ETV Bharat / sports

100 ಮೀಟರ್​ನಲ್ಲಿ ಒಲಿಂಪಿಕ್ ಚಿನ್ನ ಗೆದ್ದ ಜೂಲಿಯನ್ ಆಲ್ಫ್ರೆಡ್​; ಅಗಲಿದ ತಂದೆಗೆ ಪದಕ ಅರ್ಪಣೆ - Julien Alfred wins 100 meter - JULIEN ALFRED WINS 100 METER

ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಪ್ಯಾರಿಸ್ ಒಲಿಂಪಿಕ್ಸ್‌ನ 100 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 10.72 ಸೆಕೆಂಡುಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸೇಂಟ್ ಲೂಸಿಯಾಗೆ ಮೊದಲ ಒಲಿಂಪಿಕ್ ಪದಕವನ್ನು ತಂದುಕೊಟ್ಟಿದ್ದಾರೆ. ದಿವಂಗತ ತಂದೆಗೆ ಈ ಪದಕವನ್ನು ಅರ್ಪಿಸಿದ್ದಾರೆ.

Julien Alfred  Alfred dedicated the win to father  Julien Alfred wins 100 meter
100 ಮೀಟರ್​ನಲ್ಲಿ ಒಲಿಂಪಿಕ್ ಪದಕ ಗೆದ್ದು ದಿವಂಗತ ತಂದೆಗೆ ಅರ್ಪಿಸಿದ ಜೂಲಿಯನ್ ಆಲ್ಫ್ರೆಡ್ (ETV Bharat)
author img

By ETV Bharat Sports Team

Published : Aug 4, 2024, 3:18 PM IST

ಸೇಂಟ್ ಡೆನಿಸ್ (ಫ್ರಾನ್ಸ್): ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಶನಿವಾರ ನಡೆದ ಪ್ಯಾರಿಸ್ ಒಲಿಂಪಿಕ್​ನಲ್ಲಿ ವಿಶ್ವದ ಅತ್ಯಂತ ವೇಗದ ಓಟಗಾರ್ತಿ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ. ಸೇಂಟ್ ಲೂಸಿಯಾದ ಓಟಗಾರ್ತಿ ಜೂಲಿಯನ್ ಆಲ್ಫ್ರೆಡ್ ಅವರು 100 ಮೀಟರ್​ ಓಟದಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. 10.72 ಸೆಕೆಂಡುಗಳಲ್ಲಿ ಈ ಸಾಧನೆ ಮಾಡುವ ಮೂಲಕ ಸೇಂಟ್ ಲೂಸಿಯಾಗೆ ಮೊದಲ ಒಲಿಂಪಿಕ್ ಪದಕವನ್ನು ತಂದುಕೊಟ್ಟ ಕೀರ್ತಿಗೆ ಪಾತ್ರವಾಗಿದ್ದಾರೆ. ಈ ಪದಕವನ್ನು ಅವರ ದಿವಂಗತ ತಂದೆಗೆ ಅರ್ಪಿಸಿದ್ದಾರೆ.

ಆಲ್ಫ್ರೆಡ್ ತುಂಬಾ ವೇಗವಾಗಿ ಓಡುತ್ತಿದ್ದಳು ಎಂದು ಅವಳಲ್ಲಿರುವ ಪ್ರತಿಭೆಯನ್ನು ಬಾಲ್ಯದಲ್ಲೇ ಶಾಲೆಯ ಶಿಕ್ಷಕರು ಗುರುತಿಸಿದ್ದರು. ಆದರೆ, ಅವಳು ಸುಮಾರು 12 ವರ್ಷದವಳಿದ್ದಾಗ ಆಕೆ ತನ್ನ ತಂದೆಯನ್ನು ಕಳೆದುಕೊಂಡ ನಂತರ ಕ್ರೀಡೆಯನ್ನು ತ್ಯಜಿಸಿದ್ದಳು. ಅವಳ ತರಬೇತುದಾರನು ಆಕೆಯನ್ನು ಹಿಂತಿರುಗುವಂತೆ ಮನವೊಲಿಸಿದನು. ಸೇಂಟ್ ಲೂಸಿಯಾದಲ್ಲಿ ಆರಂಭಿಕ ಹಂತದಲ್ಲಿ ಬೆಳೆಯುತ್ತಿರುವಾಗ ಜೂಲಿಯನ್ ಆಲ್ಫ್ರೆಡ್ ಸ್ಪರ್ಧೆಗಳಲ್ಲಿ ಬರಿಗಾಲಿನಲ್ಲಿ ಓಡುತ್ತಿದ್ದಳು. ಇದೀಗ ಪ್ಯಾರಿಸ್ ಒಲಿಂಪಿಕ್​ನಲ್ಲಿ ಜೂಲಿಯನ್ ಆಲ್ಫ್ರೆಡ್ ಅವರು ಮಹಿಳೆಯರ 100 ಮೀ ಸ್ಪರ್ಧೆಯಲ್ಲಿ ನೆಚ್ಚಿನ ಓಟಗಾರ ಶಾ ಕ್ಯಾರಿ ರಿಚರ್ಡ್ಸನ್ ಅವರನ್ನು 10.72 ಸೆಕೆಂಡುಗಳಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದರು.

ಸ್ಪರ್ಧೆಯ ಬಳಿಕ ಭಾವುಕರಾದ ಜೂಲಿಯನ್ ಆಲ್ಫ್ರೆಡ್ ಚಿನ್ನದ ಪದಕವನ್ನು ಅಗಲಿದೆ ತಮ್ಮ ತಂದೆಗೆ ಅರ್ಪಿಸಿದರು. ''ದೇವರೇ ನನ್ನ ತರಬೇತುದಾರ. ಮತ್ತು ನನ್ನ ತಂದೆ 2013ರಲ್ಲಿ ನಿಧನರಾದರು. ನನ್ನ ವೃತ್ತಿಜೀವನಕ್ಕೆ ಅವರೇ ಸ್ಫೂರ್ತಿ. ಆದರೆ, ಈಗ ಇದ್ದಿದ್ದರೆ, ತಮ್ಮ ಮಗಳು ಒಲಿಂಪಿಯನ್ ಆಗಿರುವ ಬಗ್ಗೆ ಯಾವಾಗಲೂ ಹೆಮ್ಮೆಪಡುತ್ತಿದ್ದರು ಎಂದು ಜೂಲಿಯನ್ ಆಲ್ಫ್ರೆಡ್ ಸಂತಸ ವ್ಯಕ್ತಪಡಿಸಿದರು.

ಯುಎಸ್‌ಎಯ ರಿಚರ್ಡ್‌ಸನ್ 10.87 ಸೆಕೆಂಡ್‌ಗಳಲ್ಲಿ ಬೆಳ್ಳಿ ಪದಕ ಗೆದ್ದರೆ, ಅವರ ದೇಶವಾಸಿ ಮೆಲಿಸ್ಸಾ ಜೆಫರ್ಸನ್ 10.92 ಸೆಕೆಂಡುಗಳಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಅಟ್ಲಾಂಟ 1996ರ ನಂತರ ಈ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಅಮೆರಿಕದ ಓಟಗಾರರು ಎರಡು ಪದಕಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವರೇ ಲಕ್ಷ್ಯ ಸೇನ್​?​: ತವರಿನಲ್ಲಿ ಭಾರೀ ನಿರೀಕ್ಷೆ - Lakshya Sen

ETV Bharat Logo

Copyright © 2025 Ushodaya Enterprises Pvt. Ltd., All Rights Reserved.