ETV Bharat / sports

IPL: ಡೆಲ್ಲಿ ಕ್ಯಾಪಿಟಲ್ಸ್​ಗೆ 187 ರನ್​ಗಳ ಗುರಿ ನೀಡಿದ ಆರ್​ಸಿಬಿ - RCB VS DC - RCB VS DC

ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ.

IPL: ಆರ್​ಸಿಬಿ ವಿರುದ್ದ ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್​ ಆಯ್ಕೆ
IPL: ಆರ್​ಸಿಬಿ ವಿರುದ್ದ ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್​ ಆಯ್ಕೆ (ETV Bharat)
author img

By ETV Bharat Karnataka Team

Published : May 12, 2024, 7:39 PM IST

Updated : May 12, 2024, 11:01 PM IST

ಬೆಂಗಳೂರು: ಐಪಿಎಲ್​ನ 62ನೇ ಪಂದ್ಯದಲ್ಲಿಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಮುಖಾಮುಖಿಯಾಗಿವೆ.

ಆರ್​ಸಿಬಿಯ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 187 ರನ್​ ಕಲೆಹಾಕಿದೆ. ತಂಡದ ಪರ ರಜತ್​ ಪಟಿದಾರ್​ 52 ರನ್​ ಬಾರಿಸಿ ಹೈಸ್ಕೋರರ್​ ಎನಿಸಿಕೊಂಡರು. 32 ಎಸೆತಗಳಲ್ಲಿ 3 ಸಿಕ್ಸರ್​ ಮತ್ತು 3 ಬೌಂಡರಿ ಸಮೇತ ಅರ್ಧಶತಕ ಪೂರೈಸಿದರು. ಉಳಿದಂತೆ ವಿರಾಟ್​ ಕೊಹ್ಲಿ (27), ಡುಪ್ಲೆಸಿಸ್​ (6), ವಿಲ್​ ಜಾಕ್ಸ್​ (41), ಗ್ರೀನ್​ (32*), ಮಹಿಪಾಲ್ ಲೊಮ್ರೋರ್ (13), ಕರಣ್​ ಶರ್ಮಾ (6) ರನ್​ ಕೊಡುಗೆ ನೀಡಿದರು.

ಉಭಯ ತಂಡಗಳ ಪಾಲಿಗೆ ಇಂದಿನ ಪಂದ್ಯ ಮಹತ್ವದಾಗಿದ್ದು, ಗೆದ್ದ ತಂಡದ ಪ್ಲೇ ಆಫ್​ ಕನಸು ಜೀವಂತವಾಗಿರಲಿದೆ. ಸೋತ ಟೀಮ್​ ರೇಸ್​ನಿಂದ ಹೊರ ಬೀಳಲಿದೆ. ಸದ್ಯ ಆರ್​ಸಿಬಿ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದ್ದರೆ, ಮತ್ತೊಂದೆಡೆ ಡೆಲ್ಲಿ 12 ಪಂದ್ಯ ಆಡಿ 6ರಲ್ಲಿ ಗೆದ್ದು 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.

ತಂಡಗಳು - ಆರ್​ಸಿಬಿ: ಫಾಫ್ ಡು ಪ್ಲೆಸಿಸ್(ಸಿ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(w), ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಲಾಕಿ ಫರ್ಗುಸನ್, ಯಶ್ ದಯಾಳ್.

ಇಂಪ್ಯಾಕ್ಟ್​ ಪ್ಲೇಯರ್ಸ್​: ಸ್ವಪ್ನಿಲ್ ಸಿಂಗ್, ಅನುಜ್ ರಾವತ್, ಸುಯಶ್ ಪ್ರಭುದೇಸಾಯಿ, ವೈಶಾಕ್ ವಿಜಯಕುಮಾರ್, ಹಿಮಾಂಶು ಶರ್ಮಾ.

ಡೆಲ್ಲಿ ಕ್ಯಾಪಿಟಲ್ಸ್​: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್(ಡಬ್ಲ್ಯೂ), ಶಾಯ್ ಹೋಪ್, ಕುಮಾರ್ ಕುಶಾಗ್ರಾ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್(ಸಿ), ಕುಲದೀಪ್ ಯಾದವ್, ರಸಿಖ್ ದಾರ್ ಸಲಾಂ, ಮುಕೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ಇಂಪ್ಯಾಕ್ಟ್​ ಪ್ಲೇಯರ್ಸ್​: ಡೇವಿಡ್ ವಾರ್ನರ್, ಸುಮಿತ್ ಕುಮಾರ್, ರಿಕಿ ಭುಯಿ, ವಿಕ್ಕಿ ಒಸ್ತ್ವಾಲ್, ಪ್ರವೀಣ್ ದುಬೆ.

ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್‌: ಯುಎಸ್ಎ ತಂಡದಲ್ಲಿ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಆಪ್ತನ ಪುತ್ರ - USA T20 World Cup Team

Last Updated : May 12, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.