Shikhar Dhawan gets emotional: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ 2023ರಲ್ಲಿ ಪತ್ನಿ ಆಯೇಷಾ ಮುಖರ್ಜಿಯೊಂದಿಗೆ ವಿಚ್ಛೇದನ ಪಡೆದುಕೊಂಡಿರುವುದು ಗೊತ್ತೆ ಇದೆ. ಆದರೆ ಪತ್ನಿ ಮಾತ್ರವಲ್ಲದೆ ಮಗ ಜೋರಾವರ್‌ನ ಜೊತೆಗಿನ ಸಂಪರ್ಕವನ್ನೂ ಕಳೆದುಕೊಂಡಿದ್ದಾರೆ.
ಹೌದು, ವಿಚ್ಛೇದನ ಬಳಿಕ ನ್ಯಾಯಾಲಯ ತನ್ನ ಮಗನನ್ನು ಭೇಟಿಯಾಗಲು ಮತ್ತು ವೀಡಿಯೋ ಕರೆಯ ಮೂಲಕ ಸಂಪರ್ಕದಲ್ಲಿರಲು ಅನುಮತಿ ನೀಡಿದ್ದರೂ, ಅದು ಪ್ರಯೋಜನವಾಗಿಲ್ಲ. ಮಗ ಜೋರಾವರ್ನೊಂದಿಗೆ ಮಾತನಾಡುವುದಾಗಲಿ ಅಥವಾ ನೋಡುವುದಾಗಲಿ ಆಗದಂತೆ ಧವನ್ ಅವರನ್ನು ಮಾಜಿ ಪತ್ನಿ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಬ್ಲಾಕ್ ಮಾಡಿದ್ದು ಶಿಖರ್ ಮಗನನ್ನು ನೆನುಪಿಸಿಕೊಂಡು ಭಾವುಕರಾಗಿದ್ದಾರೆ.
ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಪಾಡ್ಕಾಸ್ಟ್ವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಧವನ್, 'ನನ್ನ ಮಗ ಜೋರಾವರ್‌ನನ್ನು ನೋಡಿ ಎರಡು ವರ್ಷಗಳೆ ಕಳೆದಿವೆ. ನಾನು ಅವನ ಜೊತೆ ಮಾತನಾಡಿ ಒಂದು ವರ್ಷವಾಯಿತು. ನನ್ನನ್ನು ಎಲ್ಲಾ ಸಾಮಾಜಿಕ ಮಾಧ್ಯಮಗಳಿಂದ ಬ್ಲಾಕ್ ಮಾಡಲಾಗಿದೆ. ಇದು ತುಂಬಾ ಕಷ್ಟಕರವಾಗಿದೆ ಎಂದ ಧವನ್ ನನಗೆ ಮಗನ ನೆನಪಾಗುತ್ತಿದೆ ಎಂದು ಭಾವುಕರಾಗಿದ್ದಾರೆ.
ಆದರೆ, ನಾನು ಪ್ರತಿದಿನ ಅವನೊಂದಿಗೆ ಮನಸ್ಸಿನಲ್ಲೆ ಮಾತನಾಡುತ್ತೇನೆ. ಈ ವೇಳೆ ಅವನನ್ನು ಅಪ್ಪಿಕೊಂಡತೆ ಬಾಸವಾಗುತ್ತದೆ. ಹೀಗೆ ನಾನು ಆತನ ನೆನಪಿಸಿಕೊಳ್ಳುತ್ತೇನೆ. ಸದ್ಯ, ದುಃಖಿತನಾಗುವುದರಿಂದ ಏನೂ ಪ್ರಯೋಜನ ಇಲ್ಲ. ನನ್ನ ಮಗನಿಗೆ ಈಗ 11 ವರ್ಷ. ಆದರೆ ನಾನು ಅವನೊಂದಿಗೆ ಕಳೆದ ಸಮಯ ಕೇವಲ ಎರಡೂವರೆ ವರ್ಷ ಮಾತ್ರ ಎಂದು ಧವನ್ ಹೇಳಿದ್ದಾರೆ.
