ಬ್ರಿಸ್ಬೇನ್(ಆಸ್ಟ್ರೇಲಿಯಾ): ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಜಯ್ ಶಾ ಅವರು ಬ್ರಿಸ್ಬೇನ್ 2032ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಆಯೋಜಕ ಸಮಿತಿ (ಒಸಿಒಜಿ) ಸಿಇಒ ಸಿಂಡಿ ಹುಕ್ ಅವರೊಂದಿಗೆ ಗುರುವಾರ ಸಭೆ ನಡೆಸಿದರು.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶಾ, "ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡುವ ಬಹಳ ರೋಮಾಂಚನಕಾರಿ ಸಮಯ ಬಂದಿದೆ. ಈ ಕುರಿತು ಇಂದು ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ಸಂಘಟನಾ ಸಮಿತಿಯೊಂದಿಗೆ ಚರ್ಚೆ ನಡೆಯಿತು" ಎಂದು ಬರೆದಿದ್ದಾರೆ.
Very exciting time ahead for Cricket’s involvement in the Olympics movement - a meeting with the @Brisbane_2032 organizing committee in Brisbane, Australia today.@ICC | @Olympics | @CricketAus | @BCCI | #brisbane2032 pic.twitter.com/JVyMbkCYrz
— Jay Shah (@JayShah) December 12, 2024
ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಿದ ನಂತರ ಒಲಿಂಪಿಕ್ ಕ್ಯಾಲೆಂಡರ್ನಲ್ಲಿ ಕ್ರಿಕೆಟ್ ಅನ್ನು ಮುಂದುವರಿಸಿಕೊಂಡು ಹೋಗುವ ಐಸಿಸಿಯ ಗುರಿಯ ಭಾಗವಾಗಿ ಈ ಸಭೆ ನಡೆದಿದೆ. ಈ ಮುನ್ನ 1990ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಪಂದ್ಯಗಳು ನಡೆದಿದ್ದವು. ಈಗ ಮತ್ತೊಮ್ಮೆ 2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ನ ವೈಭವ ಮರುಕಳಿಸಲಿದೆ.
ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶಾ, ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ಕ್ರಿಕೆಟ್ ಅನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಒತ್ತಿ ಹೇಳಿದ್ದರು.
"ನಾವು ಕ್ರಿಕೆಟ್ನ ಪರಿವರ್ತಕ ಹಂತವನ್ನು ಪ್ರವೇಶಿಸುತ್ತಿದ್ದಂತೆ, ಆಟದ ಜಾಗತಿಕ ಹೆಜ್ಜೆಗುರುತನ್ನು ಬೆಳೆಸಲು ಮತ್ತು ಅದರ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯಲು ಐಸಿಸಿ ತಂಡ ಮತ್ತು ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ" ಎಂದು ಶಾ ಹೇಳಿದರು.
"ತಳಮಟ್ಟದ ಪಂದ್ಯಗಳಿಂದ ಹಿಡಿದು ದೊಡ್ಡ ಮಟ್ಟದ ಈವೆಂಟ್ಗಳವರೆಗೆ, ಕ್ರಿಕೆಟ್ ಹೆಚ್ಚಿನ ಜನರಿಗೆ ತಲುಪುವಂತೆ ಮಾಡುವುದು ನನ್ನ ದೃಷ್ಟಿಕೋನವಾಗಿದೆ. ಅದರ ವಿಕಾಸವು ವಿಶ್ವದಾದ್ಯಂತದ ಅಭಿಮಾನಿಗಳ ಆಕಾಂಕ್ಷೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಉದ್ದೇಶ" ಎಂದು ಅವರು ಹೇಳಿದರು.
2032ರ ಒಲಿಂಪಿಕ್ಸ್ ಕ್ರೀಡೆಗಳು ಆತಿಥ್ಯ ನಗರ ಬ್ರಿಸ್ಬೇನ್, ಕ್ವೀನ್ಸ್ ಲ್ಯಾಂಡ್ ಸುತ್ತಮುತ್ತಲಿನ ಹಲವಾರು ಸಹ-ಆತಿಥ್ಯ ನಗರಗಳು, ಮೆಲ್ಬೋರ್ನ್ ಮತ್ತು ಸಿಡ್ನಿಯ ಆಯ್ದ ಸ್ಥಳಗಳಲ್ಲಿ ನಡೆಯಲಿವೆ. ಬ್ರಿಸ್ಬೇನ್ 2032ರ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟವು ಪ್ರಸ್ತುತ 37 ಪ್ರಸ್ತಾವಿತ ಸ್ಥಳಗಳನ್ನು ಒಳಗೊಂಡಿದ್ದು, 28 ಒಲಿಂಪಿಕ್ ಮತ್ತು 22 ಪ್ಯಾರಾಲಿಂಪಿಕ್ ಕ್ರೀಡೆಗಳಿಗೆ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ : ಸ್ಟಾರ್ ಆಟಗಾರನನ್ನು ಹೋಟೆಲ್ನಲ್ಲೇ ಬಿಟ್ಟು ಹೋದ ಟೀಂ ಇಂಡಿಯಾ ಬಸ್!