ಚಂಡೀಗಢ: ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 27ನೇ ಪಂದ್ಯವು ಮುಲ್ಲನ್‌ಪುರದ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ರಾಜಸ್ಥಾನ್ ಬೌಲರ್ಗಳ ದಾಳಿಗೆ ಸಿಲುಕಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಅಥರ್ವ 12 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರು. ಪ್ರಭಾಸಿಮ್ರಾನ್ 14 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ಜಾನಿ ಬೈರ್‌ಸ್ಟೋ ಕೂಡ 19 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ಸ್ಯಾಮ್ ಕರ್ರನ್ 6 ರನ್ ಮತ್ತು ಶಶಾಂಕ್ 9 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ತಂಡದ ಸ್ಕೋರ್ 70ಕ್ಕೆ ತಲುಪುವ ವೇಳೆಗೆ ಪ್ರಮುಖ 5 ವಿಕೆಟ್ಗಳು ಉರುಳಿದ್ದವು.
ಈ ವೇಳೆ ತಂಡಕ್ಕೆ ಆಸರೆಯಾದ ಜಿತೇಶ್ ಕೊಂಚ ಹೊತ್ತು ಕ್ರೀಸ್ನಲ್ಲಿ ನಲೆಯೂರಿ ಸ್ಕೋರ್ ಸುಧಾರಿಸಲು ಪ್ರಯತ್ನಿಸಿದರು. 24 ಎಸೆತಗಳನ್ನು ಎದುರಿಸಿ 29 ರನ್ಗಳನ್ನು ಕಲೆ ಹಾಕಿದರು. ನಂತರ ಆವೇಶ್ ಖಾನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಲಿವಿಂಗ್ಸ್ಟನ್ ಕೂಡ 14 ಎಸೆತಗಳಲ್ಲಿ 21 ರನ್ ಸಿಡಿಸಿ ತಂಡಕ್ಕೆ ರನ್ ಕಾಣಿಕೆ ನೀಡಿ ನಿರ್ಗಮಿಸಿದರು. ಈ ವೇಳೆ ಅಷ್ಟೋಶ್ ಶರ್ಮಾ ಭರ್ಜರಿ ಬ್ಯಾಟ್ ಬೀಸಿ 16 ಎಸೆತಗಳಲ್ಲಿ 3 ಸಿಕ್ಸರ್ 1 ಬೌಂಡರಿ ಸಮೇತ 31ರನ್ ಚಚ್ಚಿ ತಂಡದ ಸ್ಕೋರ್ 147ರ ಗಡಿಗೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು.
ರಾಜಸ್ಥಾನ ಪರ ಅವೇಶ್ ಖಾನ್, ಕೇಶವ್ ಮಹಾರಾಜ್ ತಲಾ 2, ಕುಲ್ದೀಪ್ ಸೇನ್, ಚಹಾಲ್, ಬೌಲ್ಟ್ ತಲಾ ಒಂದು ವಿಕೆಟ್ ಪಡೆದರು. ಎರಡೂ ತಂಡಗಳು ಬದಲಾವಣೆಯೊಂದಿಗೆ ಕಣಕ್ಕಿದಿವೆ. ಗಾಯದ ಸಮಸ್ಯೆಯಿಂದ ಶಿಖರ್ ಧವನ್ ಈ ಪಂದ್ಯದಿಂದ ಹೊರ ಉಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸ್ಯಾಮ್ ಕರ್ರನ್ ನಾಯಕನ ಜವಾಬ್ದಾರಿ ವಹಿಸಿದ್ದಾರೆ. ಧವನ್ ಸ್ಥಾನಕ್ಕೆ ಅಥರ್ವ ಟೇಡೆ ಅವರನ್ನು ಕಣಕ್ಕಿಳಿಸಲಾಗಿತ್ತು.
ರಾಜಸ್ಥಾನದಲ್ಲಿ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಮತ್ತು ಆಲ್ರೌಂಡರ್ ಅಶ್ವಿನ್ ಹೊರ ಉಳಿದಿದ್ದಾರೆ. ಅವರ ಸ್ಥಾನಕ್ಕೆ ರೋವ್‌ಮನ್ ಪೌವೇಲ್ ಮತ್ತು ತನುಷ್ ಕೋಟ್ಯಾನ್ ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡ ಪ್ರಸಕ್ತ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ, ಈವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿರುವ ರಾಯಲ್ಸ್ 5ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ 5 ಪಂದ್ಯಗಳನ್ನು ಆಡಿ 2ರಲ್ಲಿ ಗೆದ್ದಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹಿಂದಿಕ್ಕುವ ಯೋಜನೆ ರೂಪಿಸಿಕೊಂಡಿದೆ.
ತಂಡಗಳು, ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್(ನಾ/ವಿ.ಕೀ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ತನುಷ್ ಕೋಟ್ಯಾನ್, ಕೇಶವ್ ಮಹಾರಾಜ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ಕುಲದೀಪ್ ಸೇನ್, ಯುಜ್ವೇಂದ್ರ ಚಹಾಲ್
ಇಂಪ್ಯಾಕ್ಟ್ ಪ್ಲೇಯರ್ಸ್: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಶುಭಂ ದುಬೆ, ನವದೀಪ್ ಸೈನಿ, ಅಬಿದ್ ಮುಷ್ತಾಕ್
ಪಂಜಾಬ್ ಕಿಂಗ್ಸ್: ಜಾನಿ ಬೈರ್‌ಸ್ಟೋವ್, ಅಥರ್ವ ಟೈಡೆ, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರ್ರನ್(ನಾ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ
ಇಂಪ್ಯಾಕ್ಟ್ ಪ್ಲೇಯರ್ಸ್: ರಾಹುಲ್ ಚಹಾರ್, ಅಶುತೋಷ್ ಶರ್ಮಾ, ವಿಧ್ವತ್ ಕಾವೇರಪ್ಪ, ಹರ್‌ಪ್ರೀತ್ ಸಿಂಗ್ ಭಾಟಿಯಾ, ನಾಥನ್ ಎಲ್ಲಿಸ್