ಡಂಬುಲ್ಲಾ(ಶ್ರೀಲಂಕಾ): ಭಾರತೀಯ ಮಹಿಳಾ ಕ್ರಿಕೆಟ್ ತಂಡ ನೇಪಾಳ ವಿರುದ್ಧ 82 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಏಷ್ಯಾ ಕಪ್ 2024ರ ಗುಂಪು ಹಂತದಲ್ಲಿ ಲೀಗ್ ಹಂತದ ಎಲ್ಲಾ ಮೂರು ಪಂದ್ಯಗಳನ್ನೂ ಜಯಿಸಿ ಅಧಿಕಾರಯುತವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
𝙄𝙣𝙩𝙤 𝙩𝙝𝙚 𝙎𝙚𝙢𝙞𝙨!#TeamIndia continue their winning run in #WomensAsiaCup2024 👏👏
— BCCI Women (@BCCIWomen) July 23, 2024
Scorecard ▶️ https://t.co/PeRykFLdTV#ACC | #INDvNEP pic.twitter.com/8Eg77qAJOt
ಮಂಗಳವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 178 ರನ್‌ಗಳ ಬೃಹತ್ ಟಾರ್ಗೆಟ್ ನೀಡಿತು. ಶೆಫಾಲಿ 48 ಎಸೆತಗಳಲ್ಲಿ 81 ರನ್ ಸಿಡಿಸಿದರು. ಇದಕ್ಕುತ್ತರವಾಗಿ ನೇಪಾಳ ನಿರಂತರವಾಗಿ ವಿಕೆಟ್ ಕಳೆದುಕೊಂಡು ಸಾಗುತ್ತಾ ನಿಗದಿತ 20 ಓವರ್‌ಗಳಲ್ಲಿ 96 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ತಂಡ ಟೂರ್ನಿಯಿಂದ ಹೊರಬಿತ್ತು.
For her opening brilliance of 81 off just 48 deliveries, @TheShafaliVerma becomes the Player of the Match 👏👏
— BCCI Women (@BCCIWomen) July 23, 2024
Scorecard ▶️ https://t.co/PeRykFLdTV#Teamindia | #WomensAsiaCup2024 | #ACC | #INDvNEP pic.twitter.com/vrXz9Mhoar
ಏಷ್ಯಾಕಪ್ ಎ ಗುಂಪಿನಲ್ಲಿ ಭಾರತ ತಾನಾಡಿದ ಎಲ್ಲಾ ಮೂರು ಪಂದ್ಯಗಳನ್ನೂ ದೊಡ್ಡ ಅಂತರದಿಂದ ಗೆದ್ದಿರುವುದು ಗಮನಾರ್ಹ. ಇನ್ನು, ಪಾಕಿಸ್ತಾನ ಎ ಗುಂಪಿನಲ್ಲಿ ಅಗ್ರ 4ರೊಳಗಿದೆ. ಸೆಮಿಫೈನಲ್ ಪಂದ್ಯಗಳು ನಿಗದಿಯಾಗಿಲ್ಲ. ಏಕೆಂದರೆ, ಬಿ ಗುಂಪಿನ 2 ಪಂದ್ಯಗಳು ಇನ್ನೂ ಬಾಕಿ ಉಳಿದಿವೆ. ಭಾರತ ಸೆಮಿಫೈನಲ್‌ನಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕಾಗಿ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ನಡುವೆ ಹೋರಾಟ ನಡೆಯಲಿದೆ.
3⃣ wins in a row!#TeamIndia complete a 82-runs victory over Nepal 👏👏
— BCCI Women (@BCCIWomen) July 23, 2024
Scorecard ▶️ https://t.co/PeRykFLdTV#WomensAsiaCup2024 | #ACC | #INDvNEP pic.twitter.com/rORFk7zaHQ
ಇದನ್ನೂ ಓದಿ: WT20ಐ ಶ್ರೇಯಾಂಕ ಪಟ್ಟಿ ಪ್ರಕಟ: ಸ್ಮೃತಿ ಮಂಧಾನಗೆ 5ನೇ, ಹರ್ಮನ್‌ಪ್ರೀತ್ - ಶಫಾಲಿಗೆ 11ನೇ ಸ್ಥಾನ - WT20I Rankings