (48) ಬ್ಯಾಟಿಂಗ್ ಸಹಾಯದಿಂದಾಗಿ ಮೊದಲ ಇನ್ನಿಂಗ್ಸ್ನಲ್ಲಿ 328 ರನ್ ಪೇರಿಸಿ ಕೇವಲ 30 ರನ್ಗಳ ಹಿನ್ನಡೆ ಅನುಭವಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕನ್ನರು ಮತ್ತೊಮ್ಮೆ ಬ್ಯಾಟಿಂಗ್ ಮೂಲಕ ಮಿಂಚಿ 317 ರನ್ ಪೇರಿಸಿದರು. ಮಾಕ್ರಮ್ (55), ನಾಯಕ ಬವುಮಾ (66) ಅರ್ಧಶತಕ ಪೇರಿಸಿ ಮತ್ತೊಮ್ಮೆ ತಂಡದ ಸ್ಕೋರ್ ಅನ್ನು 300 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಶ್ರೀಲಂಕಾಗೆ 348 ರನ್ಗಳ ಗುರಿ ನೀಡಿದರು. ಇದನ್ನು ಬೆನ್ನತ್ತಿದ ಲಂಕನ್ನರು ಕೇಶವ್ ಮಹರಾಜ್ ಬೌಲಿಂಗ್ ದಾಳಿಗೆ ಸಿಲುಕಿ 238 ರನ್ಗಳಿಸಲಷ್ಟೇ ಶಕ್ತರಾದರು.
That's the final wicket.
— Proteas Men (@ProteasMenCSA) December 9, 2024
Rickelton takes the catch, as the Proteas seal the victory by 109 runs!🇿🇦😃🥳#WozaNawe#BePartOfIt #SAvSL
ಈ ಗೆಲುವಿನೊಂದಿಗೆ ದ.ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲೂ ಅಗ್ರಸ್ಥಾನಕ್ಕೇರಿದೆ. ಇದುವರೆಗೆ 10 ಪಂದ್ಯಗಳನ್ನು ಆಡಿರುವ ಹರಿಣ ಪಡೆ 6ರಲ್ಲಿ ಗೆದ್ದು 3ರಲ್ಲಿ ಸೋತಿದ್ದು, ಶೇಕಡಾವಾರು 63.33 ಅಂಕಗಳೊಂದಿಗೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಎರಡನೇ ಸ್ಥಾನಕ್ಕೆ ಕುಸಿದ ಆಸ್ಟ್ರೇಲಿಯಾ 60.71 ಶೇಕಡಾವಾರು ಅಂಕ ಹೊಂದಿದ್ದು, ಭಾರತ ಶೇ 57.29 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ.
ಭಾರತಕ್ಕೆ ಸಂಕಷ್ಟ: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಗೆಲ್ಲುತ್ತಿದ್ದಂತೆ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಇದೀಗ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ನೇರವಾಗಿ ಅರ್ಹತೆ ಪಡೆಯಬೇಕದಾರೆ ಆಸ್ಟ್ರೇಲಿಯಾ ವಿರುದ್ಧ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕು. ಒಂದೇ ಒಂದು ಪಂದ್ಯ ಸೋತರೂ ಇತರೆ ತಂಡಗಳ ಅಂಕಗಳನ್ನು ಅವಲಂಭಿಸಬೇಕಾಗುತ್ತದೆ.
ಇದನ್ನೂ ಓದಿ: 2ನೇ ಟೆಸ್ಟ್ ಸೋತ ಭಾರತಕ್ಕೆ ಬಿಗ್ ಶಾಕ್: ಅಗ್ರಸ್ಥಾನದಿಂದ ಕುಸಿದ ರೋಹಿತ್ ಪಡೆ; WTC ಫೈನಲ್ ರೇಸ್ನಿಂದ ಔಟ್?