ETV Bharat / sports

ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಸತತ ಸೋಲು: ಬಾಬರ್​ ಪಡೆಗೆ ಶಾಹಿದ್ ಅಫ್ರಿದಿ ನೀಡಿದ ಸಲಹೆಗಳೇನು? - Shahid Afridi

author img

By ETV Bharat Karnataka Team

Published : Jun 11, 2024, 7:17 AM IST

2024ರ ಟಿ-20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡವು ಸತತ ಸೋಲು ಅನುಭವಿಸಿದೆ. ಬಾಬರ್​ ಪಡೆಗೆ ಪಾಕ್​ ತಂಡ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೆಲವು ಸಲಹೆಗಳನ್ನು ನೀಡಿದ್ದಾರೆ.

PAKISTAN TEAM  SHAHID AFRIDI  T20 WORLD CUP  BABAR AZAM
ಶಾಹಿದ್ ಅಫ್ರಿದಿ (IANS)

ನವದೆಹಲಿ: ''ಟಿ20 ವಿಶ್ವಕಪ್‌ನ ಮುಂದಿನ ಹಂತದಲ್ಲಿ ಆಡುವ ಅವಕಾಶಗಳು ಇರುವುದರಿಂದ ಬಾಬರ್ ಅಜಮ್ ನೇತೃತ್ವದ ತಂಡವು ತಮ್ಮ 11 ಆಟಗಾರರಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ'' ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಲಹೆ ನೀಡಿದ್ದಾರೆ.

ವಿಶ್ವಕಪ್ ಆರಂಭದ ಸಮಯದಲ್ಲಿ ಪಾಕಿಸ್ತಾನ ತನ್ನ ತಂಡದೊಂದಿಗೆ ಪ್ರಯೋಗ ಮಾಡಲು ಪ್ರಯತ್ನಿಸಿದೆ. ಸಮತೋಲನ ಮತ್ತು ಸರಿಯಾದ ಸಂಯೋಜನೆಯನ್ನು ಕಂಡುಕೊಳ್ಳದೇ ಇರುವುದು ತಂಡವು ಟಿ-20 ವಿಶ್ವಕಪ್‌ನಲ್ಲಿ ಅವರ ಸತತ ಸೋಲಲು ಕಾರಣವಾಗಿದೆ. ಆತಿಥೇಯ USA ವಿರುದ್ಧ ಸೂಪರ್ ಓವರ್‌ನಲ್ಲಿ ಪಾಕ್​​ ತಂಡ ಐದು ರನ್‌ಗಳ ಸೋಲು ಅನುಭವಿಸಿತ್ತು. ಭಾನುವಾರ, ಟ್ರಿಕಿ ನ್ಯೂಯಾರ್ಕ್ ಮೇಲ್ಮೈಯಲ್ಲಿ, ಪಾಕಿಸ್ತಾನವು ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 120 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ ಸೋಲು ಅನುಭವಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಹಿದ್ ಅಫ್ರಿದಿ , ತಂಡದ 11 ಆಟಗಾರರಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ''ಪಾಕಿಸ್ತಾನ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಆರಂಭಿಕ ಸ್ಲಾಟ್‌ನಲ್ಲಿ ಮಾಜಿ ನಾಯಕ ಫಖರ್ ಜಮಾನ್ ಹಾಗೂ ಮೊಹಮ್ಮದ್ ರಿಜ್ವಾನ್ ಇರಿಸಬೇಕು. ಬಾಬರ್ ಅಜಮ್ ಮೂರನೇ ಸ್ಥಾನದಲ್ಲಿ ಬ್ಯಾಟ್​ ಬೀಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

"ಗ್ಯಾರಿ ಕರ್ಸ್ಟನ್ ಮತ್ತು ಬಾಬರ್ ಅಜಮ್ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಉಸ್ಮಾನ್ ಖಾನ್ ಮತ್ತು ಅಬ್ರಾರ್ ಅಹ್ಮದ್ ಬದಲಿಗೆ ಸಲ್ಮಾನ್ ಅಲಿ ಅಘಾ (ಇವರು T20 ವಿಶ್ವಕಪ್ ತಂಡದಲ್ಲಿ ಇಲ್ಲ) ತಂಡದಲ್ಲಿ ಆಡಬೇಕಿದೆ. ಶಾದಾಬ್ ಖಾನ್‌ ಅವರಿಗೆ, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್ ಅವರಿಗೆ ಬಡ್ತಿ ನೀಡಬೇಕು ಎಂದು ನಾನು ನಂಬುತ್ತೇನೆ. ಬಾಬರ್ ಅವರನ್ನು ಮೂರನೇ ಸ್ಥಾನಕ್ಕೆ ಆಡಿಸಬೇಕು" ಎಂದು ಶಾಹಿದ್ ತಿಳಿಸಿದ್ದಾರೆ.

ಪಾಕಿಸ್ತಾನವು ಸೂಪರ್ 8ರಲ್ಲಿ ಆಡಬೇಕಾದರೆ, ಆತಿಥೇಯ ತಂಡ ಯುಎಸ್ಎಗಿಂತ ತಮ್ಮ ನಿವ್ವಳ ರನ್ ರೇಟ್ ಅನ್ನು ಉತ್ತಮಗೊಳಿಸುವ ಜೊತೆಗೆ ತಮ್ಮ ಉಳಿದ ಎರಡು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು. ತಂಡದ ಆಟಗಾರರು ಮುಂದಿನ ಸುತ್ತಿಗೆ ಮುಂದುವರಿಯಲು ಇನ್ನೂ ಸ್ಪರ್ಧೆಯಲ್ಲಿರುವುದರಿಂದ ಪ್ರತಿಯೊಬ್ಬರೂ ಭರವಸೆಯಿಂದ ಮುನ್ನಡೆಯಬೇಕು ಎಂದು ಅಫ್ರಿದಿ ಸಲಹೆ ನೀಡಿದರು. ಇನ್ನು ಮಂಗಳವಾರ (ಜೂನ್ 11 ರಂದು) ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ತನ್ನ ಅಭಿಯಾನದ ಮೂರನೇ ಹಣಾಹಣಿಯಲ್ಲಿ ಕೆನಡಾವನ್ನು ಎದುರಿಸಲಿದೆ.

ಇದನ್ನೂ ಓದಿ: ಭಾರತದ ವಿರುದ್ಧ ಸೋಲು: ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರಬಂದ ಪಾಕ್​ ವೇಗಿ ನಸೀಮ್ ಶಾ - Naseem Shah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.