ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಆವೃತ್ತಿಯಲ್ಲಿ ಫೈನಲ್ ತಲುಪಿ ಪ್ರಶಸ್ತಿ ಗೆಲ್ಲುವಲ್ಲಿ ಸ್ವಲ್ಪದರಲ್ಲೇ ಎಡವಿದ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಮತ್ತೆ ಅಂತಿಮ ಹಂತಕ್ಕೆ ತಲುಪಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ನಾಳೆ ಭಾನುವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡಬ್ಲ್ಯೂಪಿಎಲ್ 2024ರ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ಎಂಟು ಪಂದ್ಯಗಳಲ್ಲಿ 6 ರಲ್ಲಿ ಗೆದ್ದು, ಎರಡರಲ್ಲಿ ಸೋತಿರುವ ಡೆಲ್ಲಿ 12 ಅಂಕಗಳೊಂದಿಗೆ ಫೈನಲ್‌ಗೆ ನೇರ ಅರ್ಹತೆ ಪಡೆದಿದೆ.
ಸತತ ಎರಡನೇ ಬಾರಿಗೆ WPL ಫೈನಲ್‍ನಲ್ಲಿ ಆಡುತ್ತಿರುವ ಕುರಿತು ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಲ್ಯಾನಿಂಗ್, "ನಾವು ಮತ್ತೊಮ್ಮೆ ಫೈನಲ್ ಪ್ರವೇಶಿಸಿರುವುದಕ್ಕೆ ಖುಷಿಯಿದೆ. ಕಳೆದ ವರ್ಷದ ಅನುಭವವು ಒಂದು ರೀತಿಯಲ್ಲಿ ನಮಗೆ ಸಹಾಯವಾಗಲಿದೆ'' ಎಂದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಕದನದ ಕುರಿತು ಮಾತನಾಡಿದ ಮೆಗ್, "ರೋಚಕ ಕದನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದೇವೆ. ಆಶಾದಾಯಕವಾಗಿ ನಮ್ಮ ಅತ್ಯುತ್ತಮ ಆಟವನ್ನು ಆಡುತ್ತೇವೆ. ಪಂದ್ಯಾವಳಿ ಉದ್ದಕ್ಕೂ ಕೆಲವು ಕ್ರೇಜಿ ಕ್ರಿಕೆಟ್, ಕೆಲವು ಕ್ರೇಜಿ ಫಿನಿಶ್‌ಗಳನ್ನ ನಾವು ನೋಡಿದ್ದೇವೆ. ನಾಳೆ ಸಹ ಏನನ್ನೂ ಕಡಿಮೆ ಮಾಡಬಾರದು ಎಂದು ನಾನು ನಿರೀಕ್ಷಿಸುತ್ತೇನೆ'' ಎಂದಿದ್ದಾರೆ.
''ಕೆಲವು ಅತ್ಯುತ್ತಮ ಕ್ರಿಕೆಟ್ ಆಡಿದ ಆರ್ಸಿಬಿ ವಿರುದ್ಧ ನಾವು ಬರುತ್ತಿದ್ದೇವೆ. ಒತ್ತಡದಲ್ಲಿದ್ದಾಗ ತಾವು ಅತ್ಯುತ್ತಮ ಪ್ರದರ್ಶನ ನೀಡಬಲ್ಲೆವು ಎಂಬುದನ್ನ ಬೆಂಗಳೂರು ತಂಡ ಸಾಬೀತುಪಡಿಸಿದೆ. ಇದು ನಮಗೆ ದೊಡ್ಡ ಸವಾಲಾಗಿದೆ, ನಾವು ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೇವೆ'' ಎಂದು ಲ್ಯಾನಿಂಗ್ ತಿಳಿಸಿದರು.
ನಾಳೆ ನಡೆಯಲಿರುವ WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರನ್ನು ಎದುರಿಸಲಿದೆ.
ಇದನ್ನೂ ಓದಿ: ಶ್ರೀಲಂಕಾ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಪಾಕಿಸ್ತಾನ ಮಾಜಿ ವೇಗಿ ಅಕೀಬ್ ಜಾವೇದ್ ನೇಮಕ