ಆಕ್ಷಣ ನಾನು ಆನಂಧಿಸುತ್ತೇನೆ: ಭವಿಷ್ಯದಲ್ಲಿ ತನ್ನ ಮಗನನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಆ ಕ್ಷಣವನ್ನು ಹೇಗೆ ಆನಂದಿಸುತ್ತೇನೆ ಎಂಬುದರ ಬಗ್ಗೆ ಧವನ್ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದರು. 'ಮೊದಲು ನಾನು ನನ್ನ ಮಗ ಜೋರಾವರ್‌ನನ್ನು ಬಿಗಿದಪ್ಪಿಕೊಳ್ಳುವೆ' ನಾನು ಅವನ ಜೊತೆ ಹೆಚ್ಚಿನ ಸಮಯ ಕಳೆಯುವೆ. ನನಗೆ ಜೋರಾವರ್ ಮಾತುಗಳು ಕೇಳುವುದು ತುಂಬ ಇಷ್ಟ. ಒಂದು ವೇಳೆ ಜೋರಾವರ್ ಅತ್ತರೆ ನಾನು ಅವನೊಂದಿಗೆ ಅಳುವೆ. "ನನ್ನ ಮಗನೊಂದಿಗೆ ಸಮಯ ಕಳೆಯುವುದನ್ನು ನಾನು ಆನಂದಿಸುತ್ತೇನೆ" ಎಂದು ಹೇಳಿದರು.
ಅವನು ನನ್ನ ಇನ್ನಿಂಗ್ಸ್ ನೋಡುತ್ತಾನೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಅವನ ಸಂತೋಷವೇ ನನಗೆ ಮುಖ್ಯವಾದದ್ದು. ಜೋರಾವರ್ ಆರೋಗ್ಯವಾಗಿ ಮತ್ತು ಸಂತೋಷದಿಂದ ಇರಬೇಕೆಂದು ನಾನು ಬಯಸುತ್ತೇನೆ. ನನ್ನನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದ್ದರೂ, ನಾನು ಪ್ರತಿ ಮೂರು ಅಥವಾ ನಾಲ್ಕು ದಿನಗಳಿಗೊಮ್ಮೆ ಅವನಿಗೆ ಸಂದೇಶ ಕಳುಹಿಸುತ್ತೇನೆ. ನಾನು ಕಳುಹಿಸಿದ ಸಂದೇಶಗಳು ಅವನು ಓದುತ್ತಾನೆ ಎಂದು ನಾನು ಭಾವಿಸುವುದಿಲ್ಲ. ಆ ಸಂದೇಶಗಳನ್ನು ಓದದಿದ್ದರೂ ನನಗೆ ಅಭ್ಯಂತರವಿಲ್ಲ. ಆದರೆ ಅವನನ್ನು ಭೇಟಿಯಾಗಲು ನಾನು ಬಯಸುತ್ತೇನೆ ಎಂದು ಶಿಖರ್ ತಿಳಿಸಿದರು.
Shikhar Dhawan said, " i still message my son, even though i'm blocked from everywhere". 💔
— Mufaddal Vohra (@mufaddal_vohra) February 16, 2025
- an emotional interview of gabbar!pic.twitter.com/UesiSw3CLU
ಆಸ್ಟ್ರೇಲಿಯಾದ ಆಯೇಷಾ ಮತ್ತು ಧವನ್ 2012ರಲ್ಲಿ ವಿವಾಹವಾದರು. ಈ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ. ಆದರೆ, ಧವನ್ ಮತ್ತು ಆಯೇಷಾ ಮುಖರ್ಜಿ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ 2023ರಲ್ಲಿ ವಿಚ್ಛೇದನ ಪಡೆದರು. ಧವನ್ ದಂಪತಿ ಎರಡು ವರ್ಷಗಳ ಹಿಂದೆಯೇ ಬೇರ್ಪಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: IPL 2025ರ ಸಂಪೂರ್ಣ ವೇಳಾಪಟ್ಟಿ ಪ್ರಕಟ : RCB ಪಂದ್ಯಗಳು ಯಾವಾಗ?