ETV Bharat / sports

ವೈಡ್​ ಬಾಲ್, ನೋಬಾಲ್ ಇಲ್ಲದೆಯೇ 3 ಎಸೆತಗಳಲ್ಲಿ 24ರನ್​ ಸಿಡಿಸಿದ್ದ ತೆಂಡೂಲ್ಕರ್​! - SACHIN TENDULKAR 24 RUNS IN 3 BALL

ಯಾವುದೇ ವೈಡ್ ಮತ್ತು ನೋಬಾಲ್​ ಇಲ್ಲದೆಯೇ 3 ಲೀಗಲ್​ ಎಸೆತಗಳಲ್ಲಿ 24 ರನ್​ ಸಿಡಿಸಿ ಸಚಿನ್​ ತೆಂಡೂಲ್ಕರ್ ವಿಶ್ವದಾಖಲೆ ಬರೆದಿದ್ದರು.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (Getty Images)
author img

By ETV Bharat Sports Team

Published : Oct 11, 2024, 8:57 PM IST

Sachin 24 Runs In 3 Balls: ಕ್ರಿಕೆಟ್​ನಲ್ಲಿ ದಾಖಲೆ ಬರೆಯುವುದು, ಮುರಿಯುವುದೆಲ್ಲವೂ ಸಹಜ. ಆದರೆ ಇಂದಿಗೂ ಯಾರಿಂದಲೂ ಮುರಿಯಲಾಗದ ಅಪರೂಪದ ರೆಕಾರ್ಡ್​ಗಳು ಕ್ರಿಕೆಟ್​ನಲ್ಲಿ ದಾಖಲಾಗಿವೆ. ಈ ಪೈಕಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತಂಡೂಲ್ಕರ್​ ನಿರ್ಮಿಸಿರುವ ದಾಖಲೆಯೊಂದು ವಿಶೇಷವಾಗಿದೆ.

ಹೌದು, ತೆಂಡೂಲ್ಕರ್​ ಯಾವುದೇ ನೋಬಾಲ್​ ಮತ್ತು ವೈಡ್​ ಬಾಲ್​ ಇಲ್ಲದೆಯೇ 3 ಸರಿಯಾದ ಎಸೆತಗಳಲ್ಲಿ 24 ರನ್​ ಸಿಡಿಸಿದ್ದಾರೆ. ಅದೂ ಕೂಡ ಅಂತಾರಾಷ್ಟ್ರೀಯ ಪಂದ್ಯದಲ್ಲಿ.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (Getty Images)

ಕ್ರೈಸ್ಟ್‌ಚರ್ಚ್‌ ಮೈದಾನದಲ್ಲಿ ಸಚಿನ್ ದಾಖಲೆ: 2002-03ರಲ್ಲಿ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಡಿಸೆಂಬರ್ 4, 2002ರಂದು ಕ್ರೈಸ್ಟ್‌ಚರ್ಚ್ ಮೈದಾನದಲ್ಲಿ ನಡೆದ ಕಿವೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್​ ಬಿರುಸಿನ ಬ್ಯಾಟಿಂಗ್​ ಮಾಡಿದ್ದರು. ಕೇವಲ 27 ಎಸೆತಗಳಲ್ಲಿ 72 ರನ್​ ಚಚ್ಚಿದ್ದರು. ಇದು ಸಚಿನ್ ಕ್ರಿಕೆಟ್​ ವೃತ್ತಿಜೀವನದ ಅತ್ಯಂತ ರೋಚಕ ಇನ್ನಿಂಗ್ಸ್ ಆಗಿಯೂ ಖ್ಯಾತಿ ಪಡೆದಿದೆ. ಸ್ವತಃ ಸಚಿನ್ ಕೂಡ ಇದನ್ನು ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳಿದ್ದಾರೆ. ಅಲ್ಲದೆ ಇದೇ ಇನ್ನಿಂಗ್ಸ್​ನಲ್ಲಿ ಯಾವುದೇ ನೋಬಾಲ್​ ಮತ್ತು ವೈಡ್​ಬಾಲ್​ ಇಲ್ಲದೇ 3 ಲೀಗಲ್​ ಎಸೆತಗಳಲ್ಲಿ 24 ರನ್​ಗಳನ್ನು ಸಿಡಿಸಿದ್ದರು. ಇದು ನಂಬಲಸಾಧ್ಯವಾದರೂ ನಿಜ.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (Getty Images)

