ETV Bharat / sports

ಲೋಕಸಭಾ ಚುನಾವಣೆ 2024: ಸಚಿನ್ ತೆಂಡೂಲ್ಕರ್, ಪುತ್ರ ಅರ್ಜುನ್ ಮತದಾನ - Sachin Tendulkar Vote - SACHIN TENDULKAR VOTE

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈನಲ್ಲಿ ಇಂದು ಮತದಾನ ಮಾಡಿದರು. ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್, ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.

Sachin Tendulkar
ಸಚಿನ್ ತೆಂಡೂಲ್ಕರ್ (ETV Bharat)
author img

By ETV Bharat Karnataka Team

Published : May 20, 2024, 6:19 PM IST

ಮುಂಬೈ (ಮಹಾರಾಷ್ಟ್ರ) : ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ಅವರ ಪುತ್ರ ಉದಯೋನ್ಮುಖ ಎಡಗೈ ವೇಗಿ ಅರ್ಜುನ್ ಅವರಿಂದು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ತೆಂಡೂಲ್ಕರ್ ಅವರನ್ನು ಭಾರತೀಯ ಚುನಾವಣಾ ಆಯೋಗದ (EC) 'ರಾಷ್ಟ್ರೀಯ ಐಕಾನ್' ಎಂದು ಗುರುತಿಸಲಾಗಿದೆ. ಅರ್ಜುನ್ ತೆಂಡೂಲ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (MI) ಗಾಗಿ ಆಡುತ್ತಾರೆ. ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಮತ್ತು ಅವರ ಮಗಳು ಸಾರಾ ಅವರ ಸ್ನಾತಕೋತ್ತರ ಪದವಿ ಘಟಿಕೋತ್ಸವದ ಸಮಾರಂಭದ ಕಾರಣ ಮುಂಬೈಗೆ ಬರಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.

200 ಟೆಸ್ಟ್‌ಗಳ ಅನುಭವಿ ಸಚಿನ್ ಮತ್ತು ಅರ್ಜುನ್ ತಮ್ಮ ಮತವನ್ನು ಚಲಾಯಿಸಿದ ನಂತರ ತಮ್ಮ ಶಾಯಿಯ ಬೆರಳನ್ನು ತೋರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಮಸ್ಯೆಗಳು ಏಕೆ ಉಂಟಾಗುತ್ತವೆ ಎಂದು ಹೇಳಲು ಬಯಸುತ್ತೇನೆ. ಏಕೆಂದರೆ, ಒಂದು, ನೀವು ಯೋಚಿಸದೇ ವರ್ತಿಸುತ್ತೀರಿ ಮತ್ತು ಎರಡು, ನೀವು ಯೋಚಿಸುತ್ತಲೇ ಇರುತ್ತೀರಿ. ಆದರೆ, ಕಾರ್ಯನಿರ್ವಹಿಸುವುದಿಲ್ಲ. ನಾನು ಜನರನ್ನು ತಮ್ಮ ಮತ ಚಲಾಯಿಸುವಂತೆ ಒತ್ತಾಯಿಸುತ್ತೇನೆ. ಇದು ನಮ್ಮ ರಾಷ್ಟ್ರದ ಭವಿಷ್ಯಕ್ಕೆ ಅತ್ಯಂತ ಮುಖ್ಯವಾಗಿದೆ" ಎಂದು ತೆಂಡೂಲ್ಕರ್ ಹೇಳಿದರು.

ಸಚಿನ್ ತೆಂಡೂಲ್ಕರ್ ಅವರು 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34,357 ರನ್ ಮತ್ತು 100 ಶತಕಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.

ಮುಂಬೈನ ಆರು ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಅವುಗಳೆಂದರೆ ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ ಮಧ್ಯ, ಮುಂಬೈ ದಕ್ಷಿಣ ಮತ್ತು ಮುಂಬೈ ದಕ್ಷಿಣ ಕೇಂದ್ರ. ಐದನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯ ಭಾಗವಾಗಿರುವ ಮಹಾರಾಷ್ಟ್ರದ ಇತರ ಕ್ಷೇತ್ರಗಳೆಂದರೆ ಧುಲೆ, ದಿಂಡೋರಿ, ನಾಸಿಕ್, ಕಲ್ಯಾಣ್, ಪಾಲ್ಘರ್, ಭಿವಂಡಿ ಮತ್ತು ಥಾಣೆ. ಮಹಾರಾಷ್ಟ್ರವು 48 ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಉತ್ತರ ಪ್ರದೇಶದ ನಂತರ ಎರಡನೇ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದೆ.

ಐದನೇ ಹಂತವು ವಿವಿಧ ಕ್ಷೇತ್ರಗಳಲ್ಲಿ ಪ್ರಮುಖ ಸ್ಪರ್ಧೆಗಳಿಗೆ ಸಾಕ್ಷಿಯಾಗಿದೆ. ರಾಹುಲ್ ಗಾಂಧಿ, ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಜೀವ್ ಪ್ರತಾಪ್ ರೂಡಿ, ಪಿಯೂಷ್ ಗೋಯಲ್, ಉಜ್ವಲ್ ನಿಕಮ್, ಕರಣ್ ಭೂಷಣ್ ಸಿಂಗ್, ಎಲ್‌ಜೆಪಿ (ರಾಮ್‌ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಜೆಕೆಎನ್‌ಸಿ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮತ್ತು ಆರ್‌ಜೆಡಿ ನಾಯಕಿ ರೋಹಿಣಿ ಆಚಾರ್ಯ ಮುಂತಾದ ನಾಯಕರು ಚುನಾವಣಾ ಕಣದಲ್ಲಿದ್ದಾರೆ.

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಎಂಟು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ 5 ರ ಚುನಾವಣೆ ನಡೆಯುತ್ತಿದೆ. 49 ಲೋಕಸಭಾ ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದಿಂದ 14, ಮಹಾರಾಷ್ಟ್ರದಿಂದ 13, ಪಶ್ಚಿಮ ಬಂಗಾಳದಿಂದ 7, ಬಿಹಾರದಿಂದ 5, ಜಾರ್ಖಂಡ್‌ನಿಂದ 3, ಒಡಿಶಾದಿಂದ 5 ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಿಂದ ತಲಾ ಒಂದರಲ್ಲಿ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ : ಐದನೇ ಹಂತದ ಮತದಾನ: ಕುಟುಂಬಸ್ಥರೊಂದಿಗೆ ವೋಟ್ ಮಾಡಿದ ​ಬಾಲಿವುಡ್ ಸ್ಟಾರ್​ ಹೃತಿಕ್ ರೋಷನ್ - Hrithik Roshan Casts His Vote

ETV Bharat Logo

Copyright © 2024 Ushodaya Enterprises Pvt. Ltd., All Rights Reserved.