ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ 10ನೇ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು. ಸೋಮವಾರ ಭಾರತಕ್ಕೆ 2 ಪದಕಗಳನ್ನು ಗೆಲ್ಲುವ ಅವಕಾಶವಿತ್ತು. ಆದರೆ, ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಅನಂತಜಿತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಸ್ಕೀಟ್ ಮಿಶ್ರ ತಂಡ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಅನುಭವಿಸಿದರು. ಇಂದು ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಡುವ ಮೂಲಕ ಚಿನ್ನಕ್ಕೆ ಗುರಿ ಇಡಲು ಹೊರಟಿರುವ ಭಾರತ ಹಾಕಿ ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಒಲಿಂಪಿಕ್ಸ್‌ನ 11ನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ಇಂತಿದೆ.
Day 1⃣0⃣ schedule of #ParisOlympics2024 is OUT✔️
— SAI Media (@Media_SAI) August 5, 2024
The OGs of Indian Sports, Neeraj Chopra👑, Vinesh Phogat🤼♀ and the Indian #Hockey🏑team are all set to be in action tomorrow at #Paris2024.
Check out the full schedule to find out other notable matches slated for Day 1⃣0⃣.… pic.twitter.com/13mlbVRJcM
ಆಗಸ್ಟ್ 6ರಂದು ನಡೆಯಲಿರುವ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆ:
ಟೇಬಲ್ ಟೆನಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ 11ನೇ ದಿನದಂದು, ಭಾರತೀಯ ಪುರುಷರ ಆಟಗಾರರು ಟೇಬಲ್ ಟೆನ್ನಿಸ್ ತಂಡ ಸ್ಪರ್ಧೆಯಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತಾರೆ. ಮಾನವ್ ಠಕ್ಕರ್, ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯಾ ಪುರುಷರ ತಂಡ ಈವೆಂಟ್‌ನ 16ನೇ ಸುತ್ತಿನಲ್ಲಿ ಚೀನಾ ತಂಡದೊಂದಿಗೆ ಸೆಣಸಾಟ ನಡೆಸಲಿದೆ.
- 16ರ ಘಟ್ಟ - ಪುರುಷರ ತಂಡ (ಮಾನವ್ ಠಕ್ಕರ್, ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ)- 1:30 PM
🗓 𝗗𝗔𝗬 𝟭𝟭 𝗮𝗻𝗱 𝗮 𝗹𝗼𝘁 𝗼𝗳 𝗶𝗺𝗽𝗼𝗿𝘁𝗮𝗻𝘁 𝗲𝘃𝗲𝗻𝘁𝘀 𝗶𝗻 𝘀𝘁𝗼𝗿𝗲! As we move on to day 11 of #Paris2024, here are some key events lined up for tomorrow 👇
— India at Paris 2024 Olympics (@sportwalkmedia) August 5, 2024
💪 India's golden boy, Neeraj Chopra begins his campaign in the men's javelin throw event alongside… pic.twitter.com/3Iloi5lrYA
ಅಥ್ಲೆಟಿಕ್ಸ್: ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಪಂದ್ಯದಲ್ಲಿ ಆಡುತ್ತಿದ್ದಾರೆ. ಇವರಲ್ಲದೇ ಭಾರತದ ಕಿಶೋರ್ ಕುಮಾರ್ ಜೈನಾ ಇದೇ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರಜ್ ಬಿ ಗುಂಪಿನಲ್ಲಿ ಸ್ಥಾನ ಪಡೆದರೆ ಜೈನಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
- ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು ಎ - (ಕಿಶೋರ್ ಕುಮಾರ್ ಜೈನಾ) - ಮಧ್ಯಾಹ್ನ 1:50
- ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು ಬಿ - (ನೀರಜ್ ಚೋಪ್ರಾ) - ಮಧ್ಯಾಹ್ನ 3:20
It's semi-final time!
— Hockey India (@TheHockeyIndia) August 5, 2024
India face Germany in a high-stakes clash.
See the lineup and get ready for an intense match filled with drama and action as our boys strive for victory! 💪🏻
🇮🇳 🆚 🇩🇪
🗓️ 6 August
⏰ 10:30 PM@CMO_Odisha @IndiaSports @Media_SAI@sports_odisha… pic.twitter.com/QBkfsgjTrG
ಅಥ್ಲೆಟಿಕ್ಸ್: ಮಹಿಳೆಯರ 400 ಮೀಟರ್ ಸ್ಟೀಪಲ್ ಚೇಸ್ ಸುತ್ತಿನಲ್ಲಿ ಭಾರತದ ಕಿರಣ್ ಪಹಲ್ ಕಣಕ್ಕಿಳಿಯಲಿದ್ದಾರೆ. ಅವರು ಭಾರತಕ್ಕೆ ಪದಕ ತರುವ ನಿರೀಕ್ಷೆಯಲ್ಲಿದ್ದಾರೆ.
- ಮಹಿಳೆಯರ 400ಮೀ ಸ್ಟೀಪಲ್‌ಚೇಸ್ ಸುತ್ತು- ಮಧ್ಯಾಹ್ನ 2:20
ಕುಸ್ತಿ: ಭಾರತದ ಸ್ಟಾರ್ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಅರ್ಹತೆಯಿಂದ ಸೆಮಿಫೈನಲ್‌ವರೆಗಿನ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.
- ಮಹಿಳೆಯರ 50 ಕೆಜಿ (ವಿನೇಶ್ ಫೋಗಟ್)- ಮಧ್ಯಾಹ್ನ 2:30
ಹಾಕಿ: ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸುವ ಮೂಲಕ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈಗ ಫೈನಲ್ ತಲುಪಿ ಚಿನ್ನದ ಪದಕ ಗೆಲ್ಲುವುದು ತಂಡದ ಗುರಿಯಾಗಿದೆ.
- ಪುರುಷರ ಹಾಕಿ ಸೆಮಿಫೈನಲ್ (ಭಾರತ ವಿರುದ್ಧ ಜರ್ಮನಿ) - 10:30 PM
ಇದನ್ನೂ ಓದಿ: ಒಂದೇ ಅಂಕದಿಂದ ಕಂಚು ಮಿಸ್! ಶೂಟಿಂಗ್ ಸ್ಕೀಟ್‌ನಲ್ಲೂ ಭಾರತ ಪರಾಜಯ - Olympics Skeet Shooting