ಬೆಂಗಳೂರು: ಪ್ರೋ ಕಬಡ್ಡಿ ಸೀಸನ್ 11ರ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ತಂಡಗಳು ರಿಟೈನ್ ಮಾಡಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಪ್ರತಿ ತಂಡಗಳು 'ಎಲೈಟ್ ರಿಟೈನ್ಡ್ ಪ್ಲೇಯರ್ಸ್', 'ರೀಟೈನ್ಡ್ ಯಂಗ್ ಪ್ಲೇಯರ್ಸ್' ಮತ್ತು 'ಎಕ್ಸಿಸ್ಟಿಂಗ್ ನ್ಯೂ ಯಂಗ್ ಪ್ಲೇಯರ್ಸ್' ಕೆಟಗರಿಯಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ದಬಾಂಗ್ ದೆಹಲಿ ಕೆ.ಸಿ ತಂಡ ಅಶು ಮಲಿಕ್ ಮತ್ತು ನವೀನ್ ಕುಮಾರ್ ಅವರ ರೈಡಿಂಗ್ ಜೋಡಿ ಉಳಿಸಿಕೊಂಡರೆ, ಸೀಸನ್ 10 ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ ಅಸ್ಲಂ ಇನಾಮದಾರ್ ಅವರನ್ನು ಪುಣೇರಿ ಪಲ್ಟನ್ ತಂಡ ಉಳಿಸಿಕೊಂಡಿದೆ. ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತನ್ಮ ಸ್ಟಾರ್ ರೈಡರ್ ಅರ್ಜುನ್ ದೇಸ್ವಾಲ್ ಅವರನ್ನು ಉಳಿಸಿಕೊಂಡಿದೆ.
ಎಲೈಟ್ ರೀಟೈನ್ಡ್ ಪ್ಲೇಯರ್ಸ್ (ERP) ವಿಭಾಗದಿಂದ 22, ರೀಟೈನ್ಡ್ ಯಂಗ್ ಪ್ಲೇಯರ್ಸ್ (RYP) ವಿಭಾಗದಲ್ಲಿ 26 ಮತ್ತು ಎಕ್ಸಿಸ್ಟಿಂಗ್ ನ್ಯೂ ಯಂಗ್ ಪ್ಲೇಯರ್ಸ್ (ENYP) ಬಲವಿಭಾಗದಲ್ಲಿ 40 ಆಟಗಾರರು ಸೇರಿದಂತೆ ಒಟ್ಟು 88 ಆಟಗಾರರನ್ನ ತಮ್ಮ ತಮ್ಮ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಪವನ್ ಸೆಹ್ರಾವತ್, ಪರ್ದೀಪ್ ನರ್ವಾಲ್, ಮಣಿಂದರ್ ಸಿಂಗ್, ಫಾಜೆಲ್ ಅತ್ರಾಚಲಿ ಮತ್ತು ಮೊಹಮ್ಮದ್ರೇಜಾ ಶಾದ್ಲೌಯಿ ಚಿಯಾನೆಹ್ ಅವರಂತಹ ಸ್ಟಾರ್ ಆಟಗಾರರನ್ನ ಉಳಿಸಿಕೊಳ್ಳಲು ತಂಡಗಳು ಆಸಕ್ತಿ ತೋರಿಲ್ಲ. ಆದ್ದರಿಂದ ಆಗಸ್ಟ್ 15 - 16 ರಂದು ಮುಂಬೈನಲ್ಲಿ ನಡೆಯಲಿರುವ PKL ಸೀಸನ್ - 11 ಆಟಗಾರರ ಹರಾಜಿಗೊಳಪಡಲಿದ್ದಾರೆ.
PKL ಸೀಸನ್ - 11 ಆಟಗಾರರ ಹರಾಜಿನಲ್ಲಿ ದೇಶೀ ಮತ್ತು ವಿದೇಶಿ ಆಟಗಾರರನ್ನು A, B, C ಹಾಗೂ D ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆಲ್ - ರೌಂಡರ್‌ಗಳು', 'ಡಿಫೆಂಡರ್‌ಗಳು' ಮತ್ತು 'ರೈಡರ್‌ಗಳು' ಎಂದು ಮತ್ತಷ್ಟು ಉಪ - ವಿಂಗಡಿಸಲಾಗಿದೆ.
A - INR 30 ಲಕ್ಷ ಮೂಲಬೆಲೆ, B - INR 20 ಲಕ್ಷ ಮೂಲಬೆಲೆ, C - INR 13 ಲಕ್ಷ ಮೂಲಬೆಲೆ ಹಾಗೂ D - INR 9 ಲಕ್ಷ ಮೂಲಬೆಲೆ ಇರಲಿದೆ. ಇದಲ್ಲದೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2024ರ ಎರಡು ಫೈನಲಿಸ್ಟ್ ತಂಡಗಳ 24 ಆಟಗಾರರನ್ನು ಒಳಗೊಂಡಂತೆ 500+ ಆಟಗಾರರೂ ಸಹ ಹರಾಜಿನಲ್ಲಿರಲಿದ್ದು, ಖರೀದಿಗಾಗಿ ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ಒಟ್ಟು ಹಣ INR 5 ಕೋಟಿ.
ಓದಿ: ಒಲಿಂಪಿಕ್ಸ್‌ನ 11ನೇ ದಿನದ ಭಾರತದ ವೇಳಾಪಟ್ಟಿ:ನೀರಜ್ ಚೋಪ್ರಾ ಮೇಲೆಯೇ ಎಲ್ಲರ ಚಿತ್ತ - Paris Olympics 2024