ಪ್ಯಾರಿಸ್ (ಫ್ರಾನ್ಸ್): ಅರ್ಹತಾ ಮಾನದಂಡಕ್ಕಿಂತಲೂ ಹೆಚ್ಚಿನ ತೂಕ ಹೊಂದಿದ ಕಾರಣ ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್ ಪಂದ್ಯದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
Vinesh, you are a champion among champions! You are India's pride and an inspiration for each and every Indian.
— Narendra Modi (@narendramodi) August 7, 2024
Today's setback hurts. I wish words could express the sense of despair that I am experiencing.
At the same time, I know that you epitomise resilience. It has always…
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ಆಗಿದ್ದೀರಿ. ಇಂದಿನ ಹಿನ್ನಡೆ ನೋವು ತಂದಿದೆ. ಇದರಿಂದ ನಾನು ಅನುಭವಿಸುತ್ತಿರುವ ನೋವು ಮತ್ತು ಹತಾಶೆಯನ್ನು ಪದಗಳಲ್ಲಿ ಹೇಳುವುದು ಕಷ್ಟವಾಗಿದೆ. ನಿಮ್ಮಲ್ಲಿರುವ ಸ್ಥಿತಿಸ್ಥಾಪಕತ್ವ ಶಕ್ತಿ ಪರಿಸ್ಥಿತಿಯನ್ನು ಎದುರಿಸಲು ಧೈರ್ಯವಿದೆ. ಅಲ್ಲದೇ ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮಗಾಗಿ ಕಾಯುತ್ತಿದ್ದೇವೆ ಎಂದು ಎಕ್ಸ್ ಮೂಲಕ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಪ್ರಧಾನಿ ಮೋದಿ ಅವರು, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರೊಂದಿಗೆ ಮಾತನಾಡಿದ್ದಾರೆ ಎಂದೂ ವರದಿಯಾಗಿದೆ.
My heart goes out to @Phogat_Vinesh after the unfortunate incident from the Paris Olympics. Your strength, resilience, and dedication have always inspired the nation.
— Siddaramaiah (@siddaramaiah) August 7, 2024
Remember, this moment does not diminish your countless achievements and the pride you have brought to India.… pic.twitter.com/TwGobN1ygK
ಸಿಎಂ ಸಿದ್ದರಾಮಯ್ಯ ಟ್ವೀಟ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ವಿನೇಶ್ ಫೋಗಟ್ ನಿಮ್ಮ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸಮರ್ಪಣೆ ಯಾವಾಗಲೂ ರಾಷ್ಟ್ರವನ್ನು ಪ್ರೇರೇಪಿಸುತ್ತದೆ. ನಿಮ್ಮ ಲೆಕ್ಕವಿಲ್ಲದಷ್ಟು ಸಾಧನೆಗಳು ಮತ್ತು ಭಾರತಕ್ಕೆ ನೀವು ತಂದ ಗೌರವ ಎಂದಿಗೂ ಕಡಿಮೆ ಆಗಲ್ಲ. ಧೈರ್ಯವಾಗಿರಿ ನಾವು ನಿಮ್ಮನ್ನು ಮತ್ತು ನಿಮ್ಮ ಈ ಸುದೀರ್ಘವಾದ ಪ್ರಯಾಣವನ್ನು ಮರೆಯಲ್ಲ. ನೀವೂ ಎಂದೆಂದಿಗೂ ಚಾಂಪಿಯನ್ ಆಗಿರಲಿದ್ದೀರಿ ಎಂದು ತಿಳಿಸಿದ್ದಾರೆ.