ETV Bharat / sports

ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮದ್​ ಶಮಿ; ಐಪಿಎಲ್​, ಟಿ-20 ವಿಶ್ವಕಪ್​ನಿಂದ ಔಟ್​? - ವೇಗಿ ಮೊಹಮದ್​ ಶಮಿ

ಪಾದದ ಗಾಯದಿಂದ ಬಳಲುತ್ತಿದ್ದ ಭಾರತದ ವೇಗಿ ಮೊಹಮದ್​ ಶಮಿ ಕೊನೆಗೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಮೊಹಮದ್​ ಶಮಿ
ಮೊಹಮದ್​ ಶಮಿ
author img

By ETV Bharat Karnataka Team

Published : Feb 27, 2024, 2:04 PM IST

ನವದೆಹಲಿ: ಮುಂಬರುವ ಟಿ-20 ವಿಶ್ವಕಪ್​​ಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ ಉಂಟಾಗಿದೆ. ಹಿರಿಯ ಮಾರಕ ವೇಗಿ ಮೊಹಮ್ಮದ್ ಶಮಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೆಚ್ಚು ಕಡಿಮೆ 6 ತಿಂಗಳು ಅವರು ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆ. ಇದರಿಂದ ಐಪಿಎಲ್​, ಚುಟುಕು ವಿಶ್ವಕಪ್​ನಿಂದ ತಪ್ಪಿಸಿಕೊಳ್ಳಲಿದ್ದಾರೆ.

ಏಕದಿನ ವಿಶ್ವಕಪ್​ ಬಳಿಕ ಪಾದದ ನೋವಿಗೆ ತುತ್ತಾಗಿದ್ದ ಶಮಿ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ಸರಣಿಯಿಂದ ಹೊರಗುಳಿದಿದ್ದರು. ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗಾಯದಿಂದ ಯಾವುದೇ ಚೇತರಿಕೆ ಕಾಣದ ಕಾರಣ, ಅವರು ಕೊನೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಈ ಬಗ್ಗೆ ಶಮಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಗಾಯ ಗುಣಮುಖವಾಗದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಹಿಮ್ಮಡಿಯ ಅಕಿಲ್ಸ್​ ಸ್ನಾಯುರಜ್ಜು ಆಪರೇಷನ್​ ಯಶಸ್ವಿಯಾಗಿದೆ. ಇದರಿಂದ ಗುಣಮುಖವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಚೇತರಿಕೆ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳುವುದಾಗಿ ತಿಳಿಸಿದ್ದಾರೆ.

6 ತಿಂಗಳು ಕ್ರಿಕೆಟ್​ನಿಂದ ದೂರ: ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಶಮಿಗೆ 6 ತಿಂಗಳು ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಮಾರ್ಚ್ 22ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) 17ನೇ ಆವೃತ್ತಿಯಲ್ಲಿ ಶಮಿ ಆಡಲು ಸಾಧ್ಯವಾಗುವುದಿಲ್ಲ. ಇದರಿಂದ ಗುಜರಾತ್ ಟೈಟಾನ್ಸ್ ತಂಡ ಈ ಮಾರಕ ಬೌಲರ್ ಸೇವೆಯನ್ನು ಕಳೆದುಕೊಳ್ಳಲಿದೆ.

ಇನ್ನು, ಜುಲೈ 1 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿರುವ ಐಸಿಸಿ ಟಿ-20 ವಿಶ್ವಕಪ್‌ನಿಂದಲೂ ಶಮಿ ಹೊರಗುಳಿಯಲಿದ್ದಾರೆ. 2023 ರ ವಿಶ್ವಕಪ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ, ತಂಡವನ್ನು ಫೈನಲ್​​ಗೇರಿಸಿದ್ದ ಶಮಿ ಟಿ-20 ವಿಶ್ವಕಪ್‌ನಲ್ಲಿ ಆಡದಿರುವುದು ಟೀಮ್ ಇಂಡಿಯಾಕ್ಕೆ ದೊಡ್ಡ ಹೊಡೆತವಾಗಿದೆ.

ಶೀಘ್ರ ಚೇತರಿಸಿಕೊಳ್ಳಲು ಪ್ರಧಾನಿ ಮೋದಿ ಕೋರಿಕೆ: ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿ ಆರೋಗ್ಯ ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಹಾರೈಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಬರೆದು ಕೊಂಡಿರುವ ಅವರು, ಶಮಿ ನೀವು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯ ಹೊಂದಲು ಬಯಸುತ್ತೇವೆ. ನಿಮ್ಮ ಅವಿಭಾಜ್ಯವಾಗಿರುವ ಧೈರ್ಯದಿಂದಲೇ ಈ ಗಾಯವನ್ನು ಜಯಿಸುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಇದಕ್ಕೆ ವೇಗಿ ಶಮಿ ಧನ್ಯವಾದವನ್ನು ಕೂಡಾ ತಿಳಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್​ನಿಂದ ಸ್ಟಾರ್​ ಬೌಲರ್​ ಮೊಹಮ್ಮದ್ ಶಮಿ ಔಟ್​: ಗುಜರಾತ್​ ಟೈಟಾನ್ಸ್​ಗೆ ಆಘಾತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.