ವಾಸ್ತವವಾಗಿ, ಈ ಪ್ರವಾಸದಲ್ಲಿ ಐಸಿಸಿ 'ಕ್ರಿಕೆಟ್​ ಮ್ಯಾಕ್ಸ್​ ಇಂಟರ್ನ್ಯಾಷನಲ್​' ಹೆಸರಿನಲ್ಲಿ ಏಕದಿನ ಪಂದ್ಯ ಆಯೋಜಿಸಿತ್ತು. ಟೆಸ್ಟ್​ ಸ್ವರೂಪದಂತೆ ಎರಡೂ ತಂಡಗಳಿಗೆ ತಲಾ 10 ಓವರ್​ಗಳಂತೆ ಎರಡೆರಡು (ಒಟ್ಟು 4 ಇನ್ನಿಂಗ್ಸ್​) ಇನ್ನಿಂಗ್ಸ್​ಗಳನ್ನು ಆಡಿಸಲಾಗಿತ್ತು. ತಲಾ ತಂಡದಲ್ಲಿ 11 ಆಟಗಾರರ ಬದಲಿಗೆ 12 ಆಟಗಾರರನ್ನು ಆಡಿಸಲಾಗಿತ್ತು. ಪಂದ್ಯದಲ್ಲಿ 'ಮ್ಯಾಕ್ಸ್​ ಝೋನ್​' ಎಂದು ಚೌಕಕಾರದ ಝೋನ್​ ಒಂದನ್ನು ಬೌಂಡರಿ ಲೈನ್​ ಬಳಿ ಸ್ಥಾಪಿಸಲಾಗಿತ್ತು. ಬ್ಯಾಟರ್​ ಬಾರಿಸಿದ ಚೆಂಡು ಈ ವಲಯದಲ್ಲಿ ಬಿದ್ದರೆ ಡಬಲ್​ ರನ್​ಗಳು ಸಿಗುತ್ತಿದ್ದವು. ಅಂದರೆ ಬೌಂಡರಿ ಬಾರಿಸಿದರೆ 4 ರನ್​ಗಳ ಬದಲಿಗೆ 8 ರನ್​ಗಳು, ಸಿಕ್ಸ್​ ಸಿಡಿಸಿದರೆ 6 ರನ್​ಗಳ ಬದಲಿಗೆ 12 ರನ್​ಗಳನ್ನು ನೀಡಲಾಗುತ್ತಿತ್ತು.

ಸಚಿನ್​ ತೆಂಡೂಲ್ಕರ್​
ಸಚಿನ್​ ತೆಂಡೂಲ್ಕರ್​ (Getty Images)

ಸಚಿನ್ ಸತತ ಮೂರು ಎಸೆತಗಳನ್ನು ‘ಮ್ಯಾಕ್ಸ್ ಝೋನ್’ಗೆ ಬಾರಿಸಿದ್ದರು. ಈ 3 ಎಸೆತಗಳಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಹಾಗೂ 2ರನ್ ಗಳಿಸಿದ್ದರು. ಅಂದರೆ ಕ್ರಮವಾಗಿ 8, 12 ಮತ್ತು 4 ರನ್ ಗಳಿಸಿದರು. ಈ ಮೂಲಕ ಸತತ ಮೂರು ಲೀಗಲ್​ ಎಸೆತಗಳಲ್ಲಿ 24 ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದರು.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ: ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.