ETV Bharat / bharat

ವರದಕ್ಷಿಣೆಗೆ ಬೇಡಿಕೆ ಇಟ್ಟ ಕಾನ್ಸ್​​ಟೇಬಲ್​: ಜೈಲಿಗೆ ಕಳುಹಿಸಿದ ವಧು - GROOM DEMANDS FOR DOWRY

ವಧುವಿನ ಕುಟುಂಬದಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ವರನ ವಿರುದ್ಧ ಮಧುಮಗಳೇ ಪೊಲೀಸರಿಗೆ ದೂರು ನೀಡಿದ್ದಾಳೆ.

Groom Demands for Dowry bride sent him to jail in Rajastan
ಸಾಂದರ್ಭಿಕ ಚಿತ್ರ (ಐಎಎನ್​ಎಸ್​​)
author img

By ETV Bharat Karnataka Team

Published : Nov 14, 2024, 2:55 PM IST

ಜೈಪುರ: ಮದುವೆಯಾಗಿ ಹೊಸ ಬದುಕು ಆರಂಭಿಸಬೇಕಿದ್ದ ಕಾನ್ಸ್​ಟೇಬಲ್​ ಇದೀಗ ತನ್ನ ದುರಾಸೆಯಿಂದ ಜೈಲು ಕಂಬಿ ಎಣಿಸುವಂತೆ ಆಗಿದೆ. ರಾಜಸ್ಥಾನದ ನೀಮ್​ ಕಾ ಥಾಣಾದಲ್ಲಿ ಮದುವೆ ಮಾಡಿಕೊಳ್ಳಲು ವಧುವಿನ ಕುಟುಂಬದಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ವರನ ವಿರುದ್ಧ ಮಧುಮಗಳೇ ಪೊಲೀಸರಿಗೆ ದೂರು ನೀಡಿದ್ದಾಳೆ.

ಏನಿದು ಘಟನೆ?: ರಾಜಸ್ಥಾನದ ನೀಮ್​ ಕಾ ಥಾಣಾದ ಕೊಟ್ವಾಲಿ ಪ್ರದೇಶದ ಐಟಿಪಿಬಿ ಕಾನ್ಸ್​ಟೇಬಲ್​ ಮದುವೆ ನಿಶ್ಚವಾಗಿತ್ತು. ಮದುವೆ ಸಂಬಂಧ ಈಗಾಗಲೇ 5 ಲಕ್ಷ ರೂ ಹಣವನ್ನು ನಗದು ರೂಪದಲ್ಲಿ ಆತ ಪಡೆದಿದ್ದ ಎಂಬ ಆರೋಪ ಇದೆ. ಇಷ್ಟಾದರೂ ದುರಾಸೆ ಮುಂದುವರೆಸಿದ ಮಧುಮಗ ಮದುವೆ ವಿದಾಯಿ ಕಾರ್ಯಕ್ರಮದಲ್ಲಿ ಮತ್ತೆ ಐದು ಲಕ್ಷ ಹಣ ಮತ್ತು ಬೈಕ್​ ನೀಡಿದರೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ ಎನ್ನಲಾಗಿದೆ. ಇದನ್ನು ತಿಳಿದ ವಧು, ಅಂತಿಮವಾಗಿ ಆತನ ಜೊತೆಗೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಎರಡು ಕುಟುಂಬಗಳ ನಡುವೆ ವಾಗ್ದಾದ ಏರ್ಪಟ್ಟಿದೆ. ಈ ವೇಳೆ ವರನ ಕುಟುಂಬದ ಸಂಬಂಧಿಕರು ಕೂಡಾ ಅನುಚಿತ ವರ್ತನೆ ತೋರಿದ್ದು, ಪರಿಸ್ಥಿತಿ ಕೈ ಮೀರಿದೆ. ತಕ್ಷಣಕ್ಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ಆಗಮಿಸಿದ ಸರ್ಕಲ್​ ಇನ್ಸ್​ಪೆಕ್ಟರ್​ ಹರಿನರಾಯಣನ್​ ಮೀನಾ, ಪ್ರಕರಣದ ಸಂಬಂಧ ವರ ಮತ್ತು ಆತನ ತಂದೆ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.

ವಧು ಕುಟುಂಬದ ಪ್ರಕಾರ, ಈಗಾಗಲೇ ವರನಿಗೆ ಅವರ ಬೇಡಿಕೆಯಂತೆ ಹಣ ನೀಡಿದ್ದು, ಕೊನೆ ಕ್ಷಣದಲ್ಲಿ ಮತ್ತೊಮ್ಮೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಿಇಡಿ​(BEd) ಪದವಿ ವಧುವಿನ ಕುಟುಂಬಕ್ಕೆ ಸಾಧಾರಣ ಆರ್ಥಿಕ ಹಿನ್ನಲೆಯಾಗಿದ್ದು, ಈ ಬೇಡಿಕೆ ನಿರಾಕರಿಸಿದ್ದಾರೆ.

ಈ ವೇಳೆ ಸಪ್ತಪದಿ ಕಾರ್ಯಕ್ರಮದಲ್ಲಿ ವರ ಅನುಚಿತ ವರ್ತನೆ ತೋರಿದ್ದಾಗಿ ವಧು ಆರೋಪಿಸಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ವರನ ಬಂಧನವಾಗಿದೆ. ಕಡೆಗೆ ವರನ ಕುಟುಂಬಸ್ಥರು ನೀಡದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಹಳಿ ತಪ್ಪಿದ ಗೂಡ್ಸ್​ ರೈಲು: ಟ್ರ್ಯಾಕ್​ ಹಾನಿಯಿಂದಾಗಿ 39 ರೈಲುಗಳ ಸಂಚಾರ ಪೂರ್ಣ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.