IPL 2025 Full schedule : ಕ್ರಿಕೆಟ್ ಪ್ರಿಯರು ಕುತೂಹಲದಿಂದ ಎದುರು ನೋಡುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ವೇಳಾಪಟ್ಟಿ ಪ್ರಕಟವಾಗಿದೆ. ಐಪಿಎಲ್ ಕಮಿಟಿ 18ನೇ ಆವೃತ್ತಿಯ ಸಂಪೂರ್ಣ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಹಿಂದೆಯೇ ಘೋಷಣೆ ಮಾಡಿದ್ದಂತೆ ಐಪಿಎಲ್ 2025ರ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಣಕ್ಕಿಳಿಯಲಿದೆ. ಈ ಋತುವಿನ ಕ್ವಾಲಿಫೈಯರ್ 1 ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಹೈದರಾಬಾದ್ನಲ್ಲಿ ನಡೆದರೆ ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ಜರುಗಲಿದೆ.
13 ಸ್ಥಳಗಳಲ್ಲಿ ಪಂದ್ಯ : ಈ ಬಾರಿಯೂ RCB ಸೇರಿ 10 ತಂಡಗಳು ಕಣಕ್ಕಿಳಿಯುತ್ತಿವೆ. ಒಟ್ಟು 12 ಸ್ಥಳಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ, ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಕೋಲ್ಕತ್ತಾದ ಈಡೆನ್ ಮೈದಾನ, ಮುಲ್ಲನ್ ಪೂರ್ ಕ್ರೀಡಾಂಗಣ, ಧರ್ಮಶಾಲಾ, ಮುಂಬೈನ ವಾಂಖೆಡೆ, ಏಕಾನ ಕ್ರಿಕೆಟ್ ಮೈದಾನ, ಗುವಾಹಟಿ ಮೈದಾನ, ವಿಶಾಖಪಟ್ಟಣಂ ಮೈದಾನದಲ್ಲಿ, ಸವಾಯಿ ಮಾನ್ಸಿಂಗ್ ಜೈಪುರ್, ಚೆನ್ನೈನ ಎಂಎ ಚಿದಂಬರಂ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.
74 ಪಂದ್ಯಗಳು : ಈ ಬಾರಿಯೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಇದರಲ್ಲಿ ಪ್ರತಿ ತಂಡಗಳು ತಲಾ 14 ಪಂದ್ಯಗಳನ್ನು ಆಡಲಿವೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಎ ಮತ್ತು ಬಿ ತಂಡಗಳು ತಮ್ಮ ಗುಂಪಿನಲ್ಲಿರುವ ತಂಡಗಳೊಂದಿಗೆ ಕೇವಲ 1 ಪಂದ್ಯಗಳನ್ನು ಮಾತ್ರ ಆಡಲಿವೆ. ಮತ್ತೊಂದು ಗ್ರೂಪ್ನ ತಂಡಗಳೊಂದಿಗೆ ತಲಾ ಎರಡೂ ಪಂದ್ಯಗಳನ್ನು ಆಡಲಿವೆ.
65 ದಿನ ಪಂದ್ಯಾವಳಿ : ಈಬಾರಿಯ ಐಪಿಎಲ್ ಒಟ್ಟು 65 ದಿನಗಳ ಕಾಲ ನಡೆಯಲಿದೆ. ಹಿಂದಿನಂತೆ ಶನಿವಾರ ಮತ್ತು ಭಾನುವಾರ ಡಬಲ್ ಹೆಡ್ಡರ್ ಪಂದ್ಯಗಳು ಇರಲಿವೆ.
🚨 IPL 2025 Full Schedule Released! 🚨
— Royal Challengers Bengaluru (@RCBTweets) February 16, 2025
🗓️ Here’s when, where, and who we’ll face in the #TataIPL2025. 🔥
We’re locking horns with CSK, RR, PBKS, KKR and DC twice. We play MI, GT, LSG and SRH once. 💪
Save the dates, 12th Man Army. We are ready to #PlayBold! 🙌 #ನಮ್ಮRCB… pic.twitter.com/92NpYAw8e3
ಫೈನಲ್ ಪಂದ್ಯ: ಐಪಿಎಲ್ 2025ರ ಮೊದಲ ಕ್ವಾಲಿಫೈರ್ ಪಂದ್ಯ ಹೈದರಾಬಾದ್ನಲ್ಲಿ ಮೇ 20 ರಂದು ನಡೆಯಲಿದೆ. ಮೇ 21ಕ್ಕೆ ಇಡೆನ್ ಗಾರ್ಡನ್ ಮೈದಾನದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇಲ್ಲಿ ಗೆದ್ದ ತಂಡಗಳು ಮೇ 23 ಎರಡನೇ ಕ್ವಾಲಿಫೈರ್ ಪಂದ್ಯ ಹೈದರಾಬಾದ್ನಲ್ಲಿ ನಡೆಯಲಿದೆ. ಮೇ 25ಕ್ಕೆ ಫೈನಲ್ ಪಂದ್ಯ ಈಡೆನ್ ಗಾರ್ಡನ್ನಲ್ಲಿ ಜರುಗಲಿದೆ.
RCB ಮೊದಲ ಪಂದ್ಯ : ಈ ಚುಟುಕು ಟೂರ್ನಿಯಲ್ಲಿ ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್ 22ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಇದರೊಂದಿಗೆ ಈ ಬಾರಿಯ ಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
Match | Date | Time | Venue |
RCB vs KKR | ಮಾರ್ಚ್ 22 | 7:30 PM | ಈಡೆನ್ ಗಾರ್ಡನ್, ಕೋಲ್ಕತ್ತಾ |
RCB vs CSK | ಮಾರ್ಚ್ 28 | 3:30 PM | ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ |
RCB vs GT | ಎಪ್ರಿಲ್ 2 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs MI | ಎಪ್ರಿಲ್ 7 | 3:30 PM | ವಾಂಖೆಡೆ ಸ್ಟೇಡಿಯಂ, ಮುಂಬೈ |
RCB vs DC | ಎಪ್ರಿಲ್ 10 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs RR | ಎಪ್ರಿಲ್ 13 | 7:30 PM | ಸವಾಯಿ ಮಾನ್ಸಿಂಗ್, ಜೈಪುರ |
RCB vs PBKS | ಎಪ್ರಿಲ್ 18 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs PBKS | ಎಪ್ರಿಲ್ 20 | 7:30 PM | ಮುಲ್ಲಾಂಪೂರ್ |
RCB vs RR | ಎಪ್ರಿಲ್ 24 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs DC | ಎಪ್ರಿಲ್ 27 | 7:30 PM | ಅರುಣ್ ಜೇಟ್ಲಿ, ದೆಹಲಿ |
RCB vs CSK | ಮೇ 3 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs LSG | ಮೇ 9 | 3:30 PM | ಏಕಾನ, ಲಕ್ನೋ |
RCB vs SRH | ಮೇ 13 | 7:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |
RCB vs KKR | ಮೇ 17 | 3:30 PM | ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು |