Star Cricketer Ban For 1st Match Of IPL: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಭಾಗವಾಗಿ ಇತ್ತೀಚೆಗೆ ನಡೆದಿದ್ದ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಉತ್ತಮ ಆಟಗರಾರನ್ನು ಖರೀದಿಸಿ ಬಲಿಷ್ಠ ತಂಡಗಳನ್ನು ಕಟ್ಟಿಕೊಂಡಿವೆ. ಇದೀಗ ಐಪಿಎಲ್ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದರ ನಡುವೆಯೇ ಸ್ಟಾರ್ ಆಟಗಾರನಿಗೆ ಮೊದಲ ಪಂದ್ಯದಿಂದ ನಿಷೇಧಿಸಲಾಗಿದೆ.
ಈ ಸ್ಟಾರ್ ಆಟಗಾರ ತಮ್ಮ ಚೊಚ್ಚಲ ನಾಯಕತ್ವದಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಯಶಸ್ವಿ ನಾಯಕರ ಪಟ್ಟಿಗೆ ಸೇರಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಮರಳಿ ತಂಡಕ್ಕೆ ಕರೆದುಕೊಂಡು ಬಂದು ನಾಯಕತ್ವ ಪಟ್ಟವನ್ನು ನೀಡಿತ್ತು. ಹೌದು, ಇದೀಗ ಹೇಳುತ್ತಿರುವುದು ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ.
ಕಳೆದ ವರ್ಷ ಹಾರ್ದಿಕ್ ಅವರನ್ನು ಗುಜರಾತ್ ಟೈಟಾನ್ಸ್ನಿಂದ ತಂಡಕ್ಕೆ ವಾಪ್ಸಿ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್ ಪಾಂಡ್ಯಗೆ ನಾಯಕತ್ವ ನೀಡಿತ್ತು. ಆದರೆ ಇವರ ನಾಯಕತ್ವದಲ್ಲಿ ತಂಡ ಹೀನಾಯ ಪ್ರದರ್ಶನ ತೋರಿ ಕನಿಷ್ಠ ಪ್ಲೇ ಆಫ್ಗೂ ಬಾರದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿತ್ತು.
ಆದರೂ ಹಾರ್ದಿಕ್ ಅವರನ್ನು ತಂಡದಿಂದ ಕೈಬಿಡದ ಮುಂಬೈ ಈಬಾರಿ ₹16 ಕೋಟಿ ಕೊಟ್ಟು ತಂಡದಲ್ಲೇ ಉಳಿಸಿಕೊಂಡಿದೆ. ಆದರೆ ಐಪಿಎಲ್ ಆರಂಭಕ್ಕೂ ಮುನ್ನವೇ ಮುಂಬೈಗೆ ತಲೆ ಬಿಸಿ ಶುರವಾಗಿದೆ. ಇದಕ್ಕೆ ಕಾರಣ ಮೊದಲ ಪಂದ್ಯಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಿಷೇಧಿಸಲಾಗಿದೆ.
ನಿಷೇಧಕ್ಕೇನು ಕಾರಣ? ಕಳೆದ ವರ್ಷ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ಯುವಲ್ಲಿ ವಿಫಲರಾಗಿದ್ದರು. ಆದರೆ ಲಕ್ನೋ ವಿರುದ್ಧ ನಡೆದಿದ್ದ ಮುಂಬೈ ಇಂಡಿಯನ್ಸ್ನ ಕೊನೆಯ ಪಂದ್ಯದಲ್ಲಿ ತಂಡ ಮಾಡಿದ ಕೆಲ ತಪ್ಪುಗಳಿಂದಾಗಿ ಹಾರ್ದಿಕ್ ಪಾಂಡ್ಯ ಮತ್ತು ಇಡೀ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಪೂರ್ಣಗೊಳಿಸುಲ್ಲಿ ವಿಫಲವಾಗಿತ್ತು. ಇದರಿಂದಾಗಿ 30 ಲಕ್ಷ ರೂ. ದಂಡ ಸಹಿತ ನಾಯಕ ಹಾರ್ದಿಕ್ ಪಾಂಡ್ಯಗೆ ಮುಂದಿನ ಒಂದು ಪಂದ್ಯದಿಂದ ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ಗೆ ಇದೇ ಕೊನೆಯ ಪಂದ್ಯವಾಗಿದ್ದರಿಂದ ಐಪಿಎಲ್ 2025ರ ಮೊದಲ ಪಂದ್ಯದಿಂದ ಪಾಂಡ್ಯ ಹೊರಗುಳಿಯಲಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಕೂಡ ನಿಷೇಧಕ್ಕೊಳಗಾಗಿ ಆರ್‌ಸಿಬಿ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
ಇದನ್ನೂ ಓದಿ: ಶರವೇಗದ ಶತಕ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಐಪಿಎಲ್ Unsold ಬ್ಯಾಟರ್