ETV Bharat / sports

ಪುಟ್ಟ ಅಭಿಮಾನಿಯ ಭೇಟಿ ಮಾಡಿ ಆಟೋಗ್ರಾಫ್​ ನೀಡಿದ ರೋಹಿತ್​ ಶರ್ಮಾ - Rohit Sharma

ಕ್ರಿಕೆಟಿಗ ರೋಹಿತ್​ ಶರ್ಮಾ ತಮ್ಮ ಪುಟ್ಟ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಆಟೋಗ್ರಾಫ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (ETV Bharat)
author img

By ETV Bharat Sports Team

Published : Aug 23, 2024, 10:03 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ಬೆವರಿಳಿಸುವ ಹಿಟ್​ಮ್ಯಾನ್​ಗೆ ಪ್ರಪಂಚದ ಮೂಲೆಮೂಲೆಗಳಲ್ಲೂ ಅಭಿಮಾನಿಗಳಿದ್ದಾರೆ.

ರೋಹಿತ್​ ಅವರನ್ನು ಭೇಟಿಯಾಗಿ ಅವರಿಂದ ಆಟೋಗ್ರಾಫ್​ ಪಡೆಯಬೇಕೆಂದು ಮೈದಾನ ಸೇರಿದಂತೆ ಅವರ ಮನೆ, ಓಡಾಡುವ ರಸ್ತೆಗಳಲ್ಲಿ ನಿತ್ಯ ಅಭಿಮಾನಿಗಳು ಕಾಣಿಸಿಕೊಳ್ಳುತಲೇ ಇರುತ್ತಾರೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಬ್ಯಾಟ್​ ಹಿಡಿದು ಬಂದ ತನ್ನ ಪುಟ್ಟ ಬಾಲಕಿಯನ್ನು ರೋಹಿತ್ ಶರ್ಮಾ ಭೇಟಿ ಮಾಡಿ ಆಟೋಗ್ರಾಫ್​ ನೀಡಿದ್ದಾರೆ. ಬಾಲಕಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ಅವರು ಆಟೋಗ್ರಾಫ್​ ನೀಡಿದ್ದಾರೆ. ಬಳಿಕ ನೆರೆದಿದ್ದ ಇತರ ಅಭಿಮಾನಿಗಳಿಗೂ ಆಟೋಗ್ರಾಫ್ ಕೊಟ್ಟರು.

ಈ ಹಿಂದೆ, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಮೈದಾನಕ್ಕೆ ನುಗ್ಗಿ ರೋಹಿತ್​ರನ್ನು ಭೇಟಿ ಮಾಡಲು ಯತ್ನಿಸಿದ್ದರು. ಫೀಲ್ಡಿಂಗ್​ ಮಾಡುತ್ತಿದ್ದಾಗ ಮೈದಾನಕ್ಕೆ ನುಗ್ಗಿದ್ದ ಅವರ ಅಭಿಮಾನಿಯನ್ನು ಅಮೆರಿಕದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ತಮ್ಮ ಅಭಿಮಾನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸ್ ಸಿಬ್ಬಂದಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು ಯಾವುವು ಹೇಳಿ ನೋಡೋಣ! - Most Popular Sports

ETV Bharat Logo

Copyright © 2024 Ushodaya Enterprises Pvt. Ltd., All Rights Reserved.