ETV Bharat / international

ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ: ವಿಶ್ವಸಂಸ್ಥೆಯಲ್ಲಿ ನಿರ್ಣಯದ ಪರ ಭಾರತ ಮತ - UNGA RESOLUTION

ಗಾಜಾದಲ್ಲಿ ಕದನವಿರಾಮದ ಪರವಾಗಿ ಭಾರತ ಮತ ಚಲಾಯಿಸಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ: ವಿಶ್ವಸಂಸ್ಥೆಯಲ್ಲಿ ನಿರ್ಣಯದ ಪರ ಭಾರತ ಮತ
ವಿಶ್ವಸಂಸ್ಥೆ (IANS)
author img

By ETV Bharat Karnataka Team

Published : Dec 12, 2024, 7:27 PM IST

ವಿಶ್ವಸಂಸ್ಥೆ: ಯುದ್ಧಪೀಡಿತ ಗಾಜಾ ಪಟ್ಟಿಯಲ್ಲಿ ತಕ್ಷಣ, ಬೇಷರತ್ತಾದ ಮತ್ತು ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿ ವಿಶ್ವಸಂಸ್ಥೆಯ ಮಹಾಧಿವೇಶನದ ನಿರ್ಣಯವನ್ನು ಬೆಂಬಲಿಸಿ ಭಾರತ ಮತ ಹಾಕಿದೆ. ಈ ಮೂಲಕ ಭಾರತವು ಈ ಪ್ರಸ್ತಾಪದ ಪರವಾಗಿ ಮತ ಹಾಕಿದ ಇತರ 157 ರಾಷ್ಟ್ರಗಳೊಂದಿಗೆ ಸೇರಿಕೊಂಡಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ಹಾಗೂ ಇಸ್ರೇಲ್ ನಿಷೇಧಿಸಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಯನ್ನು (ಯುಎನ್ಆರ್ ಡಬ್ಲ್ಯೂಎ) ಬೆಂಬಲಿಸುವ ಈ ಎರಡು ನಿರ್ಣಯಗಳನ್ನು ಯುಎನ್​ಜಿಎ ಬುಧವಾರ ಬಹುಮತದಿಂದ ಅಂಗೀಕರಿಸಿತು.

ಅಮೆರಿಕ, ಇಸ್ರೇಲ್, ಅರ್ಜೆಂಟೀನಾ, ಜೆಕಿಯಾ, ಹಂಗೇರಿ, ನೌರು, ಪಪುವಾ ನ್ಯೂ ಗಿನಿಯಾ, ಪರಾಗ್ವೆ ಮತ್ತು ಟೋಂಗಾ ಸೇರಿದಂತೆ ಒಂಬತ್ತು ದೇಶಗಳು ಕದನ ವಿರಾಮದ ವಿರುದ್ಧವಾಗಿ ಮತ್ತು 13 ದೇಶಗಳು ಗೈರು ಹಾಜರಾಗಿವೆ. ಕದನ ವಿರಾಮದ ಪರವಾಗಿ ಒಟ್ಟು 158 ಮತಗಳು ಬಂದಿವೆ.

ಯುಎನ್ಆರ್ ಡಬ್ಲ್ಯೂಎ ನಿಷೇಧವನ್ನು ಹಿಂಪಡೆಯಬೇಕೆಂಬ ಎರಡನೇ ನಿರ್ಣಯದ ಪರವಾಗಿ 159 ಮತ, ವಿರುದ್ಧವಾಗಿ ಒಂಬತ್ತು ಮತಗಳು ಚಲಾವಣೆಯಾದವು. 11 ದೇಶಗಳು ಮತದಾನದಿಂದ ಹೊರಗುಳಿದವು.

193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಎರಡು ದಿನಗಳ ಚರ್ಚೆಯ ನಂತರ ಈ ನಿರ್ಣಯಗಳನ್ನು ಮಂಡಿಸಲಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ 14 ತಿಂಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸುವುದು ಅಗತ್ಯ ಎಂದು ರಾಷ್ಟ್ರಗಳು ಹೇಳಿದವು. ಹೆಚ್ಚುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಗಾಜಾದಲ್ಲಿ ಅಡೆತಡೆಯಿಲ್ಲದೆ ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅನುವು ಮಾಡಿಕೊಡುವಂತೆ ಪ್ರತಿನಿಧಿಗಳು ಕರೆ ನೀಡಿದರು.

ಸಾಮಾನ್ಯ ಸಭೆಯ ನಿರ್ಣಯಗಳು ಕಾನೂನುಬದ್ಧವಾಗಿಲ್ಲದಿದ್ದರೂ ಅವು ಜಾಗತಿಕ ಅಭಿಪ್ರಾಯದ ಪ್ರತಿಬಿಂಬವಾಗಿ ಗಮನಾರ್ಹ ತೂಕ ಹೊಂದಿವೆ. ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ನವೆಂಬರ್ 20 ರಂದು ಯುನೈಟೆಡ್ ಸ್ಟೇಟ್ಸ್ ವೀಟೋ ಮಾಡಿತ್ತು. ಅದರ ನಂತರ ಈಗ ಈ ವಿಷಯದ ಮೇಲೆ ಮತ ಚಲಾವಣೆಯಾಗಿದೆ.

ಸುಮಾರು 1,200 ಜನರ ಸಾವಿಗೆ ಕಾರಣವಾದ ಮತ್ತು ಸುಮಾರು 250 ಜನರನ್ನು ಒತ್ತೆಯಾಳುಗಳಾಗಿ ಅಪಹರಿಸಿದ ಅಕ್ಟೋಬರ್ 7 ರ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 100 ಕ್ಕೂ ಹೆಚ್ಚು ಹಮಾಸ್ ಉಗ್ರರೊಂದಿಗೆ ಕೆಲ ಯುಎನ್ಆರ್​ಡಬ್ಲ್ಯೂಎ ಉದ್ಯೋಗಿಗಳು ಸಂಪರ್ಕ ಹೊಂದಿದ್ದಾರೆ ಎಂದು ಇಸ್ರೇಲ್ ಆರೋಪಿಸಿದೆ.

ಇದನ್ನೂ ಓದಿ : ರಾಜೀನಾಮೆ ಘೋಷಿಸಿದ ಎಫ್​ಬಿಐ ಮುಖ್ಯಸ್ಥ: ಅಮೆರಿಕಕ್ಕೆ ಒಳ್ಳೆಯ ದಿನ ಎಂದಿದ್ದೇಕೆ ಟ್ರಂಪ್?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.