ETV Bharat / sports

ಐಸಿಸಿ ಟಿ-20 ವಿಶ್ವಕಪ್‌: ಯುಎಸ್ಎ ತಂಡದಲ್ಲಿ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಆಪ್ತನ ಪುತ್ರ - USA T20 World Cup Team - USA T20 WORLD CUP TEAM

ಟಿ-20 ವಿಶ್ವಕಪ್​ಗೆ ಯುಎಸ್​ಎ ಘೋಷಿಸಿರುವ ಕ್ರಿಕೆಟ್ ತಂಡದಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಗೆ ಸ್ಥಾನ ಪಡೆದಿದ್ದಾರೆ.

ನಾಸ್ತುಷ್ ಕೆಂಜಿಗೆ
ನಾಸ್ತುಷ್ ಕೆಂಜಿಗೆ (ETV Bharat)
author img

By ETV Bharat Karnataka Team

Published : May 12, 2024, 1:09 PM IST

ಬೆಂಗಳೂರು: ಐಸಿಸಿ ಟಿ-20 ವಿಶ್ವಕಪ್‌ ಸಮರಕ್ಕೆ ತಂಡಗಳು ಪ್ರಕಟವಾಗಿವೆ. ಜೂನ್‌ 2ರಿಂದ ಆರಂಭವಾಗಲಿರುವ ಚುಟುಕು ಮಹಾಸಮರದ ಆತಿಥ್ಯವನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ವಹಿಸುತ್ತಿವೆ. ಯುಎಸ್ಎ ಸಹ ಈ ಬಾರಿಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ತನ್ನ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕನ್ನಡಿಗ, ಎಡಗೈ ಸ್ಪಿನ್ನರ್ 33 ವರ್ಷದ ನಾಸ್ತುಷ್ ಕೆಂಜಿಗೆ ಸ್ಥಾನ ಪಡೆದಿರುವುದು ವಿಶೇಷ. ಇವರು ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಗೆಳೆಯ ಹಾಗೂ ಸಹ ಲೇಖಕರಾಗಿರುವ ಪ್ರದೀಪ್‌ ಕೆಂಜಿಗೆ ಅವರ ಪುತ್ರ ಎಂಬುದು ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

ನಾಸ್ತುಷ್ ಅವರ ತಂದೆ ಪ್ರದೀಪ್ ಅವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನವರು. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಒಡನಾಟ ಹೊಂದಿದ್ದ ಪ್ರದೀಪ್, ಅವರೊಂದಿಗೆ ಅನೇಕ ಕೃತಿಗಳ ಅನುವಾದದಲ್ಲೂ ಜೊತೆಯಾಗಿದ್ದವರು. ಕೃಷಿ ವಿಭಾಗದಲ್ಲಿ ಉನ್ನತ ವ್ಯಾಸಂಗಕ್ಕಾಗಿ 80ರ ದಶಕದಲ್ಲಿ ಅಮೆರಿಕದ ಅಲಬಾಮಾಗೆ ತೆರಳಿದ್ದ ಪ್ರದೀಪ್, ಕೃಷಿ ಸಂಶೋಧನೆ ವಿಭಾಗದಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ಬಳಿಕ ಕುಟುಂಬದೊಂದಿಗೆ ಭಾರತಕ್ಕೆ ಮರಳಿದ್ದ ಅವರು ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ನಾಸ್ತುಷ್ ಆರಂಭದಲ್ಲಿ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜು ಸೇರಿದಂತೆ ಕ್ಲಬ್‌ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಣಕ್ಕಿಳಿದ್ದರು.

ಕುಟುಂಬಸ್ಥರೊಂದಿಗೆ ನಾಸ್ತುಷ್ ಕೆಂಜಿಗೆ
ಕುಟುಂಬಸ್ಥರೊಂದಿಗೆ ನಾಸ್ತುಷ್ ಕೆಂಜಿಗೆ (ETV Bharat)

ಆದರೆ, 2015ರಲ್ಲಿ ಯುಎಸ್ಎಗೆ ಮರಳಿದ ನಾಸ್ತುಷ್ ವರ್ಜಿನಿಯಾದಲ್ಲಿ ಬಯೋಲಾಜಿಕಲ್ ಟೆಕ್ನಿಶಿಯನ್ ಆಗಿ ವೃತ್ತಿ ಆರಂಭಿಸಿದರು. ಬಳಿಕ ಸ್ಥಳೀಯ ಕ್ಲಬ್‌ಗಳ ಪರ ಕ್ರಿಕೆಟ್ ಆಡಲಾರಂಭಿಸಿದ್ದರು. ಹುಟ್ಟಿನಿಂದ ಅಮೆರಿಕದ ಪೌರತ್ವ ಹೊಂದಿರುವ ನಾಸ್ತುಷ್ 2019ರಲ್ಲಿ ಯುಎಇ ವಿರುದ್ಧದ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮೊದಲ ಬಾರಿಗೆ ಯುಎಸ್ಎ ತಂಡದ ಪರ ಪಾದಾರ್ಪಣೆ ಮಾಡಿದ್ದರು.

2023ರಲ್ಲಿ ಯುಎಸ್ಎ ಮೇಜರ್ ಲೀಗ್ ಫ್ರಾಂಚೈಸಿ ಕ್ರಿಕೆಟ್ ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ತಂಡದ ಪರ ಕಣಕ್ಕಿಳಿದಿರುವ ನಾಸ್ತುಷ್, 6 ಪಂದ್ಯಗಳಲ್ಲಿ 5.74ರ ಎಕಾನಮಿಯಲ್ಲಿ ಬೌಲಿಂಗ್ ಮಾಡುವ ಮೂಲಕ 6 ವಿಕೆಟ್ ಪಡೆದು ಮಿಂಚಿದ್ದಾರೆ. 2024ರ ಏಪ್ರಿಲ್‌ನಲ್ಲಿ ಕೆನಡಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ ಯುಎಸ್ಎ ಪರ ಟಿ-20 ಮಾದರಿಗೆ ಪಾದಾರ್ಪಣೆಗೈದಿದ್ದಾರೆ.

ಯುಎಸ್ಎ ಪರ 40 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ನಾಸ್ತುಷ್ 4.38ರ ಎಕಾನಮಿಯಲ್ಲಿ 38 ವಿಕೆಟ್ ಪಡೆದರೆ, 4 ಟಿ-20 ಪಂದ್ಯಗಳಿಂದ 6.91ರ ಎಕಾನಮಿಯಲ್ಲಿ 4 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ-20 ಮಾದರಿಗೆ ಪಾದಾರ್ಪಣೆಗೈದ ಒಂದು ತಿಂಗಳ ಬಳಿಕ ಇದೀಗ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ನಾಸ್ತುಷ್, ದಿಗ್ಗಜರ ಅಖಾಡದಲ್ಲಿ ಗಮನ ಸೆಳೆಯಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: 700 ಟೆಸ್ಟ್ ವಿಕೆಟ್‌ ಉರುಳಿಸಿದ ದಿಗ್ಗಜ! ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿದ ಜೇಮ್ಸ್‌ ಆ್ಯಂಡರ್ಸನ್‌ - James Anderson

ETV Bharat Logo

Copyright © 2024 Ushodaya Enterprises Pvt. Ltd., All Rights Reserved.