ETV Bharat / sports

ಇಂದು 'ರಾಯಲ್ಸ್'​ ಎಲಿಮಿನೇಟರ್​ ಫೈಟ್: ಆರ್​ಆರ್​ ವಿರುದ್ಧ ಆರ್​ಸಿಬಿ ದಾಖಲೆ ಹೇಗಿದೆ ಗೊತ್ತಾ? - RR vs RCB Eliminator - RR VS RCB ELIMINATOR

ಐಪಿಎಲ್‌ನಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್‌​ ನಡುವೆ ಎಲಿಮಿನೇಟರ್​ ಪಂದ್ಯ ನಡೆಯಲಿದೆ. ಪಿಚ್​, ಹೆಡ್​ ಟು ಹೆಡ್​ ವರದಿ ಇಲ್ಲಿದೆ.

ಆರ್​ಆರ್​ VS ಆರ್​ಸಿಬಿ
ಪಾಫ್ ಡುಪ್ಲೆಸಿಸ್‌, ಸಂಜು ಸ್ಯಾಮ್ಸನ್‌ (ETV Bharat)
author img

By ETV Bharat Karnataka Team

Published : May 22, 2024, 8:29 AM IST

ಹೈದರಾಬಾದ್​: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​)ನ ಇಂದಿನ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ರೋಚಕ ಕದನಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸುತ್ತಿದೆ. ಈ ಪಂದ್ಯ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮನೆಗೆ ನಡಿ ಆಗಿದೆ. ಗೆದ್ದ ತಂಡ ಸನ್‌ರೈಸರ್ಸ್​ ಹೈದರಾಬಾದ್​ ವಿರುದ್ದ 2ನೇ ಕ್ವಾಲಿಫೈಯರ್​ ಆಡಲಿದೆ.

ಒಂದೆಡೆ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಅಬ್ಬರಿಸಿ ಅಗ್ರಸ್ಥಾನಕ್ಕೇರಿದ್ದ ರಾಜಸ್ಥಾನ್ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮುಗ್ಗರಿಸಿ 3ನೇ ಸ್ಥಾನಕ್ಕೆ ತಲುಪಿದೆ. ಅದರಲ್ಲೂ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮತ್ತೊಂದೆಡೆ, ಆರಂಭಿಕ 8 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಗೆದ್ದು 7 ಪಂದ್ಯಗಳನ್ನು ಸೋತಿದ್ದ ಆರ್‌ಸಿಬಿ ಪ್ಲೇ ಆಫ್​ಗೆ ತಲುಪುವುದೇ ಕಷ್ಟ ಎಂದು ಹೇಳಲಾಗಿತ್ತು. ಆದರೆ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ ತಂಡ, ಸತತ ಆರು ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್​ ತಲುಪಿ ಇತಿಹಾಸ ಸೃಷ್ಠಿಸಿದೆ.

ಆರ್‌ಸಿಬಿ ಆಲ್ರೌಂಡರ್​ ಪ್ರದರ್ಶನ: ಕಳೆದ ಆರು ಪಂದ್ಯಗಳಲ್ಲಿ ಆರ್‌ಸಿಬಿ ಸಂಘಟಿತ ಹೋರಾಟದಿಂದ ಎದುರಾಳಿಗಳನ್ನು ಕಂಗೆಡಿಸಿದೆ. ಬ್ಯಾಟಿಂಗ್​ ವಿಭಾಗದಲ್ಲಿ ಕೊಹ್ಲಿ, ನಾಯಕ ಫಾಪ್​ ಡುಪ್ಲೆಸಿಸ್​, ರಜತ್​ ಪಾಟೀದಾರ್ ಭರ್ಜರಿ ಫಾರ್ಮ್​ನಲ್ಲಿದ್ದರೆ, ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಾರೆಗಳಾದ ಗ್ರೀನ್​, ಮ್ಯಾಕ್ಸ್‌ವೆಲ್ ಫಾರ್ಮ್​ಗೆ ಮರಳಿದ್ದು ಎದುರಾಳಿ ತಂಡಗಳನ್ನು ಕಾಡುತ್ತಿದ್ದಾರೆ. ಮತ್ತೊಂದೆಡೆ, ಬೌಲರ್‌ಗಳು ಲಯಕ್ಕೆ ಮರಳಿದ್ದು, ಬಲಿಷ್ಠ ತಂಡಗಳನ್ನು ಕಟ್ಟಿ ಹಾಕಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಹೆಡ್​ ಟು ಹೆಡ್​: ಆರ್‌ಸಿಬಿ ಮತ್ತು ಆರ್‌ಆರ್‌ ಇದುವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬೆಂಗಳೂರು 15 ಬಾರಿ ಸಾಧಿಸಿದ್ದರೆ, ರಾಜಸ್ಥಾನ್ 13 ಬಾರಿ ಗೆದ್ದಿದೆ. 3 ಪಂದ್ಯಗಳು ರದ್ದಾಗಿವೆ. ಆರ್​ಸಿಬಿ ವಿರುದ್ದ ರಾಜಸ್ಥಾನದ ಗರಿಷ್ಠ ಸ್ಕೋರ್​ 217, ಆರ್‌ಸಿಬಿ ಸ್ಕೋರ್​ 200 ಆಗಿದೆ.

ಪಿಚ್​ ಹೇಗಿದೆ?: ಅಹಮದಾಬಾದ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಅನುಕೂಲಕರವಾಗಿದ್ದರೂ ಈ ಪಿಚ್‌ನಲ್ಲಿ ಬೌಲರ್‌ಗಳೂ ಪ್ರಾಬಲ್ಯ ಸಾಧಿಸಿರುವ ಉದಾಹರಣೆಗಳಿವೆ. ಇಲ್ಲಿ ಆಡಿದ ಈ ವರ್ಷದ ಐಪಿಎಲ್‌ನ ಏಳು ಪಂದ್ಯಗಳ ಪೈಕಿ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 233/3 ಗರಿಷ್ಠ ಸ್ಕೋರ್​ ಆಗಿದ್ದರೆ 89 ಕನಿಷ್ಠ ಸ್ಕೋರ್​ ಆಗಿದೆ.

ಸಂಭಾವ್ಯ ತಂಡಗಳು-ರಾಜಸ್ಥಾನ್ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಸಂಜು ಸ್ಯಾಮ್ಸನ್ (ನಾ/ವಿ.ಕೀ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ಯಜ್ವೇಂದ್ರ ಚಹಾಲ್

ಇಂಪ್ಯಾಕ್ಟ್​ ಪ್ಲೇಯರ್ಸ್​: ನಾಂದ್ರೆ ಬರ್ಗರ್

ರಾಯಲ್​ ಚಾಲೆಂಜರ್ಸ್,​ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿ.ಕೀ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್

ಇಂಪ್ಯಾಕ್ಟ್​ ಪ್ಲೇಯರ್ಸ್​: ಸ್ವಪ್ನಿಲ್ ಸಿಂಗ್

ಪಂದ್ಯ ಆರಂಭ: ಸಂಜೆ 7.30ಕ್ಕೆ

ಇದನ್ನೂ ಓದಿ: ಐಪಿಎಲ್​ ಫೈನಲ್​ಗೆ ಲಗ್ಗೆ ಇಟ್ಟ ಕೆಕೆಆರ್​: ಸೋತರೂ ಹೈದರಾಬಾದ್​ಗೆ ಇದೆ ಇನ್ನೊಂದು ಚಾನ್ಸ್​ - KKR vs SRH match

ETV Bharat Logo

Copyright © 2025 Ushodaya Enterprises Pvt. Ltd., All Rights Reserved.