ETV Bharat / sports

ಈಕ್ವೆಸ್ಟ್ರಿಯನ್: ಭಾರತದ ಶ್ರುತಿ ವೋರಾ ಐತಿಹಾಸಿಕ ಸಾಧನೆ - Shruti Vora Logs Historic Victory

ಈಕ್ವೆಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್‌ಐ) ಅನುಭವಿ ಶ್ರುತಿ ವೋರಾ ತ್ರೀಸ್ಟಾರ್ ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್ ಗೆದ್ದ ಮೊದಲ ಭಾರತೀಯ ರೈಡರ್ ಆಗಿದ್ದಾರೆ ಎಂದು ಘೋಷಿಸಿದೆ. ಕೋಲ್ಕತ್ತಾ ಮೂಲಕ ಶ್ರುತಿ ಅವರು ಡ್ರೆಸ್ಸೇಜ್ ವರ್ಲ್ಡ್ ಚಾಂಪಿಯನ್‌ಶಿಪ್ (2022) ಮತ್ತು ಏಷ್ಯನ್ ಗೇಮ್ಸ್ (2010-2014) ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

Shruti Vora Logs Historic Victory Becomes First Indian to Win 3-Star GP Event
ಭಾರತದ ಶ್ರುತಿ ವೋರಾ ಐತಿಹಾಸಿಕ ಸಾಧನೆ (ETV Bharat)
author img

By ETV Bharat Karnataka Team

Published : Jun 14, 2024, 9:38 AM IST

ನವದೆಹಲಿ: ಕೋಲ್ಕತ್ತಾ ಮೂಲಕ ಅನುಭವಿ ಕ್ರೀಡಾಪಟು ಶ್ರುತಿ ವೋರಾ ಅವರು ತ್ರೀಸ್ಟಾರ್ ಗ್ರ್ಯಾಂಡ್ ಪ್ರಿಕ್ಸ್ ಈವೆಂಟ್​​ನಲ್ಲಿ ಗೆಲುವು ದಾಖಲಿಸಿದ್ದಾರೆ. ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಅಶ್ವಾರೋಹಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಭಾರತದ ಈಕ್ವೆಸ್ಟ್ರಿಯನ್ ಫೆಡರೇಶನ್ (ಇಎಫ್‌ಐ) ಗುರುವಾರ ಪ್ರಕಟಿಸಿದೆ.

ಜೂ. 7-9 ರಂದು ಸ್ಲೊವೇನಿಯಾದ ಲಿಪಿಕಾದಲ್ಲಿ ನಡೆದ ಸಿಡಿಐ-3 ಸ್ಪರ್ಧೆಯಲ್ಲಿ ಶ್ರುತಿ 67.761 ಅಂಕಗಳನ್ನು ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಮೊಲ್ಡೊವಾದ ಟಟಿಯಾನಾ ಆಂಟೊನೆಂಕೊ (ಆಚೆನ್) 66.522 ಅಂಕ ಗಳಿಸಿದರೆ, ಆಸ್ಟ್ರಿಯಾದ ಜೂಲಿಯನ್ ಗೆರಿಚ್ 66.087 ಅಂಕ ಗಳಿಸುವ ಮೂಲಕ ಅಗ್ರ-3ರಲ್ಲಿ ಸ್ಥಾನ ಪಡೆದರು.

ಈಕ್ವೆಸ್ಟ್ರಿಯನ್ ಫೆಡರೇಶನ್ ಆಫ್ ಇಂಡಿಯಾ (ಇಎಫ್‌ಐ) ಪ್ರಧಾನ ಕಾರ್ಯದರ್ಶಿ ಕರ್ನಲ್ ಜೈವೀರ್ ಸಿಂಗ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. 'ಭಾರತೀಯ ಅಶ್ವಾರೋಹಿ ಭ್ರಾತೃತ್ವಕ್ಕೆ ಇದು ತುಂಬಾ ಒಳ್ಳೆಯ ಸುದ್ದಿ. ಶ್ರುತಿ ಅವರ ಈ ಸ್ಪೂರ್ತಿದಾಯಕ ಆಟವನ್ನು ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಅನೇಕ ಮಹಿಳೆಯರು ಕ್ರೀಡೆಯನ್ನು ಮೆಚ್ಚಿಕೊಂಡು ಭಾಗಿಯಾಗುತ್ತಿದ್ದಾರೆ. ಈ ರೀತಿಯ ಸಾಧನೆಗಳು ಶ್ರೇಷ್ಠತೆಗಾಗಿ ಶ್ರಮಿಸಲು ಇನ್ನೂ ಅನೇಕ ಕುದುರೆ ಸವಾರರನ್ನು ಪ್ರೇರೇಪಿಸುತ್ತವೆ' ಎಂದಿದ್ದಾರೆ.

ಈ ಫಲಿತಾಂಶದಿಂದ ನನಗೆ ತುಂಬಾ ಖುಷಿಯಾಗಿದೆ. ಈ ಸಾಧನೆಗಾಗಿ ನಾನು ಬಹಳ ಕಷ್ಟಪಟ್ಟಿರುವೆ. ಇಂದಿನ ಈ ಗೆಲುವು ನನಗೆ ನಿಜವಾಗಿಯೂ ತೃಪ್ತಿ ತಂದಿದೆ. ಒಲಂಪಿಕ್ ವರ್ಷದಲ್ಲಿ ಈ ಗೆಲುವು ಒಲಂಪಿಕ್ ಕ್ರೀಡಾಪಟುಗಳಿಗೆ ಬಹಳ ಭರವಸೆ ನೀಡಿದೆ. ತ್ರೀಸ್ಟಾರ್​ ಈವೆಂಟ್ ಗೆದ್ದ ದೇಶದ ಮೊದಲ ಅಶ್ವರೋಹಿ ಅನ್ನೋದು ಖುಷಿ ತರಿಸಿದೆ. ಭವಿಷ್ಯದಲ್ಲೂ ನನ್ನ ದೇಶಕ್ಕೆ ಗೌರವ ತರಲು ನಾನು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಶ್ರುತಿ ವೋರಾ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾ ಮೂಲಕ ಶ್ರುತಿ ಅವರು ಡ್ರೆಸ್ಸೇಜ್ ವರ್ಲ್ಡ್ ಚಾಂಪಿಯನ್‌ಶಿಪ್ (2022) ಮತ್ತು ಏಷ್ಯನ್ ಗೇಮ್ಸ್ (2010-2014) ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: 'ವಿರಾಟ್​ ಕೊಹ್ಲಿಗೆ ಏನಾಗಿದೆ?': ಬ್ಯಾಟಿಂಗ್​ ಕಿಂಗ್​ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ಬೇಸರ - virat kohli

ETV Bharat Logo

Copyright © 2024 Ushodaya Enterprises Pvt. Ltd., All Rights Reserved.